‘ನಾನು ಕೂಡ ಒಬ್ಬ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ’ – ಉಮೇಶ್ ಕತ್ತಿ..!

‘ನಾನು ಕೂಡ ಒಬ್ಬ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ’ ಆಹಾರ ಸಚಿವ ಉಮೇಶ್ ಕತ್ತಿ ಹೇಳುವ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ ಸಿಎಂ ಸ್ಥಾನದ ಆಸೆಯನ್ನು ತೇಲಿಬಿಟ್ಟಿದ್ದಾರೆ. ನಾನು ಕೂಡ ಒಬ್ಬ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಸಾಧ್ಯ ಆದರೆ ಪ್ರಧಾನಿ ಕೂಡ ಆಗಬೇಕು ಅನ್ನೋ ಆಸೆ ಇದೆ. 9 ಬಾರಿ ಶಾಸಕನಾಗಿದ್ದೇನೆ. ಮಂತ್ರಿಯೂ ಆಗಿದ್ದೇನೆ. ರಾಜಕೀಯ ಹಾದಿಯಲ್ಲಿ ನನಗೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಹೀಗಾಗಿ ಸಿಎಂ ಆಗುವ ಎಲ್ಲಾ ಅರ್ಹತೆಯೂ ನನಗಿದೆ ಎಂದಿದ್ದಾರೆ.

ಈಗಿನ್ನು ನನಗೆ 60 ವರ್ಷ. ಇನ್ನೂ ಕಾಲಾವಕಾಶವಿದೆ. ನಾನು ಇನ್ನೂ 15 ವರ್ಷದಲ್ಲಿ ಸಿಎಂ ಆಗಬೇಕು. ಎಲ್ಲದಕ್ಕೂ ಹಣೆಬರಹ ಇರಬೇಕು. ಬೈ ಲಕ್ ಇದೇ ಸಮಯದಲ್ಲಿ ಅವಕಾಶ ಸಿಕ್ಕರೆ ಸಿಎಂ ಅಧಿಕಾರ ನಿಭಾಯಿಸುತ್ತೇನೆ ಎಂದಿದ್ದಾರೆ.

umesh katti profile: ನೂತನ ಸಚಿವ, ದಾಖಲೆಯ 8 ಬಾರಿಯ ಶಾಸಕ ಉಮೇಶ್‌ ಕತ್ತಿ ಪರಿಚಯ - karnataka cabinet reshuffle: record 8 time legislator umesh katti profile | Vijaya Karnataka

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights