ತಂದೂರ್ ರೋಟಿ ಮೇಲೆ ಉಗುಳಿದ ಭಟ್ಟ : ಈ ವೈರಲ್ ವೀಡಿಯೋ ಎಲ್ಲಿಯದ್ದು?

ಹೈದರಾಬಾದ್ ತನ್ನ ವೈವಿಧ್ಯಮಯ ಆಹಾರ ಸಂಸ್ಕೃತಿಗೆ ಜನಪ್ರಿಯವಾಗಿದೆ. ಓಲ್ಡ್ ಸಿಟಿ ಪ್ರದೇಶದ ಸಾಂಪ್ರದಾಯಿಕ ‘ನಾನ್ ಕಿ ರೋಟಿ’ ಸ್ಥಳೀಯರಿಗೆ ನೆಚ್ಚಿನ ಆಹಾರ. ಸದ್ಯ ತಂದೂರ್ ರೋಟಿ ಮೇಲೆ ಉಗುಳುವ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯನ್ನು ಹೈದರಾಬಾದ್ ನಂಪಲ್ಲಿಯ ರೆಡ್ ರೋಸ್ ಪ್ಯಾಲೇಸ್‌ನಲ್ಲಿ ನಡೆದಿದೆ ಎಂದು ದಾಖಲಿಸಲಾಗಿದೆ.

ವೀಡಿಯೊದ ಜೊತೆಗೆ ಬರೆಯಲಾದ ಹಿಂದಿಯಲ್ಲಿರುವ ಶೀರ್ಷಿಕೆ, “ನಾಂಪಲ್ಲಿಯ ರೆಡ್ ರೋಸ್‌ನಲ್ಲಿ ನಾನ್ ಕಿ ರೊಟಿಯನ್ನು ತಯಾರಿಸುವ ವ್ಯಕ್ತಿಯು ಪ್ರತಿ ರೊಟ್ಟಿಯ ಮೇಲೆ ಉಗುಳುತ್ತಾನೆ” ಎಂದು ಹೇಳುತ್ತದೆ.

ಆದರೆ ಈ ವಿಡಿಯೋ ನಿಜವಾಗಿದ್ದರೂ, ಈ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಾಗಲಿ ಅಥವಾ ಹೈದರಾಬಾದ್‌ನಲ್ಲಾಗಲಿ ನಡೆದಿಲ್ಲ. “ಹಿಂದೂಸ್ತಾನ್ ಟೈಮ್ಸ್” ವರದಿಯ ಪ್ರಕಾರ, ಮೀರತ್‌ನ ಅರೋಮಾ ಗಾರ್ಡನ್‌ನಲ್ಲಿ ಈ ಘಟನೆ ನಡೆದಿದ್ದು, ವೀಡಿಯೊದಲ್ಲಿರುವ ವ್ಯಕ್ತಿಯನ್ನು ಸೊಹೈಲ್ ಎಂದು ಗುರುತಿಸಲಾಗಿದೆ. ವ್ಯಕ್ತಿಯನ್ನು ಮೀರತ್ ಪೊಲೀಸರು ಗುರುತಿಸಿ ಬಂಧಿಸಿದ್ದಾರೆ.

“ಇಂಡಿಯಾ ಟುಡೆ” ಯ ಫೆಬ್ರವರಿ 22 ರ ವರದಿಯ ಪ್ರಕಾರ, ವಿಡಿಯೋ ವೈರಲ್ ಆದ ಕೂಡಲೇ ಹಿಂದೂ ಜಾಗ್ರನ್ ಮಂಚ್ ಕಾರ್ಯಕರ್ತರು ಮೀರತ್‌ನ ಎಲ್‌ಎಲ್‌ಆರ್‌ಎಂ ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ವ್ಯಕ್ತಿಯನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

ಆದ್ದರಿಂದ ವೈರಲ್ ವಿಡಿಯೋ ಹೈದರಾಬಾದ್‌ ಅಲ್ಲ ಮೀರತ್‌ನಿಂದ ಬಂದಿದ್ದು, ರೋಟಿ ಮೇಲೆ ಉಗುಳುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights