ಡ್ರಗ್ಸ್‌ ಕೇಸ್‌: ನಟಿ ರಾಗಿಣಿ ಆರೋಗ್ಯದಲ್ಲಿ ಏರುಪೇರು; ಜೈಲಿಂದ ಆಸ್ಪತ್ರೆಗೆ ಶಿಫ್ಟ್‌!

ಡ್ರಗ್ಸ್‌ ಮಾಫಿಯಾ ಕೇಸ್‌ನಲ್ಲಿ ಸಿಲುಕಿಕೊಂಡು ಬಂಧನಕ್ಕೊಳಗಾಗಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿಗೆ ಇದೀಗ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ಬುಧವಾರ ರಾತ್ರಿ 10 ಗಂಟಗೆ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆ ಜೈಲಾಧಿಕಾರಿಗಳು ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಇತ್ತೀಚೆಗೆ ರಾಗಿಣಿ ಹಲವು ಅನಾರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದರು. ಹೊಟ್ಟೆ ನೋವಿನಿಂದಲೂ ಬಳಲುತ್ತಿದ್ದರು. ಆಗ ಅವರಿಗೆ ಜೈಲಿನ ಆಸ್ಪತ್ರೆಯಲ್ಲೇ ತಕ್ಷಣ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಮತ್ತಷ್ಟು ಆರೋಗ್ಯ ಹಾಳಾದ ಕಾರಣ ಜೈಲಾಧಿಕಾರಿಗಳು ರಾಗಿಣಿಯನ್ನ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ..

ಇನ್ನೂ ಡ್ರಗ್ಸ್ ಜಾಲದಲ್ಲಿ ಪ್ರಮುಖ ಆರೋಪಿಯ ಸ್ಥಾನದಲ್ಲಿರುವ ರಾಗಿಣಿ ಜಾಮೀನಿಗೇ ಪ್ರಯತ್ನಿಸುತ್ತಲೇ ಇದ್ರು ಈವರೆಗೂ ಬೇಲ್ ಮಂಜೂರಾಗಿಲ್ಲ. ಇನ್ನೂ ಇತ್ತೀಚೆಗಷ್ಟೇ ಮತ್ತೊಬ್ಬ ಪ್ರಮುಖ ಆರೀಪಿ ಸ್ಥಾನದಲ್ಲಿದ್ದ ನಟಿ ಸಂಜನಾಗೆ ಬೇಲ್ ಸಿಕ್ಕಿತ್ತು. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಸಂಜನಾಗೆ ಬೇಲ್ ಸಿಕ್ಕಿದ್ದು, ಅವರ ಅನಾರೋಗ್ಯದ ಕಾರಣದಿಂದಲೇ. ಹೀಗಾಗಿ ರಾಗಿಣಿಗೆ ನಿಜವಾಗಲೂ ಆರೋಗ್ಯ ಸಮಸ್ಯೆ ಇದೆಯಾ ಅಥವಾ ಜಾಮೀನಿಗಾಗಿ ಹೊಸ ಪ್ಲಾನ್ ಆ ಅನ್ನೋ ಅನುಮಾನ ಸಹಜವಾಗಿ ಮೂಡುತ್ತದೆ.


ಇದನ್ನೂ ಓದಿ: SBI ಉದ್ಯೋಗಿ, 19ರ ಯುವತಿಯ ಕತ್ತು ಹಿಸುಕಿ-ಬೆಂಕಿ ಹಚ್ಚಿ ಕೊಲೆ: ಮಾಜಿ ಪ್ರಿಯಕರನ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights