ಬ್ರಿಟನ್ ನಲ್ಲಿ ಪೆಟ್ರೋಲ್ ಕ್ಷಾಮ : ಬಹುತೇಕ ಬಂಕ್ ಗಳು ಖಾಲಿ ಖಾಲಿ!

ಬ್ರಿಟನ್ ಜಗತ್ತಿನ ಶ್ರೀಮಂತ ದೇಶ. ಆದರೆ ಬ್ರಿಟನ್ ನಲ್ಲಿ ಪೆಟ್ರೋಲ್ ಕ್ಷಾಮ ಎದುರಾಗಿದೆ. ಬ್ರಿಟನ್ ಬೀದಿ ಬೀದಿಯಲ್ಲಿ  ಪೆಟ್ರೋಲ್ ಸಿಗದೇ ಕಿಲೋ ಮೀಟರ್ ಗಟ್ಟಲೇ ಕಾದು ಕುಳಿತಿದ್ದಾರೆ ಜನ. ನಿತ್ಯ ಪೆಟ್ರೋಲ್ ಬಂಕ್ ನಲ್ಲಿ ಒಂದಲ್ಲಾ ಒಂದು ರೀತಿ ಜಗಳ ಹಲ್ಲೆ ನಡೆದಿವೆ. ಪೆಟ್ರೋಲ್ ಸಿಗುತ್ತೋ ಇಲ್ವೋ ಎನ್ನುವ ಆತಂಕದಲ್ಲಿ ಬ್ರಿಟನ್ ಜನ ಬಡಿದಾಡುವ ಸ್ಥಿತಿ ನಿರ್ಮಾಣವಾಗಿದೆ.

90 ಶೇ ಬಂಕ್ ನಲ್ಲಿ ಪೆಟ್ರೋಲ್ ಇಲ್ಲ. ತೈಲಕ್ಕಾಗಿ ಜನ ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ನೋಡಿದ್ರೂ ವಾಹನಗಳು ಸಾಲುಗಟ್ಟಿ ನಿಂತಿವೆ. ದೇಶದಲ್ಲಿ ಜನ ನೂರಾರು ಕಿ.ಮೀ ಅಲೆದ್ರು ಪೆಟ್ರೋಲ್ ಸಿಗುತ್ತಿಲ್ಲ. ಬಹುತೇಕ ಬಂಕ್ ಗಳಲ್ಲಿ ಪೆಟ್ರೋಲ್ ಮರಿಚಿಕೆಯಾಗಿದೆ. ಹಾಗಂತ ಬ್ರಿಟನ್ ನಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ಭಾವಿಸಬೇಡಿ.

ಇದಕ್ಕೆ ಕಾರಣ ಬ್ರಿಟನ್ ನ ಪೆಟ್ರೋಲ್ ಬಂಕ್ ಗಳಿಗೆ ಪೆಟ್ರೋಲ್ ಸಾಗಿಸಲು ಚಾಲಕರು ಸಿಗುತ್ತಿಲ್ಲ. 1 ಲಕ್ಷ ಚಾಲಕರ ಕೊರತೆ ಎದ್ದು ಕಾಣುತ್ತಿದೆ. ಚಾಲಕರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೆಟ್ರೋಲ್ ಟ್ಯಾಂಕ್ ಬಸ್ ಓಡಿಸಲು ಸೈನಿಕರನ್ನು ನಿಯೋಜಿಸಿದೆ ಬ್ರಿಟನ್ ಸರ್ಕಾರ.

ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬಂದ ಬಳಿಕ 13 ಲಕ್ಷಕ್ಕೂ ಅಧಿಕ ವಿದೇಶಿ ಕಾರ್ಮಿಕರು ದೇಶ ತೊರೆದಿದ್ದಾರೆ. ಹೀಗಾಗಿ 2 ವರ್ಷದಲ್ಲಿ ಬ್ರಿಟನ್ 1 ಲಕ್ಷಕ್ಕೂ ಅಧಿಕ ಟ್ರಕ್ ಚಾಲಕರನ್ನು ಕಳೆದುಕೊಂಡಿದೆ. ಅಲ್ಲದೇ ಕೊರೊನಾ ಕಾರಣದಿಂದ ತವರಿಗೆ ಮರಳಿದವರು ಇನ್ನೂ ಕೆಲಸಕ್ಕೆ ಬಂದಿಲ್ಲ. ಪರವಾನಗಿ ವಿತರಣೆಯೂ ನನೆಗುದಿಗೆ ಬಿದ್ದಿದೆ. ಹೀಗಾಗಿ ಹೊಸ ರೀತಿಯ ತೈಲ ಬಿಕ್ಕಟ್ಟು ಆರಂಭವಾಗಿದೆ.

ಇದರಿಂದ ಬ್ರಿಟನ್ ಸರ್ಕಾರ ಸೈನಿಕರೊಂದಿಗೆ 5000 ವಿದೇಶಿ ಟ್ರಕ್ ಚಾಕಲರನ್ನು ಕರೆತರಲು ತರ್ತು ವೀಸಾ ನೀಡಲು ನಿರ್ಧರಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.