ಚಿನ್ನದ ಸರಗಳನ್ನು ನೆತ್ತಿಗೆ ಹಾಕಿಕೊಂಡ ಮೆಕ್ಸಿಕನ್ ರಾಪರ್: ವಿಡಿಯೋ ವೈರಲ್!

ಮೆಕ್ಸಿಕನ್ ರಾಪರ್ ಡಾನ್ ಸುರ್ ಚಿನ್ನದ ಸರಗಳನ್ನು ನೆತ್ತಿಗೆ ಹಾಖಿಕೊಳ್ಳುವ ಮೂಲಕ ಆನ್‌ಲೈನ್‌ನಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ಅವರ ಹೊಸ ನೋಟವನ್ನು ತೋರಿಸುವ ಅವರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜಿ ವೈರಲ್ ಆಗಿವೆ. ಮೆಕ್ಸಿಕನ್ ರಾಪರ್ ಹೊಸ ಮ್ಯೂಸಿಕ್ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದು, ಅಲ್ಲಿ ಅವರು ತಮ್ಮ ಹೊಸ ಲುಕ್ ಅನ್ನು ತೋರಿಸಿದ್ದಾರೆ.

23 ವರ್ಷದ ರಾಪರ್ ತನ್ನ ನೆತ್ತಿಗೆ ಕೂದಲಿನಂತೆ ಚಿನ್ನದ ಸರಗಳನ್ನು ಹಾಕಿಕೊಂಡ ‘ಮಾನವ ಇತಿಹಾಸದಲ್ಲಿ ಮೊದಲ ರಾಪರ್’ ಎಂದು ಹೇಳಿಕೊಂಡಿದ್ದಾನೆ. ಹೀಗೆ ನೆತ್ತಿಗೆ ಚಿನ್ನದ ಸರಗಳನ್ನು ಸಿಕ್ಕಿಸಿಕೊಂಡಿರುವುದಕ್ಕೆ ವೈದ್ಯರಲ್ಲಿ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲೂ ಕಳವಳವನ್ನು ಉಂಟುಮಾಡಿದೆ.

ಕ್ಯಾರಕೋಲ್ ಟಿವಿಯ ಪ್ರಕಾರ, ಡಾನ್ ಸುರ್ ಈ ವರ್ಷದ ಏಪ್ರಿಲ್‌ನಲ್ಲಿ ಇದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಇತ್ತೀಚಿನ ವಿಡಿಯೋದಲ್ಲಿ ವಿಲಕ್ಷಣವಾದ ಗೋಲ್ಡ್‌ಲಾಕ್‌ಗಳನ್ನು ತೋರಿಸುವುದು ಮಾತ್ರವಲ್ಲದೆ ಹಳದಿ ಲೋಹದಲ್ಲಿ ಅವನ ಹಲ್ಲುಗಳನ್ನು ಹಾಕಿಕೊಂಡಿರುವುದು ಕೂಡ ನೋಡುಗರ ಹುಬ್ಬೇರಿಸುವಂತೆ ಮಾಡಿದೆ.

“ಸತ್ಯವೆಂದರೆ ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದ್ದೆ. ಏಕೆಂದರೆ ಪ್ರತಿಯೊಬ್ಬರೂ ತಮ್ಮ ಕೂದಲಿಗೆ ಬಣ್ಣ ಹಚ್ಚುವುದನ್ನು ನಾನು ನೋಡುತ್ತೇನೆ. ನಾನಾ ರೀತಿ ವಿನ್ಯಾಸಗೊಳಿಸುವುದನ್ನ ನೋಡುತ್ತೇನೆ. ಆದರೆ ನನಗೆ  ಅವರಂತೆ ಮಾಡಲು ಇಷ್ಟವಿಲ್ಲ. ಜೊತೆಗೆ ನನ್ನಂತೆ ಯಾರೂ ಕೂಡ ನಕಲು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ, ”ಎಂದು ಡಾನ್ ಸುರ್ ಎನ್ಎಂಇ ವೀಡಿಯೊದಲ್ಲಿ ಹೇಳಿದರು.

“ಇದರಿಂದ ಡಾನ್ ಸುರ್ ದೇಹದಲ್ಲಿ ಬ್ಯಾಕ್ಟೀರಿಯಾ ಸುಲಭವಾಗಿ ಸೇರಿಕೊಳ್ಳುತ್ತವೆ. ಇದು ನೇರವಾಗಿ ಮೂಳೆ ಮೆದುಳನ್ನು ಆವರಿಸುತ್ತದೆ. ಇದರ ಬಗ್ಗೆ ನನಗೆ ಕಳವಳವಿದೆ. ಇದರ ಜೊತೆಗೆ ಈ ಕೊಕ್ಕೆಗಳಿಂದಾಗುವ ತೂಕದ ಬಗ್ಗೆ ನನಗೆ ಕಾಳಜಿ ಇದೆ “ಎಂದು ಪ್ಲಾಸ್ಟಿಕ್ ಸರ್ಜನ್ ಡಾ ಫ್ರಾಂಕ್ ಅಗುಲ್ಲೊ ಯಾಹೂ ಲೈಫ್‌ಗೆ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights