ಈ ಮಹಿಳೆಯ ಹೃದಯ ಎದೆಯಲ್ಲಿ ಅಲ್ಲ ಬೆನ್ನಿನಲ್ಲಿ ಬಡಿದುಕೊಳ್ಳುತ್ತೆ….!
ನೀವು ಜೀವಂತವಾಗಿರಲು ನಿಮ್ಮ ಹೃದಯ ಬಡಿದುಕೊಳ್ಳುವುದು ಅವಶ್ಯವಾಗಿದೆ. ಅಷ್ಟಕ್ಕೂ ಹೃದಯ ಬಡಿದುಕೊಳ್ಳುವುದು ಹೃದಯ ಭಾಗದಲ್ಲಿ. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲೊಬ್ಬ ಮಹಿಳೆಯ ಹೃದಯ ಎದೆಯಲ್ಲಿ ಅಲ್ಲ ಬೆನ್ನಿನಲ್ಲಿ ಬಡಿದುಕೊಳ್ಳುತ್ತದೆ.
ಹೌದು… ಸಾಮಾನ್ಯವಾಗಿ ಕೋಪದಲ್ಲಿ ನಾವು ಯಾರನ್ನಾದರೂ ಬೈದಾಗಾ ‘ನಿಮಗೆ ಹೃದಯವೇ ಇಲ್ಲ’ ಎಂಬ ಮಾತನ್ನ ಹೇಳುವುದು ಕೇಳಿರುತ್ತೇವೆ. ಇದು ನಿಜವಾದರೆ ಹೇಗಿರುತ್ತದೆ. ಕೊಂಚ ಯೋಚನೆ ಮಾಡಿದರೆ ಮನಸ್ಸು ಗಟ್ಟಿ ಮಾಡಿಕೊಳ್ಳುವುದು ಕಷ್ಟ ಇದೆ. ನಾವು ಜೀವಂತವಾಗಿದ್ದೇವೆ ಎಂದು ಸೂಚಿಸುವ ಹೃದಯವೇ ಇಲ್ಲೊಬ್ಬ ಮಹಿಳೆಗೆ ಇಲ್ಲ.
ಹೀಗೆ ಹೃದಯವಿಲ್ಲದ ಮಹಿಳೆಯ ಹೆಸರು ಸಾಲ್ವಾ ಹುಸೇನ್. ಅವರು ಕೃತಕ ಹೃದಯದಿಂದ ವಾಸಿಸುತ್ತಿರುವ ಮಹಿಳೆ. 39 ವರ್ಷದ ಸಾಲ್ವಾ ಹುಸೇನ್ ಯುಕೆ ಯಲ್ಲಿ ಈ ರೀತಿ ವಾಸಿಸುವ ಏಕೈಕ ಮಹಿಳೆಯಾಗಿದ್ದಾಳೆ . ಸಾಲ್ವಾ ಹುಸೇನ್ ವಿವಾಹಿತರಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಅವಳು ಯಾವಾಗಲೂ ಸಾಮಾನ್ಯ ಜೀವನವನ್ನು ನಡೆಸಲು ಪ್ರಯತ್ನಿಸುತ್ತಾಳಾರೆ ಅವರಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಅವಳಿಗೆ ತನ್ನ ಹೃದಯ ಕೆಲಸ ಮಾಡಲು ಸವಾಲೊಂದು ಎದುರಿಸಬೇಕು. ಅದೇನೆಂದರೆ ಸಾಲ್ವಾ ಅವರ ಕೃತಕ ಹೃದಯ ಕೆಲಸ ಮಾಡುವುದು ಪಂಪ್ ಬ್ಯಾಟರಿ ಮೂಲಕ. ಈ ಪಂಪ್ ಬ್ಯಾಟರಿಯನ್ನು ಸಾಲ್ವಾ ಬ್ಯಾಗ್ ನಲ್ಲಿ ಇಟ್ಟು ಬೆನ್ನಿಗೆ ಹಾಕಿಕೊಂಡಿರುತ್ತಾರೆ.
ಏನಿದು ಪಂಪ್ ಬ್ಯಾಟರಿ?
ಅವರ ಎದೆಯಲ್ಲಿ ಪವರ್ ಪ್ಲಾಸ್ಟಿಕ್ ಚೇಂಬರ್ಸ್ಗಳಿವೆ. ಅವುಗಳಿಂದ 2 ಪೈಪುಗಳು ಹೊರಬಂದಿವೆ. ಆ ಚೇಂಬರ್ಸ್ಗಳು ಪಂಪ್ ಬ್ಯಾಟರಿಗಳು ಮತ್ತು ತೆರಪಿನಿಂದ ಚಲಿಸುವ ಎಲೆಕ್ಟ್ರಿಕ್ ಮೋಟರ್ನಿಂದ ನಿಯಂತ್ರಿಸಲ್ಪಡುತ್ತವೆ. ಗಾಳಿಯ ಮೂಲಕ ಚೇಂಬರ್ಸ್ಗಳು ಹೃದಯವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇಡೀ ದೇಹಕ್ಕೆ ರಕ್ತವನ್ನು ನೀಡುತ್ತವೆ. ಹೀಗಾಗಿ ಸಾಲ್ವಾ ಅವರ ಎದೆಯ ಕೃತಕ ಹೃದಯ ಕಾರ್ಯಮಾಡಲು ಪಂಪ್, ಮೋಟಾರ್ ಮತ್ತು ಬ್ಯಾಟರಿಗಳು ಹೊರಗೆ ಇರುತ್ತದೆ. ಸಾಲ್ವಾ ಈ ಮೂರನ್ನು ತನ್ನ ಚೀಲದಲ್ಲಿ ಕೊಂಡೊಯ್ಯುತ್ತಾರೆ. ಈ ಮೂರು ಸಾಧನಗಳು ಸತತವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಕೆಲ ಬಾರಿ ಬ್ಯಾಟರಿ ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂಬ ಭಯದಿಂದ ಸಾಲ್ವಾ ಹುಸೇನ್ ಅವರ ಪತಿ ಅಲ್ ಯಾವಾಗಲೂ ಸಾಲ್ವಾ ಅವರೊಂದಿಗೆ ಇರುತ್ತಾರೆ. ಅಂತಹ ದೊಡ್ಡ ಸಮಸ್ಯೆಯಿದ್ದರೂ ಸಹ, ಸಾಲ್ವಾ ಹುಸೇನ್ ಸಂತೋಷದಿಂದ ಮತ್ತು ಯಾವಾಗಲೂ ನಗುತ್ತಿರುತ್ತಾರೆ.
ನಾವೆಲ್ಲರೂ ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ದುಃಖದಿಂದಿರುತ್ತೇವೆ. ಅನೇಕ ಬಾರಿ ಜನರು ತಮ್ಮ ಜೀವನವನ್ನು ಸಣ್ಣ ವಿಷಯಗಳಲ್ಲಿ ಕೊನೆಗೊಳಿಸುತ್ತಾರೆ. ಅಂತಹ ಎಲ್ಲ ಜನರು ಸಾಲ್ವಾ ಹುಸೇನ್ ಅವರಿಂದ ಸ್ಫೂರ್ತಿ ಪಡೆಯಬೇಕು. ಈ ಕಥೆಯನ್ನು ಓದುವ ಮೂಲಕ ನೀವು ಬದುಕಲು ಬಯಸಿದರೆ, ಜೀವನವು ಅಷ್ಟು ಕಷ್ಟವಲ್ಲ ಎಂದು ಹೇಳಬಹುದು.