ಫ್ಯಾಕ್ಟ್‌ಚೆಕ್ : ಜನ ಗಣ ಮನ ಗೀತೆಯನ್ನು ಜಗತ್ತಿನ ಉತ್ತಮ ರಾಷ್ಟ್ರಗೀತೆ ಎಂದು ಯುನೆಸ್ಕೊ ಘೋಷಿಸಿದೆ ಎಂಬುದು ಸುಳ್ಳು

ಭಾರತದ ರಾಷ್ಟ್ರಗೀತೆಗೆ ವಿಶ್ವಸಂಸ್ಥೆಯ ಯುನೆಸ್ಕೊ ಜಗತ್ತಿನ ಉತ್ತಮ ರಾಷ್ಟ್ರಗೀತೆ ಎಂದು ಮಾನ್ಯತೆ ನೀಡಿದೆ ಎಂದು ಹೇಳಲಾಗುತ್ತಿದೆ. ಹೀಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಜಾಲತಣಗಳಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ, ‘ಭಾರತೀಯರೆಲ್ಲರಿಗೂ ಸಂತಸದ ವಿಚಾರ.

ನಮ್ಮ ರಾಷ್ಟ್ರಗೀತೆ ‘ಜನ ಗನ ಮನ’ಕ್ಕೆ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಆರ್ಥಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೊ) ಜಗತ್ತಿನ ಅತ್ಯುತ್ತಮ ರಾಷ್ಟ್ರಗೀತೆ ಎಂಬ ಮಾನ್ಯತೆ ನೀಡಿದೆ. ಈ ಸಂದೇಶವನ್ನು ಎಲ್ಲರಿಗೂ ಶೇರ್‌ ಮಾಡಿ’ ಎಂದು ಹೇಳಲಾಗಿದೆ.

ಭಾರತದ ರಾಷ್ಟ್ರಗೀತೆಯಾದ ಜನ ಗಣ  ಮನ ಕ್ಕೆ ಯುನೆಸ್ಕೊ ಜಗತ್ತಿನ ಉತ್ತಮ ರಾಷ್ಟ್ರಗೀತೆ ಎಂದು ಮಾನ್ಯತೆ ನೀಡಿದೆಯೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಪರಿಶೀಲಿಸಿದಾಗ, ಈ ಸಂದೇಶ ಕಳೆದ 4 – 5 ವರ್ಷಗಳಿಂದ ಪ್ರಸಾರವಾಗುತ್ತಿರುವುದು ಕಂಡುಬಂದಿದೆ.

ಯುನೆಸ್ಕೊ ನಿಜವಾಗಿಯೂ ನಮ್ಮ ಭಾರತದ ರಾಷ್ಟ್ರಗೀತೆಗೆ ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂದು ಮಾನ್ಯತೆ ನೀಡಿದೆಯೇ ಎಂದು ಪರಿಶೀಲಿಸದಾಗ ಇದೊಂದು ಸುಳ್ಳುಸುದ್ದಿ ಎಂಬುದು ದೃಢವಾಗಿದೆ. ಈ ಕುರಿತು ಸ್ವತಃ ಯುನೆಸ್ಕೊ ಸ್ಪಷ್ಟನೆ ನೀಡಿದ್ದು, ಇದೊಂದು ಸಂಪೂರ್ಣ ವದಂತಿ. ಯುನೆಸ್ಕೊ ಈ ರೀತಿಯ ಯಾವುದೇ ಘೋಷಣೆಯನ್ನೂ ಮಾಡಿಲ್ಲ ಎಂದು ಹೇಳಿದೆ. ಹಾಗಾಗಿ ವಿಶ್ವಸಂಸ್ಥೆ ಭಾರತದ ರಾಷ್ಟ್ರಗೀತೆಗೆ ಜಗತ್ತಿನ ಅತ್ಯುತ್ತಮ ರಾಷ್ಟ್ರಗೀತೆ ಎಂಬ ಮಾನ್ಯತೆ ನೀಡಿದೆ ಎಂದು ಹರಿದಾಡುತ್ತಿರುವ ಸಂದೇಶ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಈ ಸುಳ್ಳು ಸುದ್ದಿಯಂತೂ 2008ರಿಂದಲೂ ಹರಿದಾಡುತ್ತಲೇ ಇದೆ. ರವೀಂದ್ರನಾಥ್ ಠ್ಯಾಗೋರ್ ರಚಿಸಿದ ಜನ-ಗಣ-ಮನವು ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂದು ಯುನೆಸ್ಕೋ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಓದುವ ಜನರು ಈಗಲೂ ಇದನ್ನು ನಂಬಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

2016ರ ಸ್ವಾತಂತ್ರ್ಯ ದಿನಾಚರಣೆಯ ದಿನವಂತೂ ಈ ಗಾಳಿಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುನೆಸ್ಕೋ ಅಧಿಕಾರಿಗಳು, ‘ಭಾರತದಲ್ಲಿ ಹರಿದಾಡುತ್ತಿರುವ ಈ ಗಾಳಿಸುದ್ದಿಯನ್ನು ನಾವೂ ಗಮನಿಸಿದ್ದೇವೆ. ಆದರೆ ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಭಾರತ ಮಾತ್ರವಲ್ಲ ಯಾವ ದೇಶದ ರಾಷ್ಟ್ರಗೀತೆಯನ್ನೂ ಅತ್ಯತ್ತಮ ರಾಷ್ಟ್ರಗೀತೆ ಎಂದು ಘೋಷಿಸಿಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ಭಾರತದ ರಾಷ್ಟ್ರಗೀತೆಗೆ ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂದು ಯುನೆಸ್ಕೋ ಘೋಷಿದೆ ಎಂಬ ವಾಟ್ಸಾಪ್ ಸಂದೇಶ ಸುಳ್ಳು. ಇಂತಹ ಯಾವುದೇ ಘೋಷಣೆಯನ್ನು ಯುನೆಸ್ಕೊ ಮಾಡುವುದಿಲ್ಲ ಎಂದು ಸ್ವತಃ ಘೋಷಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : RSS 52 ವರ್ಷ ರಾಷ್ಟ್ರ ಧ್ವಜ ಹಾರಿಸದಿರಲು ನೆಹರು ಕಾರಣವಂತೆ ? ಹೌದೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights