ಫ್ಯಾಕ್ಟ್‌ಚೆಕ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ‘ಗಿಲ್ಲಿ’ ವಿಶ್ವದ ನಂ 1 ಶ್ರೀಮಂತ ಕ್ರಿಕೆಟರ್ ಅಂತೆ!ಹೌದೇ?

ವಿಶ್ವದ ನಂ 1 ಶ್ರೀಮಂತ ಕ್ರಿಕೆಟರ್ ಎಂಬ ಪಟ್ಟಿಯನ್ನು ನಿಯತಕಾಲಿಕೆಯೊಂದು ಬಿಡುಗಡೆ ಮಾಡಿದೆ. ಇದೇ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದು ವಿಶ್ವದ ಟಾಪ್ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿ. ವರ್ಲ್ಡ್​ ಇಂಡೆಕ್ಸ್ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ವಿಶ್ವದ10 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ವರದಿಯ ಪ್ರಕಾರ, 15 ವರ್ಷಗಳ ಹಿಂದೆ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ಬ್ಯಾಟ್ಸ್ಮನ್ಆ್ಯಡಂ ಗಿಲ್ಕ್ರಿಸ್ಟ್‌ 2023 ವಿಶ್ವದ ಶ್ರೀಮಂತ ಕ್ರಿಕೆಟಿಗ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈಗ ಇದೇ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

https://twitter.com/theworldindex/status/1635535454916210689?ref_src=twsrc%5Etfw%7Ctwcamp%5Etweetembed%7Ctwterm%5E1635535454916210689%7Ctwgr%5E26aab63b27a8ee6bcbe27feb96746ea4bf406e6d%7Ctwcon%5Es1_&ref_url=https%3A%2F%2Fkannada.hindustantimes.com%2Fsports%2Faustralian-star-becomes-richest-cricketer-in-world-leaves-dhoni-kohli-far-behind-in-wealth-181678841372577.html

ಹಾಲಿ ಕ್ರಿಕೆಟ್ ಆಟಗಾರರು ಈ ಪಟ್ಟಯಲ್ಲಿ ಇರುತ್ತಾರೆ ಎಂದು ಭಾವಿಸಲಾಗಿತ್ತು ಆದರೆ ಎಲ್ಲರ ನಿರೀಕ್ಷೆ ಮತ್ತು ಅಂದಾಜುಗಳನ್ನು ತಲೆಕೆಳಗೂ ಮಾಡಿರುವ ಈ ಪಟ್ಟಿ ಯಲ್ಲಿ ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ಬ್ಯಾಟ್ಸ್ಮನ್ಆ್ಯಡಂ ಗಿಲ್ಕ್ರಿಸ್ಟ್ ಮೊದಲ ಸ್ಥಾನದಲ್ಲಿ ನಿಂತಿದ್ದಾರೆ. ಆ ಪಟ್ಟಿ ನೋಡಿದ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು.  ಈ ಆಸೀಸ್ ಕ್ರಿಕೆಟಿಗನ ಸಂಪತ್ತು 3800 ಕೋಟಿ ಇದೆ ಎಂದು ಉಲ್ಲೇಖ ಮಾಡಲಾಗಿತ್ತು.

ವಾಸ್ತವವೇನು?

ಈ ವರದಿಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಎಲ್ಲರಿಗೂ ಇದೊಂದು ಅಚ್ಚರಿಯನ್ನುಂಟು ಮಾಡಿತ್ತು. ಆರೂ ನಿರೀಕ್ಷಿಸಿರದ ಹೆಸರು ಟಾಪ್ 1 ರಲ್ಲಿ ಬಂದಿತ್ತು. ಆದರೆ ಇದು ನಿಜವಲ್ಲ ಎಂದು ಸ್ವತಃ ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ಬ್ಯಾಟ್ಸ್ಮನ್ಆ್ಯಡಂ ಗಿಲ್ಕ್ರಿಸ್ಟ್ ಸ್ಪಷ್ಟನೆ ನೀಡಿದ್ದಾರೆ.

ಆದರೆ ಇದೀಗ ಈ ಎಲ್ಲಾ ವದಂತಿಗೆ ಸ್ವತಃ ಗಿಲ್​ಕ್ರಿಸ್ಟ್ ಅವರೇ ತೆರೆ ಎಳೆದಿದ್ದು, ವರ್ಲ್ಡ್​ ಇಂಡೆಕ್ಸ್ ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ ಇರುವ ಗಿಲ್​ಕ್ರಿಸ್ಟ್ ನಾನಲ್ಲ ಎಂದಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಆಡಂ ಗಿಲ್ ಕ್ರಿಸ್ಟ್, ನನ್ನ ಸಂಪತ್ತು 3800 ಕೋಟಿ ಅಲ್ಲ. ನಾನು ಸಚಿನ್-ವಿರಾಟ್ ಮತ್ತು ಧೋನಿಗಿಂತಲೂ ಶ್ರೀಮಂತರಲ್ಲ. ಅಲ್ಲದೆ 3800 ಕೋಟಿ ಆಸ್ತಿ ಹೊಂದಿರುವ ಆಡಂ ಗಿಲ್‌ಕ್ರಿಸ್ಟ್ ಬೇರೊಬ್ಬ ವ್ಯಕ್ತಿ ಎಂದಿದ್ದಾರೆ. ಹೀಗಾಗಿ ಈ ವರದಿ ಸುಳ್ಳು ಎಂದು ಬರೆದುಕೊಂಡಿದ್ದಾರೆ.

Former Australian cricketer Adam Gilchrist is mistaken for his namesake, an Australian gym franchise mogul, in a list of richest cricketers around the world.

ವಾಸ್ತವವಾಗಿ, ವರ್ಲ್ಡ್​ ಇಂಡೆಕ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ ಆಡಮ್ ಗಿಲ್‌ಕ್ರಿಸ್ಟ್ ಅವರು ಫಿಟ್‌ನೆಸ್ ಜಿಮ್ ಸೆಂಟರ್​ನ ಮಾಲೀಕರಾಗಿದ್ದಾರೆ. ಆಡಂ ಗಿಲ್‌ಕ್ರಿಸ್ಟ್ ಅಮೇರಿಕಾ ನಿವಾಸಿಯಾಗಿದ್ದು, ಅವರು F45 ಫಿಟ್‌ನೆಸ್ ಜಿಮ್ ನಡೆಸುತ್ತಿದ್ದಾರೆ. ಅಮೇರಿಕಾ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಜಿಮ್‌ ಫ್ರಾಂಚೈಸಿಗಳನ್ನು ಗಿಲ್​ಕ್ರಿಸ್ಟ್ ಹೊಂದಿದ್ದಾರೆ ಎಂದು ಫ್ಯಾಕ್ಟ್ ಚೆಕ್​ನಲ್ಲಿ ತಿಳಿದುಬಂದಿದೆ.

ಹೀಗಾಗಿ ಪ್ರಸ್ತುತ ಕ್ರಿಕೆಟ್​ ಲೋಕದ ಅತ್ಯಂತ ಶ್ರೀಮಂತ ಕ್ರಿಕೆಟಿಕ ಎಂಬ ಖ್ಯಾತಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್​ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದಾರೆ. 2023 ರಲ್ಲಿ ಸಚಿನ್ ಅವರ ನಿವ್ವಳ ಮೌಲ್ಯ 170 ಮಿಲಿಯನ್ ಡಾಲರ್ ಆಗಿದೆ. ಅವರ ನಂತರದ ಸ್ಥಾನದಲ್ಲಿ 115 ಮಿಲಿಯನ್ ಡಾಲರ್ ಆಸ್ತಿ ಹೊಂದಿರುವ ಧೋನಿ ಇದ್ದಾರೆ. ಹಾಗೆಯೇ112 ಮಿಲಿಯನ್ ಡಾಲರ್ ಆಸ್ತಿಯೊಂದಿಗೆ ಭಾರತದ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.

ಇನ್ನು ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ಕ್ರಿಕೆಟಿಗನ ವಿಚಾರಕ್ಕೆ ಬಂದರೆ, ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 750 ಕೋಟಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇವರ ಬಳಿಕ 300 ಕೋಟಿ ಆಸ್ತಿ ಹೊಂದಿರುವ ಸ್ಟೀವ್ ಸ್ಮಿತ್ ಇದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕಾ ನಿವಾಸಿ ಫಿಟ್‌ನೆಸ್ ಜಿಮ್ ಸೆಂಟರ್​ನ ಮಾಲೀಕರಾದ ಆಡಂ ಗಿಲ್‌ಕ್ರಿಸ್ಟ್ ಈ ಪಟ್ಟಿಯಲ್ಲಿರುವ ಶ್ರೀಮಂತ. ಇವರನ್ನೆ ಆಸ್ಟ್ರೇಲಿಯಾದ ಮಾಜಿ ವಿಕೆಟ್ಕೀಪರ್ಬ್ಯಾಟ್ಸ್ಮನ್ಆ್ಯಡಂ ಗಿಲ್ಕ್ರಿಸ್ಟ್ ಎಂದು ತಪ್ಪಾಗಿ ಭಾವಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಚಕ್ಕರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂಬುದು ಫೇಕ್ ನ್ಯೂಸ್ – ಅಸ್ಲೆ ಟೋಜೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights