ಕೃಷಿ ನೀತಿಗಳ ಪ್ರಚಾರಕ್ಕೆ ರೈತನ ಫೋಟೋ ಬಳಿಸಿದ ಸರ್ಕಾರ; BJPಗೆ ಲೀಗಲ್‌ ನೋಟಿಸ್‌ ನೀಡಿದ ರೈತ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿಗಳ ಪ್ರಚಾರಕ್ಕೆ ರೈತರೊಬ್ಬರ ಫೋಟೋ ಬಳಿಸಿಕೊಂಡಿದ್ದು, ತನ್ನ ಅನುಮತಿ ಇಲ್ಲದೆ ಫೋಟೋ ಬಳಸಿಕೊಂಡಿರುವ ಬಿಜೆಪಿಗೆ ರೈತ ಲೀಗಲ್‌ ನೋಟಿಸ್‌ ನೀಡಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಲ್ಲಿ ಒಬ್ಬರಾದ ಹೊಶಿಯಾರ್‌ಪುರ ನಿವಾಸಿ ಹರ್ಪ್ರೀತ್ ಸಿಂಗ್, ಜಾಹೀರಾತಿನಲ್ಲಿ ತನ್ನ ಭಾವಚಿತ್ರ ಬಳಸಲಾಗಿದೆ ಎಂಬ ವಿಚಾರ ತಿಳಿದ ತಕ್ಷಣ ಮಂಗಳವಾರ ಸಂಜೆ ನೋಟಿಸ್ ಕಳುಹಿಸಿದ್ದಾರೆ. ಈ ಘಟನೆಯ ನಂತರ ಬಿಜೆಪಿ ತನ್ನ ಜಾಹೀರಾತನ್ನು ಹಿಂಪಡೆದಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

BJP Illegally Used My Photo For Farm Law Ads": Protester At Singhu

“ಪಂಜಾಬ್ ಬಿಜೆಪಿಯ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಲಾಗಿರುವ ಜಾಹೀರಾತಿನಲ್ಲಿ ನನ್ನ ಫೋಟೊವನ್ನು ಬಳಸಲಾಗಿದೆ ಎಂದು ನನ್ನ ಸ್ನೇಹಿತ ಸೋಮವಾರ ಮಾಹಿತಿ ನೀಡಿದ. ನನ್ನ ಪೋಟೊ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಪೇಜ್‌ಗಳಲ್ಲಿ ಲಭ್ಯವಿತ್ತು” ಎಂದು ನಟ ಹಾಗೂ ಚಿತ್ರ ನಿರ್ಮಾಪಕನೂ ಆಗಿರುವ ಹರ್ಪ್ರೀತ್ ಸಿಂಗ್ ತಿಳಿಸಿದ್ದಾರೆ.

“ಬಿಜೆಪಿ ಹಾಗೂ ಇತರರು ತಮ್ಮ ಜಾಹೀರಾತಿಗಾಗಿ ನನ್ನ ಫೋಟೊವನ್ನು ಈ ಹಿಂದೆಯೂ ಬಳಸಿದ್ದರು. ಆದರೆ ಈ ಬಾರಿ ನನ್ನ ಅನುಮತಿ ಪಡೆಯದೆ, ರೈತರ ಪ್ರತಿಭಟನೆಯಂತಹ ಸಮಯದಲ್ಲಿ ಹೀಗೆ ಮಾಡಿದ್ದಾರೆ. ಮೂರು ಕೃಷಿ ಕಾನೂನುಗಳಿಂದ ಪಂಜಾಬ್ ರೈತರು ಖುಷಿಯಾಗಿದ್ದಾರೆಂದು ತೋರಿಸಲು ನನ್ನ ಫೋಟೊವನ್ನು ಅವರು ಬಳಸಿಕೊಂಡಿದ್ದಾರೆ. ಸತ್ಯಾಂಶವೇನೆಂದರೆ ಪಂಜಾಬ್ ರೈತರು ಕೃಷಿ ಕಾನೂನಿನಿಂದ ಸಂತೃಪ್ತರಾಗಿಲ್ಲ. ಇದನ್ನು ರದ್ದುಪಡಿಸಲು ಆಗ್ರಹಿಸಿ ಅವರು ಪ್ರತಿಭಟಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights