ಫ್ಯಾಕ್ಟ್‌ಚೆಕ್ : ವಿಚಿತ್ರ ಪ್ರಾಣಿಯೊಂದು ಗುಬ್ಬಿಯಲ್ಲಿ ಕಾಣಿಸಿಕೊಂಡಿದೆಯೇ? ಈ ಸ್ಟೋರಿ ಓದಿ

“ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ. ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು? ಕನಕಪುರ ಭಾಗದ ಕಾಡುಗಳಲ್ಲಿ ಕೂಡ ಈ ಮುಳ್ಳುಹಂದಿಯ  ಮತ್ತೊಂದು ಪ್ರಬೇಧ ಇದೆ ಎಂದು ತಿಳಿದುಬಂದಿದೆ”  ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಉದ್ದ ತಲೆಯ, ಕೊಳವೆಯಾಕಾರ ಮೂತಿ, ದಟ್ಟ ತುಪ್ಪಳ ಇರುವ ಪ್ರಾಣಿಯ ವಿಡಿಯೋವೊಂದನ್ನು ಹಂಚಿಕೊಂಡು ತುಮಕೂರಿನ ಗುಬ್ಬಿಯಲ್ಲಿ ಕಂಡುಬಂದ ವಿಚಿತ್ರ ಪ್ರಾಣಿ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿರುವ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕಮೆಂಟ್‌ ಸೆಕ್ಷನ್‌ನಲ್ಲಿ ಪ್ರತಿಕ್ರಿಯಿಸಿದ್ದು, ಇದು AI ನಿಂದ ರಚಿಸಲಾದ ವಿಡಿಯೋ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ ಇನ್ನು ಕೆಲವರು ಈ ಪ್ರಾಣಿ ಭಾರತದಲ್ಲಿ ಕಂಡುಬರುವುದಿಲ್ಲ ಎಂದು ಪ್ರತಿಕ್ರಿಸಿದ್ದಾರೆ.

ಹಾಗಿದ್ದರೆ ಈ ಪ್ರಾಣಿ ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡಿರುವುದು ನಿಜವೇ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ನಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ  ಕಂಡುಬಂದ ದೃಶ್ಯ ಎಂದು ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿರುವ ಪ್ರಾಣಿಯ ಹೆಸರು Giant anteaters (ಗೇನ್ಟ್‌ ಆಂಟ್‌ ಈಟರ್) ಇರುವೆ ಭಕ್ಷಕ ಎಂಬ ಪ್ರಾಣಿಯದ್ದು ಎಂದು ತಿಳಿದುಬಂದಿದೆ. ಆದರೆ ಇದು ಗುಬ್ಬಿಯ ದೃಶ್ಯಗಳಲ್ಲ. ಮುಂದೆ ಓದಿ

ಗುಬ್ಬಿಗೆ ಇಂತಹ ಯಾವ ಪ್ರಾಣಿಯೂ ಬಂದಿಲ್ಲ! ಆತಂಕ ಬೇಡ : ಅರಣ್ಯಾಧಿಕಾರಿ ಸ್ಪಷ್ಟನೆ

ಈ ಪ್ರಾಣಿ ಗುಬ್ಬಿಯ ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ  ಪ್ರಸಾರವಾಗುತ್ತಿದಂತೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೆ ಎಚ್ಚೆತ್ತ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ಇಂತಹದ್ದೆ ವಿಡಿಯೋವನ್ನು ಹಂಚಿಕೊಂಡ ಕೆಲವರು ಕರ್ನಾಟಕದಲ್ಲಿ ವಿಚಿತ್ರ ಪ್ರಾಣಿಯೊಂದು ಪ್ರತ್ಯಕ್ಷವಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಂಡಿದ್ದರು. ಆದರೆ ಇದೆಲ್ಲವೂ ಸುಳ್ಳು ಸುದ್ದಿಯಾಗಿದ್ದು ಈ ಪ್ರಾಣಿ ಭಾರತದಲ್ಲಿ ಕಂಡುಬರುವುದಿಲ್ಲ. ಒಂದು ವೇಳೆ ಈ ಪ್ರಾಣಿ ಕಂಡು ಬಂದರೂ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಇದು ಮನುಷ್ಯರಿಗೆ ತೊಂದರೆ ನೀಡುವುದಿಲ್ಲ.

ದೈತ್ಯ ಇರುವೆಭಕ್ಷಕ (Giant anteaters ):

ಉದ್ದ ಮೂತಿಯ ದೈತ್ಯ ಇರುವೆ ಭಕ್ಷಕ ನೋಡಲು ವಿಶಿಷ್ಟವಾಗಿದ್ದು, ಇದರಲ್ಲಿ ಮೂರು ತಳಿಗಳಿವೆ. ಒಂದೇ ಏಟಿಗೆ ಗುಂಪು ಗುಂಪು ಇರುವೆಗಳನ್ನು ಮುಕ್ಕುವ ಈ ಭಕ್ಷಕ Myrmecophagidae ಗುಂಪಿಗೆ ಸೇರಿದೆ. ವೈಜ್ಞಾನಿಕ ಹೆಸರು ಮೈರಿಮ್‌ಕೊಗಾ ಟೈಡಸಿಟಿಲ್ Myrmecophaga tridactyla.

ದಕ್ಷಿಣ ಅಮೆರಿಕದ ಬೊಲಿವಿಯಾ, ಮಧ್ಯ ಅಮೆರಿಕ, ಒಣಗಿದ ಅರಣ್ಯಗಳು, ಹುಲ್ಲುಗಾವಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ದೈತ್ಯ ಇರುವೆಭಕ್ಷಕದ ದೇಹವು ಸಂಪೂರ್ಣ ಬೂದು ಬಣ್ಣದ ಕೂದಲಿನಿಂದ ಕೂಡಿರುತ್ತದೆ. ಮೊಣಕಾಲ ಮೇಲಿನಿಂದ ಬೆನ್ನು, ಭುಜ, ಬಾಲದವರೆಗೂ ಕಪ್ಪು ಕೂದಲು ಇರುತ್ತದೆ. ದಟ್ಟ ಕೂದಲಿನಿಂದಲೂ ಇದರ ಆಕಾರ ತುಸು ದೈತ್ಯವಾಗಿ ಕಾಣುತ್ತದೆ. ಉದ್ದ ಮೂತಿಯ, ಚಿಕ್ಕ ಕಣ್ಣು ಹಾಗೂ ಕಿವಿಗಳನ್ನು ಹೊಂದಿರುವ ಈ ಭಕ್ಷಕದ ಮೂಗು ಕಡುಕಪ್ಪು ಬಣ್ಣದಲ್ಲಿರುತ್ತದೆ. ಪಾದದ ಬಳಿ ಮುಂಭಾಗದಲ್ಲಿ ಕಡಗದಂತೆ ಕಪ್ಪು ಬಣ್ಣವಿರುತ್ತದೆ. ಇರುವೆ ಹಾಗೂ ಗೆದ್ದಲು ಹುಳುಗಳನ್ನು ತಿನ್ನಲು ಸಹಾಯಕವಾಗುವಂತೆ ಇದರ ತಲೆ ಮತ್ತು ಬಾಯಿಯ ರಚನೆ ಇರುತ್ತದೆ.ದೈತ್ಯ ಇರುವೆ ಭಕ್ಷಕಕ್ಕೆ ಹಲ್ಲಿರುವುದಿಲ್ಲ. 30 ಸಾವಿರ ಇರುವೆಗಳನ್ನು ಒಂದೇ ಬಾರಿಗೆ ಎಳೆದುಕೊಳ್ಳುವಷ್ಟು ಇದರ ನಾಲಿಗೆ ಉದ್ದ ಹಾಗೂ ತೀಕ್ಷವಾಗಿರುತ್ತದೆ.

ವಾಸ್ತವವಾಗಿ ಈ ಪ್ರಾಣಿಗಳು ಅಳಿವಿನಂಚಿನಲ್ಲಿದ್ದು ಮನುಷ್ಯನ ಅತಿಕ್ರಮಣದಿಂದ ದೈತ್ಯ ಇರುವೆಭಕ್ಷಕ (Giant anteaters )  ಪ್ರಾಣಿಗಳು ಕ್ಷೀಣಿಸುತ್ತಾ ಬಂದಿದೆ. ಇಂತಹ ಪ್ರಬೇಧಗಳು ಭಾರತದ ಯಾವುದೇ ಭಾಗದಲ್ಲಿ ಕಂಡುಬರುವುದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಜನ ಗಣ ಮನ ಗೀತೆಯನ್ನು ಜಗತ್ತಿನ ಉತ್ತಮ ರಾಷ್ಟ್ರಗೀತೆ ಎಂದು ಯುನೆಸ್ಕೊ ಘೋಷಿಸಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights