FACT CHECK | ಬುದ್ದಿಮಾಂದ್ಯ ತಂದೆಯ ಆರೈಕೆ ಮಾಡುತ್ತಿರುವ ಮಗಳ ವಿಡಿಯೋವನ್ನು ತಪ್ಪಾಗಿ ಹಂಚಿಕೆ
ವೃದ್ದ ವ್ಯಕ್ತಿಯೊಬ್ಬ ಯುವತಿಯನ್ನು ಮಗುವಿನಂತೆ ಮುದ್ದು ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆ ವೃದ್ಧ ವ್ಯಕ್ತಿಗೆ ಆ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.
ವಿಡಿಯೋವನ್ನು ಹಂಚಿಕೊಂಡ ಕರಿಷ್ಮಾ ಅಜೀಜ್ ಎಂಬುವವರು “71 ವರ್ಷದ ಪುರುಷ ಮತ್ತು 21 ವರ್ಷದ ಹುಡುಗಿ. ಹುಡುಗರೇ, ನೀವು ಇನ್ನೂ ಬದುಕಲು ಬಯಸುತ್ತೀರಾ” ಎಂದು ಬರೆದಿದ್ದಾರೆ.ಈ ರೀತಿಯ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಪೀಳಿಗೆಯ ಜನರು ಇನ್ನೂ ಯಾವೆಲ್ಲ ಘಟನೆಗಳನ್ನು ತಮ್ಮ ಕಣ್ಣಿನಿಂದ ನೋಡಬೇಕು ಎಂದು ಬರೆದುಕೊಳ್ಳುತ್ತಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಳ್ಳುತ್ತಿದ್ದು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲಿಸಲು, ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ವರದಿಗಳು ನಮಗೆ ಕಂಡುಬಂದಿಲ್ಲ. ವೈರಲ್ ವಿಡಿಯೋವಿನ ದೃಶ್ಯಗಳಿಗೆ ಹೋಲಿಕೆ ಆಗುವ ಕೆಲವೊಂದು ವಿಡಿಯೋಗಳು ಇನ್ಸ್ಟಾಗ್ರಾಮ್ ನಲ್ಲಿ ಕಂಡುಬಂದಿದೆ. ಆದರೆ ಅದಕ್ಕು ವೈರಲ್ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.
View this post on Instagram
ಈ ವೀಡಿಯೊದ ಶೀರ್ಷಿಕೆಯನ್ನು ಪರ್ಷಿಯನ್ ಭಾಷೆಯಲ್ಲಿ ಬರೆಯಲಾಗಿದೆ ಮತ್ತು ಹಲವಾರು ಹ್ಯಾಶ್ಟ್ಯಾಗ್ಗಳನ್ನು ಒಳಗೊಂಡಿದೆ. ಇಂಗ್ಲಿಷ್ಗೆ ಅನುವಾದಿಸಿದಾಗ, ಶೀರ್ಷಿಕೆಯು “ಅಪ್ಪ” ಎಂದು ಓದುತ್ತದೆ ಮತ್ತು ಹ್ಯಾಶ್ಟ್ಯಾಗ್ಗಳಲ್ಲಿ ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ನಂತಹ ಪದಗಳು ಸೇರಿವೆ. (ಆರ್ಕೈವ್ ಮಾಡಿದ ಲಿಂಕ್) ಗೋಲ್ನಾಜ್ ಎಂಬ ಮಹಿಳೆ ತನ್ನ ಬುದ್ಧಿಮಾಂದ್ಯತೆ ಪೀಡಿತ ತಂದೆಯೊಂದಿಗೆ ವೀಡಿಯೊವನ್ನು ತೋರಿಸಲಾಗಿದೆ.

ಶೀರ್ಷಿಕೆ ಮತ್ತು ಹ್ಯಾಶ್ಟ್ಯಾಗ್ಗಳು ವಿಡಿಯೋದಲ್ಲಿರುವ ವೃದ್ಧ ವ್ಯಕ್ತಿ ಹುಡುಗಿಯ ತಂದೆಯಾಗಿದ್ದು, ಅವರು ಬುದ್ಧಿಮಾಂದ್ಯ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸೂಚಿಸುತ್ತವೆ.

ಈ ಪೇಜ್ಅನ್ನು ಇನ್ನಷ್ಟು ಪರಿಶೀಲಿಸಿದಾಗ, ಅದರಲ್ಲಿ ಬರೆಯಲಾಗಿದ್ದ ಮಾಹಿತಿಯ ಪ್ರಕಾರ, “ನಾನು ಗೋಲ್ನಾಜ್, ಮತ್ತು ಇಲ್ಲಿ ನಾನು ಬುದ್ಧಿಮಾಂದ್ಯತೆಯ ನನ್ನ ತಂದೆಯ ಆರೈಕೆ ಮಾಡುವ ಅನುಭವವನ್ನು ಜಾಗೃತಿ ಮೂಡಿಸುವ ಮತ್ತು ಆರೈಕೆದಾರರಿಗೆ ಸಹಾಯ ಮಾಡುವ ಉದ್ದೇಶದಿಂದ ಹಂಚಿಕೊಳ್ಳುತ್ತೇನೆ.” ವೀಡಿಯೊದಲ್ಲಿ ಕಂಡುಬರುವ ವೃದ್ಧ ವ್ಯಕ್ತಿ ಮತ್ತು ಯುವತಿ ತಂದೆ ಮತ್ತು ಮಗಳು ಎಂದು ಇದು ಸ್ಪಷ್ಟಪಡಿಸುತ್ತದೆ.

ಈ ವಿಡಿಯೋದಲ್ಲಿರುವ ಯುವತಿ ವೃದ್ಧನ ಮಗಳಾಗಿದ್ದಾಳೆ. ಆಕೆಯ ತಂದೆಗೆ ಅಪರೂಪದ ನ್ಯೂರೋ ಡಿ ಜನರೇಟಿವ್ ಕಾಯಿಲೆ ಇದೆ. ಇದನ್ನು ಫ್ರಾಂಟೋಟೆಂಪೋರಲ್ ಡಿಮೆನ್ಶಿಯಾ ಎನ್ನಲಾಗುತ್ತಿದೆ. ಈಕೆ ತಂದೆಯೊಂದಿಗಿನ ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿಡಿಯೋ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಯುವತಿಯು ಕೂಡ ಸ್ಪಷ್ಟನೆ ನೀಡಿರುವುದು ಕಂಡುಬಂದಿದೆ. ಆ ಮೂಲಕ ವೈರಲ್ ಪೋಸ್ಟ್ ಸುಳ್ಳು ಮಾಹಿತಿಯಿಂದ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ.
Fake News! That’s his daughter. Her father has a rare neurodegenerative disease, Frontotemporal dementia (FTD). Here’s her video after the video with her father was shared with a misleading context. https://t.co/Awc6P0xFTg pic.twitter.com/oKsERVTIqX
— Mohammed Zubair (@zoo_bear) April 22, 2025
ಒಟ್ಟಾರೆಯಾಗಿ ಹೇಳುವುದಾದರೆ, 71 ವರ್ಷದ ವೃದ್ಧ 21 ರ ಹರೆಯದ ಯುವತಿಯನ್ನು ವಿವಾಹವಾಗಿದ್ದಾನೆ ಎಂಬ ವಿಡಿಯೋ ಸುಳ್ಳು . ವೈರಲ್ ವಿಡಿಯೋದಲ್ಲಿ ಕಂಡುಬಂದಿರುವುದು ತಂದೆ ಮತ್ತು ಮಗಳಾಗಿದ್ದು, ಅನಾರೋಗ್ಯ ಪೀಡಿತ ತಂದೆಯನ್ನು ಮಗಳು ಆರೈಕೆ ಮಾಡುತ್ತಿರುವ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬ್ರಾಹ್ಮಣರ ಹೆಣ್ಣುಮಕ್ಕಳನ್ನು ದಲಿತರಿಗೆ ಮದುವೆ ಮಾಡಿಸಿದ್ರೆ ಜಾತಿ ವ್ಯವಸ್ಥೆ ನಾಶವಾಗುತ್ತೆ ಎಂದು ಹೇಳಿದ್ರಾ RSS ಮುಖ್ಯಸ್ಥ ಮೋಹನ್ ಭಾಗವತ್

