ಫ್ಯಾಕ್ಟ್‌ಚೆಕ್ : ಕೇರೆ ಹಾವನ್ನು ಹಾರುವ ಹಾವು ಎಂದು ತಪ್ಪಾಗಿ ಹಂಚಿಕೆ!

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು “ಮೊಬೈಲ್‌ನಲ್ಲಿ ಸೆರೆಯಾಯ್ತು ಹಾರುವ ವಿಚಿತ್ರ ಹಾವು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಹಾವುಗಳು ಅಂದ್ರೆ ತೆವಳು ವೇಗವಾಗಿ ಹೋಗುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ವಿಡಿಯೋದಲ್ಲಿ ಸೆರೆಯಾಗಿರುವ ಈ ಹಾವು ಎಲ್ಲರ ಗಮನ ಸೆಳೆಯುತ್ತಿದೆ. ರಸ್ತೆಯಲ್ಲಿದ್ದ ಈ ಹಾವು ವ್ಯಕ್ತಿಯೊಬ್ಬ ಹತ್ತಿರ ಹೋದಾಗ ಚಂಗನೆ ಹಾರಿ ಗುಡ್ಡದ ಕಡೆ ಹೋಗಿದೆ. ಇದೊಂದು ಹಾರುವ ವಿಚಿತ್ರ ಹಾವು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ.

ಹಾಗಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಹಾವು ನಿಜವಾಗಿಯೂ ಹಾರುವ ಹಾವು ಎಂಬುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹಾರುವ ಹಾವಿನ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇಂತಹದ್ದೇ ವಿಡಿಯೋ Discovery UK ಎಂಬ ಯೂಟೂಬ್‌ ಚಾನೆಲ್‌ನಲ್ಲಿ ಐದು ವರ್ಷಗಳ ಹಿಂದೆ ಪ್ರಕಟವಾಗಿರುವುದು ಕಂಡುಬಂದಿದೆ. ““ಫ್ಲೈಯಿಂಗ್ ಸ್ನೇಕ್” ಹಾಗೂ “ಫ್ಲೈಯಿಂಗ್ ಲಿಜಾರ್ಡ್” ಎಂಬ ಶೀರ್ಷಿಕೆಯೊಂದಿಗೆ ಲಭ್ಯವಾಗಿದೆ ಎಂದು ನ್ಯೂಸ್‌  ಮೀಟರ್ ತಿಳಿಸಿದೆ.

ಹಾರುವ ಹಾವು ಎಂದು ಪ್ರತಿಪಾದಿಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಂಡುಬರುವ ಹಾವಿನ ಹೆಸರು ಗೋಲ್ಡನ್ ಟ್ರೀ ಸ್ನೇಕ್. ಆದರೆ ಇದು ಹಾರುವುದಿಲ್ಲ. ಬದಲಿಗೆ ಒಂದು ಮರದಿಂದ ಮತ್ತೊಂದಕ್ಕೆ ನೆಗೆಯುತ್ತದೆ. ಅಂದರೆ ಎತ್ತರದ ಮರವೊಂದರಿಂದ ಅದಕ್ಕಿಂತ ಕಡಿಮೆ ಎತ್ತರದಲ್ಲಿ ಇರುವ ಮತ್ತೊಂದು ಮರಕ್ಕೆ ಗಾಳಿಯಲ್ಲಿ ಜಿಗಿಯುತ್ತದೆ. ಹಸಿರು, ಹಳದಿ, ಕಪ್ಪು, ಕೇಸರಿ ಹೀಗೆ ಬಣ್ಣ- ಬಣ್ಣವಾಗಿ ಇರುವಂಥ ಬಹಳ ಸುಂದರವಾದ, ವಿಷರಹಿತವಾದ ಹಾವು ಇದು. ಇದು ನೆಲದಿಂದ ಎತ್ತರಕ್ಕೆ ಹಾರುವಂಥದ್ದಲ್ಲ. ಬದಲಿಗೆ ಎತ್ತರದ ಮರವೊಂದರಿಂದ ಮತ್ತೊಂದು ಕಡಿಮೆ ಎತ್ತರ ಇರುವ ಮರಕ್ಕೆ ಜಿಗುತ್ತದೆ ಎಂದು ಉರಗ ತಜ್ಞರು ಹೇಳುತ್ತಾರೆ.

“ಭಾರತದಲ್ಲಿ ಒಟ್ಟು ಇನ್ನೂರಾ ಎಪ್ಪತ್ತೈದಕ್ಕೂ ಹೆಚ್ಚು ಪ್ರಭೇದದ ಹಾವುಗಳಿವೆ. ಅದರಲ್ಲಿ ನಾಗರಹಾವು, ಮಂಡಲಹಾವು, ರಕ್ತಮಂಡಲ, ಕಟ್ಟು ಹಾವು, ಕಾಳಿಂಗ ಸರ್ಪ ಹಾಗೂ ಸೀ ಸ್ನೇಕ್ ಸೇರಿವೆ. ಇವು ಕಚ್ಚಿದರೆ ವಿಷದಿಂದ ಮನುಷ್ಯರು ಸಾಯುವ ಸಾಧ್ಯತೆಗಳು ಹೆಚ್ಚು,” ಎಂದು ಅವರು ಹೇಳುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮರದಿಂದ ಮರಕ್ಕೆ ನೆಗೆಯುವ ಹಾವು ಇರುವುದು ಹೌದು. ಅದರ ಹೆಸರು ಗೋಲ್ಡನ್ ಟ್ರೀ ಸ್ನೇಕ್.  ಕರ್ನಾಟಕದ ಪಶ್ಚಿಮ ಘಟ್ಟ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಲ, ಉತ್ತರಪ್ರದೇಶ, ಈಶಾನ್ಯ ಭಾರತದಲ್ಲಿ ಕಂಡುಬರುತ್ತದೆ. ವೈರಲ್ ವಿಡಿಯೋದಲ್ಲಿ ಕಂಡುಬರುವ ಹಾವು ಕೇರೆ ಹಾವು. ವಾಸ್ತವವಾಗಿ ಆ ಹಾವು ಹಾರುವುದಿಲ್ಲ ಬದಲಿಗೆ ಸ್ವಲ್ಪ ದೂರಕ್ಕೆ ನೆಗೆಯುತ್ತದೆ. ಆದರೆ ಇದನ್ನೆ ಹಾರುವ ಹಾವು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.



 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights