ಉತ್ತರ ಪ್ರದೇಶದ ಖೋ ಖೋ ಪ್ಲೇಯರ್ನ ಮೇಲೆ ಅತ್ಯಾಚಾರದ ಆರೋಪಿ ಅರೆಸ್ಟ್!

24 ವರ್ಷದ ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದಾಗ ಕರೆ ಮಾಡುತ್ತಿದ್ದ ಸಂತ್ರಸ್ತೆಯ ಸ್ನೇಹಿತ ಹಂಚಿಕೊಂಡ ಆಡಿಯೋ ಕ್ಲಿಪ್ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 10 ರಂದು ಮಧ್ಯಾಹ್ನ 2 ಗಂಟೆಗೆ ದಲಿತ ಯುವತಿ ಉದ್ಯೋಗ ಸಂದರ್ಶನ ನೀಡಿ ಮನೆಗೆ ಮರಳುತ್ತಿದ್ದಾಗ ಉತ್ತರ ಪ್ರದೇಶದ ಬಿಜ್ನೋರ್‌ನ ಸಿಮೆಂಟ್ ರೈಲ್ವೇ ಸ್ಲೀಪರ್‌ಗಳ ಬಳಿ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಶಹಜಾದ್ ಅಲಿಯಾಸ್ ಹದೀಮ್  ಅವಳನ್ನು ಬಿಜ್ನೋರ್‌ನ ಸಿಮೆಂಟ್ ರೈಲ್ವೇ ಸ್ಲೀಪರ್‌ಗಳ ಬಳಿ ಎಳೆದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಸ್ನೇಹಿತನೊಂದಿಗೆ ಕರೆ ಮಾಡುತ್ತಿದ್ದ ಸಂತ್ರಸ್ತೆ ಸಹಾಯಕ್ಕಾಗಿ ಕೂಗಲು ಯತ್ನಿಸಿದಾಗ, ಆರೋಪಿ ಆಕೆಯ ದುಪಟ್ಟಾದಿಂದ ಆಕೆಯ ಕತ್ತು ಹಿಸುಕಿದ್ದಾನೆ. ಆಕೆ ಮೌನವಾಗುವ ಮುನ್ನ ಫೋನಿನಲ್ಲಿ ಸಹಾಯಕ್ಕಾಗಿ ಕಿರುಚಾಡುವುದನ್ನು ಸ್ನೇಹಿತ ಕೇಳಿಸಿಕೊಂಡಿದ್ದಾನೆ.

ಆಕೆಯನ್ನು ಅದೇ ಸಿಮೆಂಟ್ ಸ್ಲೀಪರ್ ನಲ್ಲಿ ಬಿಟ್ಟು ಆರೋಪಿ ಮಹಿಳೆಯ ಮೊಬೈಲ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆಕೆಯ ದೇಹ ರಕ್ತದ ಮಡುವಿನಲ್ಲಿ ಮತ್ತು ಹಲ್ಲನ್ನು ಕಳೆದುಕೊಂಡಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೆ ಆಕೆ ಪ್ರಾಣಪಕ್ಷಿ ಹಾರಿಹೋಗಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಆಕೆಯ ಕುಟುಂಬ ಆರೋಪಿಸಿದ್ದು ಪ್ರಕರಣ ದಾಖಲಿಸಲಾಗಿದೆ.

ಕೃತ್ಯದ ಬಳಿಕ ಮನೆಗೆ ತಲುಪಿದ ಆರೋಪಿ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಫೋನ್ ಟ್ಯಾಪ್ ಮಾಡುವ ಮೂಲಕ ಆರೋಪಿ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು ಆತನ ನಿವಾಸಕ್ಕೆ ಬಂದು ಆತನನ್ನು ಬಂಧಿಸಿದ್ದಾರೆ.

Spread the love

Leave a Reply

Your email address will not be published. Required fields are marked *