FACT CHECK | ಗೌತಮ್ ಅದಾನಿಯನ್ನು ಬಂಧಿಸಲಾಗಿದೆ ಎಂಬುದು ನಿಜವೇ?
ಸೌರ ವಿದ್ಯುತ್ ಯೋಜನೆ ಗುತ್ತಿಗೆ ಸಂಬಂಧಿತ ಬಹುಕೋಟಿ ಲಂಚ ಪ್ರಕರಣದಲ್ಲಿ ಅಮೆರಿಕ ಕೋರ್ಟ್ನಿಂದ ಸಂಕಷ್ಟ ಎದುರಿಸುತ್ತಿರುವ ಉದ್ಯಮಿ ಗೌತಮ್ ಅದಾನಿಯನ್ನು ಬಂಧಿಸಲಾಗಿದೆ ಎಂದು ಪ್ರತಿಪಾದಿಸಿ ಅದಾನಿಯನ್ನು ಬಂಧಿಸಿ ಕರೆದೊಯ್ಯುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಮಂದಿ ಅಮೆರಿಕದ ಹೂಡಿಕೆದಾರರ ಮೇಲೆ ಪರಿಣಾಮ ಬೀರುವಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಯೋಜನೆಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ $250 ಮಿಲಿಯನ್ಗಿಂತಲೂ ಹೆಚ್ಚಿನ ಮೊತ್ತವನ್ನು ಲಂಚವನ್ನು ನೀಡಿದ್ದಾರೆ ಎಂದು ಆರೋಪಿಸಿ ಅದಾನಿಯನ್ನು ಪೋಲಿಸರು ಬಂಧಿಸಿದ್ದಾರೆ ಎಂಬ ಪೋಸ್ಟರ್ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅದಾನಿ ಗ್ರೀನ್ನ ನಿರ್ದೇಶಕರ ವಿರುದ್ಧ ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಮತ್ತು ಅಮೇರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಮತ್ತು ಅದನ್ನು ನಿರಾಕರಿಸುತ್ತದೆ ಎಂದು ಅದಾನಿ ಗ್ರೂಪ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಗೌತಮ್ ಅದಾನಿಯನ್ನು ಬಂಧಿಸಲಾಗಿದೆಯೇ ಎಂದು ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಗೌತಮ್ ಅದಾನಿ ಬಂಧನದ ಕುರಿತು ಪರಿಶೀಲಿಸಲು ಸರ್ಚ್ ಮಾಡಿದಾಗ, ಭಾರತೀಯ ಉದ್ಯಮಿಯ ಆಪಾದಿತ ಬಂಧನದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪೋಟೊದಲ್ಲಿ ಕಂಡುಬರುವ ಜನರ ಮುಖಗಳು ವಿರೂಪಗೊಂಡಿವೆ. ಆರು ಬೆರಳುಗಳನ್ನು ಹೊಂದಿರುವ ಅಧಿಕಾರಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಈ ವೈರಲ್ ಚಿತ್ರವನ್ನು ಹಲವಾರು AI ( Artificial intelligence) ಪತ್ತೆ ಸಾಧನಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಇದು ಕೃತಕ ಬುದ್ಧಿಮತ್ತೆಯ ಚಿತ್ರವೆಂದು ತೀರ್ಮಾನಿಸಲಾಗಿದೆ. ಉದಾಹರಣೆಗೆ, ಹೈವ್ ಮಾಡರೇಶನ್ 99.9% ಸಂಭವನೀಯತೆಯನ್ನು ಪತ್ತೆಹಚ್ಚಿದೆ, ಚಿತ್ರವು AI- ರಚಿತ ಅಥವಾ ಡೀಪ್ಫೇಕ್ ವಿಷಯವನ್ನು ಒಳಗೊಂಡಿದೆ. ಇನ್ನೊಂದು ಸಾಧನ, ಇಲ್ಯುಮಿನಾಟಿ, AI ಮೂಲದ ಚಿತ್ರ 95.1% ಸಾಧ್ಯತೆಯನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ.
AIನಿಂದ ದೊರೆತ 99% ಸಾಧ್ಯತೆಯನ್ನು ಹೊಂದಿದ ಅದಾನಿಯ ಉದ್ದೇಶಿತ ಪೋಟೊ ಎಂದು ಸೈಟ್ ಎಂಜಿನ್ ತೀರ್ಮಾನಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕದ ಪೊಲೀಸ್ ಅಧಿಕಾರಿಗಳು ಗೌತಮ್ ಅದಾನಿಯನ್ನು ಬಂಧಿಸಿದ್ದಾರೆ ಎಂದು AIನಿಂದ ರಚಿಸಲಾದ ಪೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೊಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ವೋಟ್ ಹಾಕಲು ಗನ್ ಹಿಡಿದು ಬಂದಿದ್ರಾ ನಟ ಸಲ್ಮಾನ್ ಖಾನ್ ?

