‘ಬಿಜೆಪಿಯವರೇ ಬ್ಲ್ಯಾಕ್ಮೇಲ್ ಗಿರಾಕಿಗಳು’ – ಸಿಡಿ ಬಗ್ಗೆ ಸೂಕ್ತ ತನಿಖೆಗೆ ಸಿದ್ದರಾಮಯ್ಯ ಆಗ್ರಹ!

‘ಬಿಜೆಪಿಯವರೇ ಬ್ಲ್ಯಾಕ್ಮೇಲ್ ಗಿರಾಕಿಗಳು’ ಬಿಜೆಪಿಗರೇ ಬ್ಲಾಕ್ ಮೇಲ್ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಅಂದರೆ ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸಿಡಿ ತೋರಿಸಿ ಬ್ಲಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ದೊರೆತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಸಿದ ಬಾಂಬ್ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ ಬಿಜೆಪಿಯವರೇ ಬ್ಲ್ಯಾಕ್ ಮೇಲ್ ಗಿರಾಕಿಗಳು. ಬಿಜೆಪಿಗರೇ ಸಿಡಿ ಬಗ್ಗೆ ಹೇಳುತ್ತಾರೆ. ನೋಡಲು ಆಗದಂತಹ ವಿಚಾರ ಸಿಡಿಯಲ್ಲಿದೆ ಎನ್ನುತ್ತಾರೆ. ಇದರ ಬಗ್ಗೆ ತನಿಖೆಯಾಗಬೇಕು. ನೈತಿಕತೆಯಿಂದ ಈ ಸರ್ಕಾರ ರಚನೆಯಾಗಿಲ್ಲ. ಅಕ್ರಮವಾಗಿ ರಚಿಸಲಾದ ಸರ್ಕಾರ ಇದು. ಬಿಜೆಪಿಯಲ್ಲೇ ಬ್ಲ್ಯಾಕ್ ಮೇಲ್ ಹೇಳಿಕೆ ಬಂದಿದೆ. ಇದರ ಬಗ್ಗೆ ಸೂಕ್ತ ವಿಚಾರ ಬಯಲಾಗಬೇಕು’ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಯಡಿಯೂರಪ್ಪ ಅವರನ್ನು ಹೆದರಿಸಿ ಸಚಿವ ಸ್ಥಾನ ಪಡೆದಿದ್ದರೆ, ಅಂತವರ ವಿರುದ್ಧ ಯಡಿಯೂರಪ್ಪ ಕ್ರಿಮಿನಲ್ ಮೊಕದ್ದಮೆ ಹಾಕಲಿ’ ಎಂದು ವ್ಯಂಗ್ಯವಾಡಿದ್ದಾರೆ. ‘ ನಾನು ಮೊದಲೇ ಹೇಳಿದ್ದೆ ಅಧಿಕಾರ ನಡೆಸುತ್ತಿರುವುದು ಯಡಿಯೂರಪ್ಪ ಅಲ್ಲ ಬೇರೆಯವರು ಎಂದು. ಅದು ಈಗ ಕೆಲವರಿಗೆ ಗೊತ್ತಾಗುತ್ತಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights