ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಹತ್ಯೆಗೆ ಸಂಚು? ಒಬ್ಬನ ಬಂಧನ

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಹತ್ಯೆಗೆ ಸಂಚು ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಬೈಕ್‍ನಲ್ಲಿ ಬಂದ ಅಪರಿಚಿತರು ಯು.ಟಿ ಖಾದರ್ ತೆರಳುತ್ತಿದ್ದ ಕಾರನ್ನು ಫಾಲೋ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅನೀಶ್ ಪೂಜಾರಿ ಎಂಬಾತನನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯು.ಟಿ.ಖಾದರ್ ಅವರು ಬುಧವಾರ ದೇರಳಕಟ್ಟೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬೆಂಗಳೂರಿಗೆ ತೆರಳಲು ಮಂಗಳೂರು ಏರ್‌ಪೋರ್ಟ್‌ ಕಡೆಗ ಹೊರಟಿದ್ದರು. ಈ ವೇಳೆ, ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್ ವರೆಗೂ ಅಪರಿಚಿತರು ಬೈಕ್‍ನಲ್ಲಿ ಹಿಂಬಾಲಿಸಿದ್ದಾರೆ. ಸುಮಾರು ಹತ್ತು ಕಿ.ಮೀ ವರೆಗೂ ಖಾದರ್ ಇದ್ದ ಕಾರನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ.

ಇದರಿಂದ ಅನುಮಾನಗೊಂಡ ಯು.ಟಿ ಖಾದರ್ ಅವರ ಎಸ್ಕಾರ್ಟ್ ವಾಹನದ ಎಎಸ್‍ಐ ಸುಧೀರ್ ಅವರು, ಬೈಕ್ ನಂಬರ್ ದಾಖಲಿಸಿಕೊಂಡು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ನಂತೂರು ಬಳಿ ಎಸ್ಕಾರ್ಟ್ ವಾಹನ ನಿಲ್ಲಿಸಿ ಬೈಕ್‍ನ ಹಿಂದೆ ಪೆÇಲೀಸರು ಓಡಲು ಯತ್ನಿಸಿದ್ದಾರೆ. ಮತ್ತೊಂದೆಡೆ, ಸ್ಥಳೀಯ ಪೊಲೀಸರು ನಂತೂರು ಬಳಿ ಬೈಕ್ ಅಡ್ಡಗಟ್ಟಲು ಯತ್ನಿಸಿದ್ದಾರೆ. ಆದರೆ ಅಪರಿಚಿತರು ಬೈಕ್ ತಿರುಗಿಸಿ ಪರಾರಿಯಯಾಗಿದ್ದರು.

ಇದನ್ನೂ ಓದಿ: ಗೋದಿ ಮೀಡಿಯಾ ಮೇಲೆ ನಂಬಿಕೆ ಇಲ್ಲ; ತಮ್ಮದೇ ಹೊಸ ಸುದ್ದಿಪತ್ರ ಆರಂಭಿಸಿದ ರೈತರು!

ಬೈಕ್ ಸವಾರರ ಈ ಕೃತ್ಯ ಮಂಗಳೂರಿನಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಸದ್ಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬೈಕ್ ನಂಬರ್ ನೋಟ್ ಮಾಡಿಕೊಂಡು ವಿಳಾಸ ಪತ್ತೆಗಿಳಿದ ಕದ್ರಿ ಪೊಲೀಸರು, ಇಂದು ಅನೀಶ್ ಪೂಜಾರಿ ಎಂಬಾತನನ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿ ನವೀನ್ ವಶಕ್ಕೆ ಪಡೆದು ಯಾವ ಕಾರಣಕ್ಕೆ ಯು.ಟಿ ಖಾದರ್ ಕಾರು ಹಿಂಬಾಲಿಸಿದ ಎಂಬುಬರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

ಮಾಜಿ ಸಚಿವ ಯು.ಟಿ ಖಾದರ್‌ಗೆ ಜೀವ ಬೆದರಿಕೆ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯು.ಟಿ ಖಾದರ್‌ಗೆ ಪೊಲೀಸ್ ಭದ್ರತೆ ಜತೆಗೆ, ಬೆಂಗಾವಲು ವಾಹನದ ವ್ಯವಸ್ಥೆ ಮಾಡಿದೆ. ತಮಗೆ ಸರ್ಕಾರ ಪೊಲೀಸ್ ಭದ್ರತೆ ಕೊಟ್ಟಿದ್ದರಿಂದ ನಾನು ಬಚಾವಾಗಿದ್ದೇನೆ ಎಂದು ಯು.ಟಿ ಖಾದರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಪೊಲೀಸ್ ಭದ್ರತೆಯ ನಡುವೆಯೂ ಅನೀಶ್ ಪೂಜಾರಿ ಯು.ಟಿ ಖಾದರ್ ಕಾರನ್ನು ಹಿಂಬಾಲಿಸಿದ್ದೇಕೆ ಎಂಬ ಪ್ರಶ್ನೆ ಎದುರಾಗಿದೆ.


ಇದನ್ನೂ ಓದಿ: ಕೃಷಿ ನೀತಿಗಳ ಪ್ರಚಾರಕ್ಕೆ ರೈತನ ಫೋಟೋ ಬಳಿಸಿದ ಸರ್ಕಾರ; BJPಗೆ ಲೀಗಲ್‌ ನೋಟಿಸ್‌ ನೀಡಿದ ರೈತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights