ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಜು.14ಕ್ಕೆ ವಿಚಾರಣೆ ಮುಂದೂಡಿಕೆ!
ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ತೆರೆಬೀಳುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಅಂತಿಮಗೊಂಡಿದ್ದು, ಎಐಟಿ ಹೈಕೋರ್ಟ್ ಗೆ ಅಂತಿಮ ವರದಿ ಸಲ್ಲಿಸಿದೆ.
ಹೌದು… ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಪೂರ್ಣಗೊಳಿಸಿದ್ದು ಹೈಕೋರ್ಟ್ ಗೆ ಮೆಮೊ ಸಲ್ಲಿಸಿತ್ತು. ಆದರೆ ತನಿಖಾ ವರದಿಯ ಇಂಗ್ಲೀಷ್ ಅನುಮಾದ ನೀಡುವಂತೆ ಯುವತಿ ಪರ ವಕೀಲಯರಿಗೆ ಕೋರ್ಟ್ ಹೇಳಿದ್ದು ಜುಲೈ 14ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳಸಿದ್ದರು ಎಂದು ಆರೋಪಿಸಿ ಸಂತ್ರಸ್ತ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಈಗಾಗಲೇ ರಮೇಶ್ ಜಾರಕಿಹೊಳಿ ವಿಚಾರಣೆ ನಡೆದಿದೆ. ಜೊತೆಗೆ ಪ್ರಕರಣದಲ್ಲಿ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ಅವರ ವಿಚಾರಣೆ ಕೂಡ ಎಸ್ಐಟಿ ಪೂರ್ಣಗೊಳಿಸಿದೆ.
ಸಂತ್ರಸ್ತೆ ಯುವತಿ ನೀಡಿದ ಆಧಾರಗಳು, ಸಚಿವರು ನೀಡಿದ ಹೇಳಿಕೆ ಹಾಗೂ ನರೇಶ್ ಗೌಡ ಹಾಗೂ ಶ್ರವಣ್ ವಿಚಾರಣೆ ಬಳಿಕ ಅಂತಿಮ ವರದಿಯನ್ನು ತಯಾರಿಸಿದ ಎಸ್ಐಟಿ ಅಧಿಕಾರಿಗಳು ಅಂತಿಮ ವರದಿಯನ್ನು ಹೈಕೋರ್ಟ್ ಮುಂದಿರಿಸಿತ್ತು. ಆದರೆ ವರದಿಯ ಇಂಗ್ಲೀಷ್ ಅನುವಾದವನ್ನು ನೀಡುವಂತೆ ಕೋರ್ಟ್ ಯುವತಿ ಪರ ವಕೀಲರಿಗೆ ಕೇಳಿದೆ. ಇದರಿಂದ ವಿಚಾರಣೆ ಜುಲೈ 14ಕ್ಕೆ ಮುಂದೂಡಲಾಗಿದೆ.

