ಫ್ಯಾಕ್ಟ್‌ಚೆಕ್ : ರಂಜಾನ್ ಮಾಸದಲ್ಲಿ ಸೌದಿ ಅರೇಬಿಯಾದ ಮಸೀದಿಗಳಲ್ಲಿ ಧ್ವನಿವರ್ಧಕ ಬಳಸದಂತೆ ನಿಷೇಧ ಹೇರಿದೆಯೇ ಸೌದಿ ಸರ್ಕಾರ?

ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ಲತೀಫ್ ಬಿನ್ ಅಬ್ದುಲಜೀಜ್ ಅಲ್-ಶೇಖ್ ಅವರು ರಂಜಾನ್ ಮಾಸದಲ್ಲಿ ಮಸೀದಿಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ ಎಂದು ಇತ್ತೀಚೆಗೆ ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.

ಸೌದಿ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಹಿನ್ನಲೆಯಲ್ಲಿ ರಂಜಾನ್ ಹಬ್ಬದ ಸಮಯದಲ್ಲಿ ಸೌದಿ ಅರೇಬಿಯಾದ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಯ ಮೇಲೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ ಎಂದು ಹೇಳಲಾಗುವ ಟ್ವೀಟ್ ಹಾಗೂ ಯೂಟ್ಯೂಬ್ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಮ್ದಿ ಎಂಬುವರು ಟ್ವೀಟ್ ಮಾಡಿ ಸೌದಿ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ. ‘ಭಾರತದಲ್ಲಿ ಇಂತಹ ಕ್ರಮವನ್ನೇನಾದರೂ ತೆಗೆದುಕೊಂಡರೆ ಬಿರುಗಾಳಿ ಏಳುತ್ತದೆ’ ಎಂದು ಮೇಜರ್ ಸುರೇಂದರ್ ಪೂನಿಯಾ ಎಂಬುವರು ಟ್ವೀಟ್ ಮಾಡಿದ್ದಾರೆ. ಭಾರತದ ಹಲವು ಸುದ್ದಿ ಸಂಸ್ಥೆಗಳೂ ಈ ಸುದ್ದಿಯನ್ನು ಪ್ರಕಟಿಸಿವೆ. ಹಾಗಿದ್ದರೆ ಈ ಸುದ್ದಿ ನಿಜವೇ? ರಂಜಾನ್ ಮಾಸದಲ್ಲಿ ಧ್ವನಿವರ್ಧಕ ಬಳಸದಂತೆ ಸೌದಿ ಸರ್ಕಾರ ನಿರ್ಬಂಧ ವಿಧಿಸಿದಿಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ರಂಜಾನ್ ಮಾಸದಲ್ಲಿ ಸೌದಿ ಸರ್ಕಾರ ಧ್ವನಿವರ್ಧಕಗಳನ್ನು ಬಳಸದಂತೆ ನಿರ್ಬಂಧ ಹೇರಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ಸೌದಿ ಸರ್ಕಾರವು ರಂಜಾನ್ ಸಮಯದಲ್ಲಿ ಲೌಡ್‌ಸ್ಪೀಕರ್‌ಗೆ ನಿಷೇಧ ಹೇರಿದೆ ಎಂಬುದು ಸುಳ್ಳು ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ.

ಮುಖ್ಯವಾಗಿ, ಪ್ರಾರ್ಥನೆಯ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯಿಂದಾಗಿ ವೃದ್ಧರು ಮತ್ತು ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರದ ಕಡೆಯಿಂದ ಇದು ಮೊದಲ ಪ್ರಯತ್ನವಲ್ಲ ಎಂದು ವರದಿಯು ಗಮನಸೆಳೆದಿದೆ. “ಕಳೆದ ವರ್ಷ, ಸಚಿವಾಲಯವು ಉಪವಾಸದ ತಿಂಗಳಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗ ಬಳಕೆಗೆ ನಿರ್ಬಂಧಿಸಿತು. ಲೌಡ್‌ಸ್ಪೀಕರ್‌ ಬಳಸುವಾಗ ಅದರಿಂದ ಬರುವ ಶಬ್ದವು ಮೂರನೇ ಒಂದು ಭಾಗವನ್ನು ಮೀರಬಾರದು, ಎಂದು ತಿಳಿಸಿತ್ತು ಎಂದು ”ಗಲ್ಫ್ ನ್ಯೂಸ್ ವರದಿ ಮಾಡಿತ್ತು.

ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಕ್ ಅಬ್ದುಲ್‌ ಲತೀಫ್ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ಎಲ್ಲಿಯೂ ಈ ವಿಚಾರ ಇಲ್ಲ. ಸರ್ಕಾರದ ವಕ್ತಾರ ಅಬ್ದುಲ್ಲಾ ಅಲ್–ಎನೇಜಿ ಅವರು ಲೌಡ್‌ಸ್ಪೀಕರ್‌ ನಿಷೇಧ ವಿಚಾರವನ್ನು ತಳ್ಳಿಹಾಕಿದ್ದಾರೆ. ಕಳೆದ ವರ್ಷದ ರಂಜಾನ್‌ ಅವಧಿಯಲ್ಲಿ ಸೌದಿ ಸರ್ಕಾರವು ಲೌಡ್‌ಸ್ಪೀಕರ್‌ ಬಳಕೆಗೆ ಕೆಲವು ಮಿತಿ ಪ್ರಕಟಿಸಿದ್ದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಮಸೀದಿಯಲ್ಲಿ ಗರಿಷ್ಠ ನಾಲ್ಕು ಮೈಕ್‌ ಮಾತ್ರ ಬಳಸಬೇಕು. ಮೈಕ್‌ನ ಧ್ವನಿ ಮಿತಿಯಲ್ಲಿರಬೇಕು ಎಂಬ ನಿಯಮಗಳನ್ನು ಪ್ರಕಟಿಸಿತ್ತು. ಆದರೆ, ನಿಷೇಧ ಹೇರಿರಲಿಲ್ಲ ಎಂದು ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಂಜಾನ್ ಮಾಸದಲ್ಲಿ ಸೌದಿಯಲ್ಲಿ ಧ್ವನಿವರ್ಧಕ ಬಳಕೆ ಮಾಡದಂತೆ ನಿರ್ಬಂಧವನ್ನು ಹೇರಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಧ್ವನಿವರ್ಧಕಗಳ ಸಂಖ್ಯೆಯನ್ನು ನಾಲ್ಕಕ್ಕೆ ನಿರ್ಬಂಧಿಸಿದೆ ಆದರೆ ಅವುಗಳ ಬಳಕೆಯನ್ನು ನಿಷೇಧಿಸಿಲ್ಲ. ಇತ್ತೀಚೆಗೆ ಪ್ರಕಟಿಸಿದ ಮಾರ್ಗಸೂಚಿಗಳಲ್ಲಿ ಧ್ವನಿವರ್ಧಕಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದ್ನು ಓದಿರಿ: ಫ್ಯಾಕ್ಟ್‌ಚೆಕ್ : ಕೇರೆ ಹಾವನ್ನು ಹಾರುವ ಹಾವು ಎಂದು ತಪ್ಪಾಗಿ ಹಂಚಿಕೆ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights