FACT CHECK | ಸೈನಿಕನ ತಾಯಿ ಎಳನೀರು ವ್ಯಾಪಾರ ಮಾಡುವಾಗ ನಡೆದ ಅನಿರೀಕ್ಷಿತ ಘಟನೆ ಎಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಹಂಚಿಕೆ
ದೇಶಸೇವೆ ಮಾಡಲು ಸೇನೆ ಸೇರಿದ ಮಗನ ತಾಯಿಯೊಬ್ಬರು ರಸ್ತೆ ಬದಿಯಲ್ಲಿ ಎಳನೀರು ವ್ಯಾಪರ ಮಾಡಿ ಸ್ವಾವಲಂಬಿ ಬದುಕು ಸಾಗಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರೈಲ್ವೆ ಸ್ಟೇಷನ್ ಬಳಿ ಎಳನೀರು ಮಾರುವ ಈ ಮಹಾತಾಯಿಯ ಮಗ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ರಜೆ ಮೇಲೆ ತನ್ನ ತಾಯಿಗೆ ಅರಿವಿಲ್ಲದಂತೆ ಬಳಿ ಬಂದು ಭೇಟಿಯಾದ ಕ್ಷಣ. ತಾಯಿ- ಮಗನ ಭಾವನಾತ್ಮಕ ದೃಶ್ಯ ನೋಡಿ ಕಣ್ಣಲ್ಲಿ ನೀರು ಸುರಿಯಿತು’’ ಎಂದು ಬರೆದುಕೊಂಡಿದ್ದಾರೆ.
ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋದ ಕೊನೆಯಲ್ಲಿ, “ಈ ವಿಡಿಯೋವನ್ನು ಮನರಂಜನಾ ಉದ್ದೇಶಕ್ಕಾಗಿ ಮಾಡಲಾಗಿದೆ ಮತ್ತು ಇದು ರೀಲ್ ವಿಡಿಯೋ” ಎಂದು ನಮೂದಿಸಿದ್ದಾರೆ. ಹೀಗಾಗಿ ಇದು ಮನರಂಜನಾ ಉದ್ದೇಶಕ್ಕಾಗಿ ಮಾಡಿದ ವಿಡಿಯೋ ಎಂದು ಸ್ಪಷ್ಟಪಡಿಸುತ್ತದೆ.
ವಿಡಿಯೋದ ಒಂದು ಭಾಗವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಕಳೆದ ನವೆಂಬರ್ 12 ರಂದು ನಟಿ ಸಂಜನಾ ಗಲ್ರಾನಿ ಇದೇ ವೈರಲ್ ವೀಡಿಯೊವನ್ನು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಅವರು ಈ ವಿಡಿಯೋವನ್ನು ಮನೋರಂಜನಾ ಉದ್ದೇಶಕ್ಕಾಗಿ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಎಳನೀರು ಮಾರುವ ತನ್ನ ತಾಯಿ ಎದುರು ಬಂದು ನಿಲ್ಲುವ ಸೈನಿಕ ಮಗನನ್ನು ಕಂಡು ಆಶ್ಚರ್ಯಚಕಿತಳಾಗುವ ತಾಯಿ ಇದೊಂದು ಅನೀರೀಕ್ಷಿತ ಭಾವನಾತ್ಮಕ ಸಂದರ್ಭ ಎಂದು ಸ್ಕ್ರಿಪ್ಟ್ ಮಾಡಿದ ವಿಡಿಯೋವನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವೋಟ್ ಹಾಕಲು ಗನ್ ಹಿಡಿದು ಬಂದಿದ್ರಾ ನಟ ಸಲ್ಮಾನ್ ಖಾನ್ ?

