ಕಾಂಗ್ರೆಸ್ ಮತ್ತು ಬಿಜೆಪಿಯ ಮಗು ಜೆಡಿಎಸ್; ಮಿಠಾಯಿ ತೋರಿಸಿದವರ ಹಿಂದೆ ಹೋಗುತ್ತದೆ: ಹಳ್ಳಿಹಕ್ಕಿ ವಿಶ್ವನಾಥ್
ವಿಧಾನ ಪರಿಷತ್ನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆಗೆ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿರುವ ಬಗ್ಗೆ ಎಂಎಲ್ಸಿ ಹಳ್ಳಿಹಕ್ಕಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯ ಮಗು ಜೆಡಿಎಸ್. ಆ ಪಕ್ಷ ಯಾರು ಮಿಠಾಯಿ ತೋರಿಸುತ್ತಾರೋ ಆ ಕೆಡೆಗೆ ಹೋಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಸಾರ್ವಭೌಮತ್ವದ ಹೆಬ್ಬಾಗಿಲು ಪಾರ್ಲಿಮೆಂಟ್ಗೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸುತ್ತಾರೆ. ಅಂತಹ ಸಾರ್ವಭೌಮತ್ವದ ಸದನದ ಬಾಗಿಲನ್ನು ಬೂಟು ಕಾಲಲ್ಲಿ ಒದೆಯುತ್ತಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ದೊಡ್ಡದೊಡ್ಡವರೇ ನಿನ್ನೆ ಪರಿಷತ್ನಲ್ಲಿ ಸದನದ ಗೌರವವನ್ನು ಕಳೆದಿದ್ದಾರೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ್ಚಂದ್ರಶೆಟ್ಟಿ ನಾನು ತುಂಬಾ ವರ್ಷಗಳ ಸ್ನೇಹಿತರು. ಬಹಳ ಸ್ವಾಭಿಮಾನಿ ವ್ಯಕ್ತಿ ಅವರು. ಒಂದು ತಿಂಗಳ ಹಿಂದೆಯೇ ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ರು. ಆದ್ರೆ ನಾವೆಲ್ಲ ಪಕ್ಷದ ನಿಯಂತ್ರಣದಲ್ಲಿದ್ದೀವಿ. ಬಹಳ ನೋವಿನ ಸಂಗತಿ ಇದು. ಇದು ಆಗಬಾರದು ಎಂದು ಅವರು ಹೇಳಿದ್ದಾರೆ.
ಈ ಘಟನೆಯಿಂದ ನಾಡಿನ ಜನತೆಗೆ ನೋವಾಗಿದೆ. ನಾಡಿನ ಜನತೆ ಬಳಿ ಕ್ಷಮೆ ಕೋರುತ್ತೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಗ್ರಾಮ ಪಂ.ಗೆ ಒತ್ತಾಯ; 07 ಸ್ಥಾನಗಳಿಗೆ ನಾಮಪತ್ರವನ್ನೇ ಸಲ್ಲಿಸದ ಗ್ರಾಮಸ್ಥರು!

