ಕಲಬುರ್ಗಿಯಲ್ಲಿ ಜೆಡಿಎಸ್‌ ಬೆಂಬಲ ಕಾಂಗ್ರೆಸ್‌ಗಾ? ಬಿಜೆಪಿಗಾ?; ಶಾಸಕರಲ್ಲಿ ಭಿನ್ನಾಭಿಪ್ರಾಯ!

ಕಲಬುರ್ಗಿ ಪಾಲಿಕೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಪ್ರಶ್ನೆಗೆ ಸೋಮವಾರ ಸಂಜೆ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರೀ ಭಿನ್ನಾಭಿಪ್ರಾಯ ಕಂಡುಬಂದಿದೆ.

ಜಾತ್ಯತೀತತೆಯಿಂದಾಗಿ ಕೆಲವು ಶಾಸಕರು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದರೆ, ಕೆಲವರು ಅಧಿಕಾರದಲ್ಲಿರುವ ಕಾರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ಅಂತಿಮವಾಗಿ, ಕಲಬುರ್ಗಿಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಒಮ್ಮತವಿಲ್ಲದ ಕಾರಣ, 2023 ಸಮೀಕ್ಷೆಗಳನ್ನು ಪರಿಗಣಿಸಿ – ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲು ಪಕ್ಷದ ನಾಯಕರಾದ ಎಚ್‌ಡಿ ಕುಮಾರಸ್ವಾಮಿ ಮತ್ತು ಎಚ್‌ಡಿ ದೇವೇಗೌಡರಿಗೆ ಸ್ವತಂತ್ರ ಅಧಿಕಾರ ನೀಡಲು ಜೆಡಿಎಸ್‌ ಶಾಸಕಾಂಗ ಸಭೆ ಒಪ್ಪಿಕೊಂಡಿದೆ.

ಪಾಲಿಕೆಯಲ್ಲಿ 27 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಮತ್ತು 23 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಎರಡೂ ಪಕ್ಷಗಳು ತಮಗೆ ಬೆಂಬಲ ನೀಡುವಂತೆ ಜೆಡಿಎಸ್‌ಗೆ ದಂಬಾಲು ಬಿದ್ದಿವೆ.

ಕಾಂಗ್ರೆಸ್ ಹೈಕಮಾಂಡ್ ಮತ್ತು ಸ್ಥಳೀಯ ನಾಯಕರು ನಮ್ಮನ್ನು ಸಂಪರ್ಕಿಸಲಿ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದು, ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ಬಿಜೆಪಿಯ ಕುದುರೆ ವ್ಯಾಪಾರದ ಭಯ ಮತ್ತು ಜೆಡಿಎಸ್‌ ಕೌನ್ಸಿಲರ್‌ಗಳಿಗೆ ತಲಾ ಒಂದು ಕೋಟಿ ಆಮಿಷವೊಡ್ಡಿರುವುದರಿಂದ ನಾಲ್ಕು ಜೆಡಿಎಸ್‌ ಕೌನ್ಸಿಲರ್‌ಗಳನ್ನು ಬೆಂಗಳೂರಿನ ಹತ್ತಿರದ ಮನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.

ಜೆಡಿಎಸ್‌ ಶಾಸಕಾಂಗ ಸಭೆಗೆ ಶಾಸಕರಾದ ಕೋಲಾರದಿಂದ ಶ್ರೀನಿವಾಸ್ ಗೌಡ, ಗುಬ್ಬಿ ಶ್ರೀನಿವಾಸ್ ಮತ್ತು ಮೈಸೂರಿನ ಜಿಟಿ ದೇವೇಗೌಡ ಗೈರಾಗಿದ್ದರು.

ಇದನ್ನೂ ಓದಿ: ಬಿಜೆಪಿಗರು ಅಗತ್ಯವಿದ್ದಾಗ ನಮ್ಮನ್ನು ಬಳಸಿಕೊಂಡು, ನಮ್ಮ ವಿರುದ್ದವೇ ಮಾತನಾಡುತ್ತಾರೆ: ಹೆಚ್‌ಡಿಕೆ

Spread the love

Leave a Reply

Your email address will not be published. Required fields are marked *