ಬೆಳಗಾವಿಯಲ್ಲಿ ಪ್ರಜ್ಞಾಹೀನ ಅಪರಿಚಿತ ಬಾಲಕಿ ಪತ್ತೆ : ಬ್ಲ್ಯಾಕ್ ಮ್ಯಾಜಿಕ್‌ಗೆ ಒಳಗಾಗಿರುವ ಶಂಕೆ!
ಬೆಳಗಾವಿಯಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬ್ಲ್ಯಾಕ್ ಮ್ಯಾಜಿಕ್‌ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ವಾರ ಸೆಪ್ಟೆಂಬರ್ 24 ರಂದು ಉತ್ತರ ಕರ್ನಾಟಕದ ಬೆಳಗಾವಿಯ ಹಲ್ಯಾಲ್ ಗ್ರಾಮದಲ್ಲಿ ಬಟ್ಟೆಯ ತುಂಡಿನಲ್ಲಿ ಸುತ್ತಿ ಕಬ್ಬಿನ ಗದ್ದೆಯಲ್ಲಿ ಎಸೆಯಲಾಗಿದ್ದ ಬಾಲಕಿ ಪತ್ತೆಯಾಗಿದ್ದಳು. ಆಕೆಯ ಖಾಸಗಿ ಭಾಗಗಳಲ್ಲಿ ಸಿಗರೇಟ್ ತುಂಡುಗಳಿಂದ ಸುಟ್ಟ ಗಾಯದ ಗುರುತು ಕಂಡುಬಂದಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ತೋರುತ್ತಿಲ್ಲ.
ಈ ಎರಡು ವರ್ಷದ ಬಾಲಕಿಯ ಗುರುತು ಪೊಲೀಸರು ರಹಸ್ಯವಾಗಿ ಬೇಟೆಯಾಡಿದರೂ ಈಗಲೂ ನಿಗೂಢವಾಗಿಯೇ ಉಳಿದಿದೆ.
ಪೋಲಿಸ್ ಮೂಲಗಳ ಪ್ರಕಾರ ಸುಟ್ಟ ಗುರುತುಗಳ ಮಾದರಿಯು ಮಾಟಮಂತ್ರವನ್ನು ಸೂಚಿಸುತ್ತದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಗಾಯಗಳ ಮೇಲೆ ಕಂಡುಬಂದ ರಾಸಾಯನಿಕಗಳ ಸಿಂಪಡೆಸುವಿಕೆಯ ಕುರುಹುಗಳನ್ನು ಬಹಿರಂಗಪಡಿಸಿದೆ. ಸಾಮಾನ್ಯವಾಗಿ ಮಾಟಮಂತ್ರದಲ್ಲಿ ಬಳಸುವ ವಸ್ತುಗಳ ಆಕೆಯ ಮೇಲಿರುವುದು ದೃಢಪಟ್ಟಿವೆ.
ಬಾಲಕಿಗೆ ಈಗ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಜ್ಞೆ ಮರಳಿದೆ. ಆದರೆ ಆಕೆಚಿಕ್ಕ ವಯಸ್ಸಿನವಳಾದ ಕಾರಣದಿಂದಾಗಿ ಘಟನೆಯ ವಿವರ ನೀಡಲು ಸಾಧ್ಯವಾಗುತ್ತಿಲ್ಲ. ಆಕೆಯ ಗುರುತನ್ನು ಗುರುತಿಸಲು ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ತೆಲಂಗಾಣದಂತಹ ಗಡಿ ರಾಜ್ಯಗಳಲ್ಲಿ ಆಕೆಯ ಫೋಟೋವನ್ನು ವ್ಯಾಪಕವಾಗಿ ಪೊಲೀಸರು ಕಂಚಿಕೊಂಡಿದ್ದಾರೆ.
ಆಕೆಯ ವಯಸ್ಸಿನ ಮಕ್ಕಳ ಕಾಣೆಯಾದ ಬಗ್ಗೆ ಅವರು ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಬಾಲಕಿಯ ಪೋಷಕರ ಬಗ್ಗೆ ಸುಳಿವು ಸಿಕ್ಕಿಲ್ಲ.
ಆಕೆಯ ಪೋಷಕರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಕರಣವನ್ನು ಖುದ್ದು ಮೇಲ್ವಿಚಾರಣೆ ನಡೆಸುತ್ತಿರುವ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹೇಳಿದರು.