‘ಸಿದ್ದರಾಮಯ್ಯ ಮುಖ ನೋಡಿ ಪಕ್ಷದಲ್ಲೇ ಉಳಿದೆ’ – ಶಾಸಕ ಭೀಮಾನಾಯ್ಕ್ ಹೊಸ ಬಾಂಬ್!

‘ನನಗೂ ಕೂಡ ಬಿಜೆಪಿಯವರು ಆಫರ್ ಕೊಟ್ಟಿದ್ದರು. ಆದರೆ ನಾನು ಸಿದ್ದರಾಮಯ್ಯ ಮುಖ ನೋಡಿ ಪಕ್ಷದಲ್ಲೇ ಉಳಿದೆ. ಹೋಗಿದ್ದರೆ ನಾನೂ ಸಚಿವನಾಗಿರುತ್ತಿದ್ದೆ’ ಎಂದು ಶಾಸಕ ಭೀಮಾನಾಯ್ಕ್ ಹೊಸ ಬಾಂಬ್ ಸಿಡಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಗಲಾಟೆ; ಶಾಸಕ ಭೀಮಾನಾಯ್ಕ ಸ್ಪಷ್ಟನೆ | Hagaribommanahalli MLA Bheema Naik Clarification On Viral Video - Kannada Oneindia

ಹೊಸಪೇಟೆಯಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಭೀಮಾನಾಯ್ಕ್,  ಬಿಎಸ್ ವೈ ಸರ್ಕಾರ ರಚೆನೆಯಾಗುವ ಸಂರ್ಧಭದಲ್ಲಿ ನನಗೂ ಕರೆ ಬಂದಿತ್ತು. ಬಿಜೆಪಿಗೆ ಬಂದ್ರೆ ಮಂತ್ರಿ ಮಾಡುವುದಾಗಿ ಆಫರ್ ಬಂದಿತ್ತು. ಒಂದು ವೇಳೆ ಅಲ್ಲಿಗೆ ಹೋಗಿದ್ದರೆ ಈಗ ನಾನು ಕೂಡ ಸಚಿವನಾಗುತ್ತಿದೆ. ಆದರೆ ನಾನು ಹಾಗೆ ಮಾಡಲಿಲ್ಲ. ಸಿದ್ಧರಾಮಯ್ಯಗೆ ಮೋಸ ಮಾಡಲು ನಮಗೆ ಮನಸ್ಸು ಬರಲಿಲ್ಲ ಎಂದರು.

2013- 2018ರ ವರೆಗೆ ಜೆಡಿಎಸ್ ಶಾಸಕನಾಗಿದ್ದರೂ ಸಿದ್ದರಾಮಯ್ಯ ಕೇಳಿದಷ್ಟು ಅನುದಾನ ಕೊಟ್ಟಿದ್ದರು. ನನ್ನನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದೇ ಸಿದ್ದರಾಮಯ್ಯ. ಹಾಗಾಗಿ ಬೇರೆಯವರು ಪಕ್ಷ ತೊರೆದರೂ ನನಗೆ ನನಗೆ ಹೋಗೋ ಮನಸ್ಸಾಗಲಿಲ್ಲ ಎಂದು ಭೀಮಾನಾಯ್ಕ್ ತಿಳಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights