‘ವಲಸೆ ಬಿಜೆಪಿಗರು ಸಚಿವರಾಗಿಯೇ ಮುಂದುವರೆಯುತ್ತಾರೆ’ – ಮುರುಗೇಶ್ ನಿರಾಣಿ

ಸಿಎಂ ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲ ಮೂಡಿಸಿದ್ದು ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಗೆ ಇನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ವಲಸೆ ಬಿಜೆಪಿಗರಿಗೆ ಸಿಎಂ ಬದಲಾವಣೆ ವಿಚಾರ ಮಾತ್ರ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಸಿಎಂ ಬದಲಾದರೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ನಿರಾಣಿ ವಲಸೆ ಬಿಜೆಪಿಗರು ಅಭಯ ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ” ವಲಸೆ ಬಿಜೆಪಿಗರು ಆತಂಕ ಪಡುವ ಹಾಗಿಲ್ಲ. ಅವರೇ ಸಚಿವರಾಗಿ ಮುಂದುವರೆಯುತ್ತಾರೆಂದು” ಬಾಂಬೆ ಫ್ರೆಂಡ್ಸ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಹೌದು.. ಮೈತ್ರಿ ಸರ್ಕಾರವನ್ನು ತೊರೆದು ಬಿಜೆಪಿ ಸೇರಿದ ಶಾಸಕರಿಗೀಗ ತಮ್ಮ ಸ್ಥಾನದ ಬಗ್ಗೆ ಆತಂಕ ಶುರುವಾಗಿದೆ. ಸಚಿವ ಸ್ಥಾನಕ್ಕಾಗಿ ಬಿಎಸ್ ಯಡಿಯೂರಪ್ಪ ನವರನ್ನು ಅಧಿಕಾರಕ್ಕೆ ತಂದ ಬಾಂಬೆ ಫ್ರೆಂಡ್ಸ್ ಗೀಗ ಸಚಿವ ಸ್ಥಾನ ಕೈತಪ್ಪುವ ಗೊಂದಲ ಶುರುವಾಗಿದೆ. ಹೀಗಾಗಿ ಪದೇ ಪದೇ ಸಿಎಂ ಭೇಟಿ ಮಾಡುತ್ತಿರುವ ಬಾಂಬೆ ಫ್ರೆಂಡ್ಸ್ ಮುಖದಲ್ಲಿ ತಮ್ಮ ಸ್ಥಾನದ ಬಗ್ಗೆ ಇರುವ ತಳಮಳ ಇದ್ದು ಕಾಣುತ್ತಿದೆ. ಇದರ ಬೆನ್ನಲ್ಲೆ ಸಚಿವ ಮುರುಗೇಶ್ ನಿರಾಣಿ ಮುಂದಿನ ಸಿಎಂ ರೇಸ್ ನಲ್ಲು ಮುಂಚುಣಿಯಲ್ಲಿರುವ ಮಾತುಗಳು ಚುರುಕೊಗೊಂಡಿವೆ.

ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿರಾಣಿ, ಬಿಜೆಪಿ ಪಕ್ಷದ 120 ಜನ ಶಾಸಕರೆಲ್ಲರೂ ಸಿಎಂ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ನಿರೀಕ್ಷೆಯಿಲ್ಲದೆ ಪಕ್ಷ ನನಗೆ ಹಲವು ಜವಾಬ್ದಾರಿ ನೀಡಿದೆ. ಮೊದಲ ಬಾರಿ ಶಾಸಕನಾದಾಗಲೇ ಹೈಕಮಾಂಡ್ ನನ್ನನ್ನು ಸಚಿವನನ್ನಾಗಿ ಮಾಡಿದೆ. ಈಗಲು ಮಹತ್ವದ ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಯಾವುದೇ ಹುದ್ದೆ ಅಪೇಕ್ಷೆ ಮಾಡಿದವನಲ್ಲ, ಈಗಲೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತಾವು ದೇವಸ್ಥಾನಕ್ಕೆ ಬಂದಿದ್ದು ನೆಮ್ಮದಿಗಾಗಿ ಎಂದಿದ್ದಾರೆ.

 

Spread the love

Leave a Reply

Your email address will not be published. Required fields are marked *