ಮಹಾವಂಚಕ ಯುವರಾಜ್ ಸಿಸಿಬಿ ವಶಕ್ಕೆ! ಬಿಜೆಪಿ ಪ್ರಭಾವಿ ನಾಯಕರ ಹೆಸರಲ್ಲಿ ವಂಚನೆ..!

ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಬಿಜೆಪಿ ನಾಯಕರು ಪರಿಚಯವಿದ್ದಾರೆಂದು ಜನರಿಗೆ ಮೋಸ ಮಾಡುತ್ತಿದ್ದ ಯುವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ಯುವರಾಜ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ 91 ಕೋಟಿ ಮೌಲ್ಯದ ಚೆಕ್ ಹಾಗೂ ಲಕ್ಷಗಟ್ಟಲೆ ನಗದು ವಶಕ್ಕೆ ಪಡೆದಿದ್ದಾರೆ.

ಯಡಿಯೂರಪ್ಪ ಹಾಗೂ ಅಮಿತ್ ಶಾ ಹೀಗೆ ಹಿರಿಯ ನಾಯಕರು ತನಗೆ ಆಪ್ತರಾಗಿದ್ದಾರೆ ಎಂದು ಟೆಂಡರ್ ತೆಗೆದುಕೊಳ್ಳುತ್ತಿದ್ದ ಯುವರಾಜ್ ಅವರಿಂದ ಡೀಲ್ ಮಾಡಿಸಿಕೊಳ್ಳುವುದಾಗಿ ಹಣ ವಂಚಿಸುತ್ತಿದ್ದ. ಈಗಾಗಲೇ ಓರ್ವನಿಗೆ ಕೋಟಿ ರೂಪಾಯಿ ವಂಚಿಸಿದ ಆರೋಪದ ಯುವರಾಜ್ ಮೇಲಿದೆ. ಜೊತೆಗೆ ತನ್ನ ಡ್ರೈವರ್ ಗೆ ತಿಳಿಯದಂತೆ ಖಾತೆ ಮೂಲಕ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡಿದ್ದಾನೆ ಎನ್ನುವುದು ತನಿಖೆ ವೇಳೆ ತಿಳಿದಿದೆ.

ದೆಹಲಿಯಲ್ಲಿ ಬೀಡುಬಿಟ್ಟಿದ್ದ ಯುವರಾಜ್ ರಾಜ್ಯ ನಾಯಕರನ್ನು ಸಂಪರ್ಕಿಸಿ ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡಿದ್ದನು. ಕರ್ನಾಟಕದ ಭವನಕ್ಕೂ ಭೇಟಿ ಮಾಡುತ್ತಿದ್ದ. ಇದೇ ಫೋಟೋಗಳನ್ನು ಬಂಡವಾಳವಾಗಿಟ್ಟುಕೊಂಡು ರಾಷ್ಟ್ರೀಯ ಮಟ್ಟದ ಕಾಂಟ್ಯಾಕ್ಟ್ ಇದೆ ಎಂದು ಹೇಳಿಕೊಂಡು ವಂಚಿಸುತ್ತಿದ್ದನು. ಹಲವಾರು ಉದ್ಯಮಿಗಳಿಗೆ ವಂಚನೆ ಮಾಡಿದ ಆರೋಪ ಕೂಡ ಈತನ ಮೇಲಿದೆ.

ದೆಹಲಿಯಲ್ಲಿಯೇ ಹೆಚ್ಚು ಉಳಿದುಕೊಳ್ಳುತ್ತಿದ್ದ ಯುವರಾಜ್ ರಾಜ್ಯದಲ್ಲಿ ಕೆಲ ದಿನಗಳವರಗೆ ತಂಗಿರುತ್ತಿದ್ದ. ಬಿಜೆಪಿ ನಾಯಕರು ಪರಿಚಯವಿದ್ದಾರೆಂದು ಫೋಟೋ ತೋರಿಸಿ ಜನರಿಗೆ ನಂಬಿಸುತ್ತಿದ್ದ ಎನ್ನಲಾಗುತ್ತಿದ್ದ ಇದನ್ನೇ ಆಧಾರವಾಗಿಟ್ಟುಕೊಂಡ ಸಿಸಿಬಿ ಇಂದು ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights