Bigg Boss: ಕಷ್ಟಪಟ್ಟು ಗೆದ್ದ ಮುತ್ತುಗಳನ್ನು ಶಮಂತ್ ಗೆ ಕೊಟ್ಟು ಕಣ್ಣೀರಿಟ್ಟ ಪ್ರಶಾಂತ್..!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಲ್ಲಿ ಆಟ ಚುರುಕಾಗಿದೆ. ಗೆಲ್ಲುವ ಛಲ ಹೆಚ್ಚಾಗಿದೆ. ಹೀಗಾಗಿ ಸಾಧ್ಯವಾದಷ್ಟು ಎಫರ್ಟ್ ಹಾಕಿ ಆಟಗಳನ್ನು ಆಡುತ್ತಿದ್ದಾರೆ. ಇದರ ಮಧ್ಯೆ ಒಬ್ಬರಿಗೆ ಮತ್ತೊಬ್ಬರ ಮೇಲೆ ಪ್ರೀತಿ ಹೆಚ್ಚಾಗಿದೆ.

ಹೌದು… ಟಾಸ್ಕ್ ನಲ್ಲಿ ಗೆದ್ದ ಮುತ್ತುಗಳನ್ನೆಲ್ಲಾ ಶಮಂತ್ ಗೆ ಕೊಟ್ಟ ಪ್ರಶಾಂತ್ ಸಂಬರಗಿ ಕಣ್ಣೀರು ಹಾಕಿದ್ದಾರೆ. ಶಮಂತ್ ಗೆಲ್ಲುವ ಆಸೆಯಿಂದ ಮುತ್ತುಗಳನ್ನು ಪ್ರಶಾಂತ್ ಶಮಂತ್ ಗೆ ಕೊಟ್ಟಿದ್ದು ಶಮಂತ್ ಕಣ್ಣಲ್ಲೂ ನೀರು ತರಿಸಿದೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಫೇವರ್ ಗೇಮ್ ಆಡುವುದು ಸಾಮಾನ್ಯವಾಗಿದೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಬಿಟ್ರೆ ಮಂಜು ಹಾಗೂ ದಿವ್ಯಾ ಸುರೇಶ್ ಫೇವರ್ ಗೇಮ್ ಆಡುತ್ತಲೇ ಇರುತ್ತಾರೆ. ಆದರೆ ಇನ್ನುಳಿದವರು ಮಾತ್ರ ಯಾರು ಯಾರಿಗೋಸ್ಕರ ಆಡಬೇಕು? ಅಥವಾ ತಮಗೋಸ್ಕರ ಆಡಬೇಕಾ? ಅನ್ನೋ ಗೊಂದಲದಲ್ಲಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ, ಮಂಜು ಹಾಗೂ ದಿವ್ಯಾ ಸುರೇಶ್ ಆಟದಲ್ಲಿ ಸಾಧ್ಯವಾದಷ್ಟು ಎಫರ್ಟ್ ಹಾಕುತ್ತಾರೆ. ಹೀಗಾಗಿ ಇವರು ಯಾರ ಫೇವರ್ ಆದ್ರೂ ಹೈಲೇಟ್ ಆಗುತ್ತಿಲ್ಲ.

ನಿನ್ನೆ ಬಿಗ್ ಬಾಸ್ ಹೇಳಿದಂತೆ ಮನೆಯ ಸದಸ್ಯರು ತಾವು ಆಡಿ ಗೆದ್ದ ಮುತ್ತುಗಳನ್ನು ಮತ್ತೊಮ್ಮ ಸದಸ್ಯರೊಂದಿಗೆ ಹಂಚಿಕೊಳ್ಳಲು ಅರ್ಧ ಗಂಟೆ ಸಮಯ ನೀಡಿದ್ದರು. ಹೀಗೆ ಹಂಚಿಕೊಂಡ ಬಳಿಕ ಯಾವ ಮೂರು ಸ್ಪರ್ಧಿಗಳಲ್ಲಿ ಹೆಚ್ಚು ಮುತ್ತುಗಳಿರುತ್ತೋ ಅವರಿಗೆ ಕ್ರಮೇಣ ಹೆಚ್ಚು ಅಂಕ ನಿಗಧಿಯಾಗಿತ್ತು. ಹೀಗಾಗಿ ಈ ಆಟದಲ್ಲಿ ಯಾರು ಯಾರಿಗೆಲ್ಲಾ ಫೇವರ್ ಆಗಿ ಮುತ್ತು ಕೊಡುತ್ತಾರೆಂದು ಲೆಕ್ಕಚಾರ ಹಾಕಿಕೊಂಡ ಪ್ರಶಾಂತ್,  ಶಮಂತ್ ಗೆಲ್ಲುವ ಆಸೆಯಿಂದ ತಾವು ಕಷ್ಟಪಟ್ಟು ಗೆದ್ದ ಮುತ್ತುಗಳನ್ನು ಶಮಂತ್ ಗೆ ಕೊಟ್ಟಿದ್ದಾರೆ.

ಈ ವೇಳೆ ಪ್ರಶಾಂತ್ ಹಾಗೂ ಶಮಂತ್ ಬ್ರೋ ಇಬ್ಬರೂ ಕಣ್ಣೀರು ಹಾಕಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದ್ದು, ಯಾರು ಟಾಪ್ ಲಿಸ್ಟ್ ಗೆ ಆಯ್ಕೆ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights