ಫ್ಯಾಕ್ಟ್‌ಚೆಕ್ : ದ್ವಿಚಕ್ರ ವಾಹನ ಸವಾರರಿಗೆ ಇನ್ಮುಂದೆ ಹೆಲ್ಮೆಟ್ ಕಡ್ಡಾವಲ್ಲ ಎಂಬ ಸಂದೇಶ ನಿಜವೇ?

ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಲ್ಲವೇ? ಎಲ್ಲಾ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ತಪಾಸಣೆಯನ್ನು ನಿಲ್ಲಿಸಲಾಗಿದೆ ಎಂದು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಸಂದೇಶವನ್ನು ಹಂಚಿಕೊಳ್ಳಲಾಗಿದೆ.

ಬೈಕ್ ಸವಾರರು ಹೆಲ್ಮೆಟ್  ಧರಿಸುವ ಅಗತ್ಯವಿಲ್ಲ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ವಾಟ್ಸಾಪ್​​ನಲ್ಲಿ ಹೆಚ್ಚು  ಹರಿದಾಡುತ್ತಿದೆ. ಸಾಗರ್ ಕುಮಾರ್ ಜೈನ್ ಎಂಬ ವ್ಯಕ್ತಿ ಸಲ್ಲಿಸಿದ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

helmet

“ಹೆಲ್ಮೆಟ್ ಬಳಕೆ ಹೆದ್ದಾರಿಗಳಲ್ಲಿ ಕಡ್ಡಾಯವಾಗಿದೆ. ಯಾವುದೇ ಟ್ರಾಫಿಕ್ ಅಥವಾ ಪೊಲೀಸರು ಹೆಲ್ಮೆಟ್ ಧರಿಸದಿರುವ ಬಗ್ಗೆ ನಿಮ್ಮನ್ನು ಕೇಳಿದರೆ ನಿಮ್ಮ ಬೈಕ್ ಮುನ್ಸಿಪಲ್ ಕಾರ್ಪೋರೇಷನ್ ಮಿತಿಯಲ್ಲಿದೆ ಎಂದು ಹೇಳಬಹುದು” ಎಂಬ ಹೇಳಿಕೆಯೊಂದಿಗೆ ಸಂದೇಶವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸಂದೇಶದಲ್ಲಿ ಹೇಳಲಾಗಿರುವ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಬೈಕ್ ಅಥವಾ ದ್ವಿ-ಚಕ್ರ ವಾಹನ ಸವಾರರು ಹೆಲ್ಮೆಟ್  ಧರಿಸುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಪರಿಶೀಲಿಸಿದಾದ ಇದು ನಕಲಿ ಸುದ್ದಿ ಎಂದು ತಿಳಿದು ಬಂದಿದೆ.  ವಾಸ್ತವವಾಗಿ ವೈರಲ್ ಸಂದೇಶದಲ್ಲಿ ಪ್ರಸ್ತಾಪಿಸಲಾಗಿರುವ ಸಾಗರ್ ಕುಮಾರ್ ಜೈನ್ ಎಂಬ ವ್ಯಕ್ತಿ ಯಾರಿಗೆ ಮತ್ತು ಎಲ್ಲಿಗೆ ಮನವಿ ಸಲ್ಲಿಸಿದ್ದ ಎಂಬ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಅಲ್ಲದೆ ಹೆಲ್ಮೇಟ್ ಕಡ್ಡಾಯ ಕಾನೂನು ಎಂಬುದು ಸಾರ್ವಜನಿಕರ ಜೀವದ ಬಗ್ಗೆ ಕಾಳಜಿಯಿಂದ ಜಾರಿಮಾಡಲಾಗಿದೆ.

ವೈರಲ್ ಫಾರ್ವರ್ಡ್‌ನ ಸ್ಕ್ರೀನ್ ಗ್ರ್ಯಾಬ್ ಅನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್‌ನ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಈ ಸಂದೇಶ ನಕಲಿ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ಭಾರತ ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದುPIB ಹೇಳಿದೆ.

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 129 ರ ಪ್ರಕಾರ 4 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕ ಪ್ರದೇಶದಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುವಾಗ “ರಕ್ಷಣಾತ್ಮಕ ಹೆಲ್ಮೆಟ್ ಧರಿಸಬೇಕು”. ಮೋಟಾರ್‌ಸೈಕಲ್‌ಗಳು ಅಥವಾ ಟೂ-ವೀಲರ್‌ಗಳಲ್ಲಿ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಕೂಡಾ ಹೆಲ್ಮೆಟ್ ಧರಿಸಬೇಕು ಎಂದು ಕಾನೂನು ಹೇಳುತ್ತದೆ.

ಸಿಖ್ ಸಮುದಾಯದ ಪುರುಷರು ಒಂದು ವೇಳೆ ತಲೆಗೆ ಟರ್ಬನ್ (ಪೇಟ) ಧರಿಸಿದರೆ, ಈ ವಿಭಾಗಗಳ ನಿಬಂಧನೆಯು ಸಿಖ್ ವ್ಯಕ್ತಿಗೆ ಅನ್ವಯಿಸುವುದಿಲ್ಲ, ಮೋಟಾರು ಸೈಕಲ್‌ನಲ್ಲಿ ಚಾಲನೆ ಮಾಡುವಾಗ ಅಥವಾ ಸವಾರಿ ಮಾಡುವಾಗ, ಸಾರ್ವಜನಿಕ ಸ್ಥಳದಲ್ಲಿ, ಪೇಟವನ್ನು ಧರಿಸಿದರೆ ರಾಜ್ಯ ಸರ್ಕಾರವು ನೀಡುವ ವಿನಾಯಿತಿಗಳನ್ನು ಆಧರಿಸಿ ರಿಲಾಕ್ಸ್ ನೀಡಬಹುದು ಇದನ್ನು ಹೊರತು ಪಡಿಸಿ ಹೆಲ್ಮೆಟ್ ಧರಿಸುವುದು ಕಡ್ಡಾಯವಲ್ಲ ಎಂದು ಭಾರತ ಸರ್ಕಾರ ಘೋಷಣೆ ಮಾಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: PIB 

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಕೇರೆ ಹಾವನ್ನು ಹಾರುವ ಹಾವು ಎಂದು ತಪ್ಪಾಗಿ ಹಂಚಿಕೆ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights