ಅಪಹರಣದ ಪ್ರಯತ್ನ ವಿರೋಧಿಸಿದ ಯುವತಿಗೆ ಗುಂಡು ಹಾರಿಸಿ ಕೊಲೆ…!

ಹರಿಯಾಣದ ಫರಿದಾಬಾದ್ ಜಿಲ್ಲೆಯ 21 ವರ್ಷದ ಯುವತಿಯನ್ನು ಕಾಲೇಜಿನ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಫರಿದಾಬಾದ್‌ನ ಬಲ್ಲಾಬ್‌ಘಡ್ ದಲ್ಲಿ ಮಹಿಳೆ ಪರೀಕ್ಷೆಗೆ ಹಾಜರಾದ ನಂತರ ಕಾಲೇಜಿನಿಂದ ಹೊರಬಂದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ತನ್ನ ಕಾಲೇಜಿನ ಹೊರಗೆ ವಾಹನದಲ್ಲಿ ಬಂದ ಆರೋಪಿ ಆಕೆಯನ್ನು ಅಪಹರಿಸಲು ಯತ್ನಿಸಿದ. ಅಪಹರಣದ ಪ್ರಯತ್ನವನ್ನು ಯುವತಿ ವಿರೋಧಿಸಲು ಪ್ರಯತ್ನಿಸಿದಾಗ ಅವನು ಅವಳಿಗೆ ಗುಂಡು ಹಾರಿಸಿದ್ದಾನೆ ಎಂದು ಎಸಿಪಿ ಬಲ್ಲಾಬ್‌ಘಡ್ ಜೈವೀರ್ ಸಿಂಗ್ ರತಿ ಹೇಳಿದ್ದಾರೆ.

ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಆಕೆ ತೀವ್ರ ರಕ್ತಸ್ರಾವದಿಂದ ಬಲಿಯಾಗಿದ್ದಾಳೆ. ಆರೋಪಿಗಳಲ್ಲಿ ಒಬ್ಬನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಮೇವತ್ ನಿವಾಸಿ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯಿಂದ ಯುವತಿ ಮತ್ತು ಆರೋಪಿ ಒಬ್ಬರಿಗೊಬ್ಬರು ತಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರತಿ ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights