ಟಿಕ್‍ಟಾಕ್‍ ಬ್ಯಾನ್ ನಿರಾಕರಿಸಿದ ಕಿರಿಕ್ ಹುಡುಗಿ ಟ್ವೀಟ್ ಮಾಡಿದ್ದು ಹೀಗೆ….

ಟಿಕ್‍ಟಾಕ್‍ ಬ್ಯಾನ್ ಮಾಡಬೇಕು ಎನ್ನುವ ಕೂಗಿಗೆ ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದು ಸದ್ಯ ಭಾರೀ ವೈರಲ್ ಆಗಿದೆ.

ಹೌದು… ಸ್ವದೇಶಿ ಬಳಿಕೆಯಿಂದ ದೂರವಾಗಿ ದೇಶಿ ಬಳಕೆಗೆ ಎಲ್ಲರೂ ಕೈ ಜೋಡಿಸುವ ಕರೆಗೆ ಸಾಕಷ್ಟು ಜನ ಸೈ ಎಂದಿದ್ದಾರೆ. ಇದರಿಂದಾಗಿ ಚೀನಾದ ಟಿಕ್‍ಟಾಕ್‍ ಬಳಕೆಯನ್ನು ಬಂದ್ ಮಾಡುವಂತೆ ಕೇಂದ್ರೆಕ್ಕೆ ಮನವಿ ಸಲ್ಲಿಸಲಾಗಿದೆ. ಹೀಗಾಗಿ ಸಾಕಷ್ಟು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟಿಕ್‍ಟಾಕ್‍ ಬ್ಯಾನ್ ಮಾಡಲು ಅಸ್ತು ಎಂದಿದ್ದು ಇನ್ನೂ ಕೆಲವರು ಟಿಕ್‍ಟಾಕ್‍ ವಿಡಿಯೋಗಳನ್ನ ಶೇರ್ ಮಾಡುತ್ತಿದ್ದಾರೆ.

https://twitter.com/SamyukthaHegde/status/1263713333275799553

ಆದರೆ ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಟಿಕ್‍ಟಾಕ್ ಬ್ಯಾನ್ ಮಾಡಬೇಡಿ ಎಂದು ಟ್ವೀಟ್ ಮಾಡಿರುವ ಸಂಯುಕ್ತಾ ಹೆಗ್ಡೆ, ಒಂದು ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡುವುದರಿಂದ ಅದರಲ್ಲಿ ಇರುವ ಜನರ ಮನಸ್ಥಿತಿ ಬದಲಾಗುವುದಿಲ್ಲ. ಈ ಪ್ಲಾಟ್‍ಫಾರ್ಮ್ ಅನ್ನು ನಿಷೇಧ ಮಾಡಿದರೆ ಜನ ಅವರ ಭಯಾನಕ ವಿಷಯಗಳನ್ನು ಆಪ್ಲೋಡ್ ಮಾಡಲು ಬೇರೆ ಇನ್ನೊಂದು ಆ್ಯಪ್ ಅನ್ನು ಹುಡುಕಿಕೊಳ್ಳುತ್ತಾರೆ. ಆದರೆ ಟಿಕ್‍ಟಾಕ್‍ಗೆ ಏನಾದರೂ ವೈಯಕ್ತಿಕವಾಗಿ ನನಗೆ ಏನೂ ಆಗಬೇಕಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಸಾಕಷ್ಟು ಪರ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ.ಇತ್ತೀಚೆಗೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್‍ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್‍ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights