FACT CHECK | ಪೊಲೀಸರನ್ನು ನಿಂದಿಸಿದರೆಂದು ಕೇರಳದ ಅಬಕಾರಿ ಸಚಿವರನ್ನು ಬಂಧಿಸಿದ್ದಾರೆ ಎಂಬುದು ನಿಜವೇ?

ಕೇರಳ ಪೊಲೀಸರು ಅಲ್ಲಿನ ಅಬಕಾರಿ ಮಂತ್ರಿಯನ್ನು ಬಲವಂತವಾಗಿ ಬಂಧಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸ್ ಆಪ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಪೊಲೀಸರಿಗೆ ಬೈದಿರುವುದಕ್ಕೆ, ಕೇರಳ ಪೊಲೀಸರು ಕೇರಳದ ಅಬಕಾರಿ ಮಂತ್ರಿಯನ್ನ ಎಳೆದುಕೊಂಡು ಹೋಗುತ್ತಿದ್ದಾರೆ, ಇದನ್ನು ನೀವು ಕರ್ನಾಟಕದಲ್ಲಿ ನೋಡಲು ಸಾಧ್ಯವೇ ?” ಎಂಬ ಸಂದೇಶದೊಂದಿಗೆ ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗುತ್ತಿದೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಘಿದ್ದರೆ ಸಂದೇಶದ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಾಟ್ಸಾಪ್‌ನಲ್ಲಿ ಪ್ರಸಾರವಾಗುತ್ತಿರುವ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು  ಕೇರಳ ಅಬಕಾರಿ ಸಚಿವರ ಕುರಿತ ಬಂಧನದ ಸುದ್ದಿಯನ್ನು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಸರ್ಚ್ ಮಾಡಿದಾಗ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಬಳಿಕ  ಕೇರಳ ಅಬಕಾರಿ ಸಚಿವ ಎಂ.ಬಿ.ರಾಜೇಶ್ ಅವರ ಫೇಸ್‌ಬುಕ್‌ ಪ್ರೊಫೈಲ್‌ ಅನ್ನು ಪರಿಶೀಲಿಸಿದಾಗ. ಈ ಪ್ರೊಫೈಲ್‌ ನಲ್ಲಿರುವ ವ್ಯಕ್ತಿ ಮತ್ತು ವೈರಲ್‌ ವೀಡಿಯೋದಲ್ಲಿರುವ ವ್ಯಕ್ತಿ ಬೇರೆ ಬೇರೆ ಎಂಬುದನ್ನು ಗಮನಿಸಿದ್ದೇವೆ.

Fact Check: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?

ಮತ್ತಷ್ಟು ಮಾಹಿತಿಗಾಗಿ ಗೂಗಲ್‌  ಸರ್ಚ್ ಮಾಡಿದಾಗ,4 ಮಾರ್ಚ್, 2024ರ ಮೀಡಿಯಾ ಒನ್ ಟಿವಿ ಲೈವ್ ಯೂಟ್ಯೂಬ್‌ ವೀಡಿಯೋ ಪತ್ತೆಯಾಗಿದೆ. ಇದರಲ್ಲಿ “ಎರ್ನಾಕುಲಂ ಡಿಸಿಸಿ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದಾರೆ.” (ಮಲಯಾಳದಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪ್ರಕಟಿಸಲಾಗಿದೆ.

ಮೀಡಿಯಾ ಒನ್ ಟಿವಿ ಲೈವ್ ಯೂಟ್ಯೂಬ್‌ ವೀಡಿಯೋ

ಈ ಯೂಟ್ಯೂಬ್‌ ವಿಡಿಯೋ ಮತ್ತು ವೈರಲ್‌ ಆಗಿರುವ ವಿಡಿಯೋ ದೃಶ್ಯಗಳಿಗೆ ಸಾಮ್ಯತೆ ಇದ್ದು, ಪೊಲೀಸರಿಗೆ ನಿಂದಿಸುವ ವ್ಯಕ್ತಿ ಒಬ್ಬರೇ ಆಗಿರುವುದನ್ನು ನೋಡಬಹುದು.

ವರದಿಗಳ ಪ್ರಕಾರ. ಮಾರ್ಚ್ 4, 2024ರ ಸಮಕಾಲಿಕಾ ಮಲಯಾಳಂ ವರದಿಯಲ್ಲಿ, “ನೆರಿಯಮಂಗಲಂನ ಕಂಜಿರವೇಲಿಯಲ್ಲಿ  ಕಾಡಾನೆ ದಾಳಿಯಿಂದ ಇಂದಿರಾ ರಾಮಕೃಷ್ಣನ್ ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಮುಖಂಡರಾದ ಡೀನ್ ಕುರಿಯಾಕೋಸ್ ಸಂಸದ, ಮ್ಯಾಥ್ಯೂ ಕುಝಲ್ನಾಡನ್ ಶಾಸಕ ಮತ್ತು ಕಾಂಗ್ರೆಸ್ ಎರ್ನಾಕುಲಂ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಿಯಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕೊತಮಂಗಲಂ ಪಟ್ಟಣದಲ್ಲಿ ಶವದೊಂದಿಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕಾಡು ಪ್ರಾಣಿಗಳ ಹಾವಳಿಗೆ ಪರಿಹಾರ ಕಂಡುಕೊಂಡ ನಂತರವೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಇಂದಿರಾ ಅವರ ಕುಟುಂಬ ನಿಲುವು ತೆಗೆದುಕೊಂಡ ನಂತರ ಕಾಂಗ್ರೆಸ್ ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು., ಮೆರವಣಿಗೆಯ ಸಮಯದಲ್ಲಿ ಪೊಲೀಸರು ಮೃತ ದೇಹವನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೆರವಣಿಗೆ ವೇಳೆ ಪೊಲೀಸರು ಶವವನ್ನು ತೆಗೆದುಕೊಂಡು ಹೋಗಲು ಯತ್ನಿಸಿದಾಗ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮೊಹಮ್ಮದ್ ಶಿಯಾಸ್ ಡಿವೈಎಸ್ಪಿಯನ್ನು ತಡೆದು ನಿಂದಿಸಿದ ಪರಿಣಾಮ ಮಾತಿನ ಚಕಮಕಿ ನಡೆಯಿತು ಎಂದು ಮ್ಯಾಥ್ಯೂ ಕುಝಲ್ನಾಡನ್ ಆರೋಪಿಸಿದ್ದಾರೆ.” ಎಂದಿದೆ. (ಮಲಯಾಳದಿಂದ ಅನುವಾದಿಸಲಾಗಿದೆ)

Fact Check: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?
ಸಮಕಾಲಿಕಾ ಮಲಯಾಳಂ ವರದಿ

ಮಾರ್ಚ್ 5, 2024ರ ಒನ್‌ ಮನೋರಮಾ ವರದಿ ಪ್ರಕಾರ “ ಶಾಸಕ ಮ್ಯಾಥ್ಯೂ ಕುಳನ್ನಾಡನ್, ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಶಿಯಾಸ್‌ ಸೇರಿದಂತೆ 30 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಸೋಮವಾರ ರಾತ್ರಿ ಕೊತ್ತಮಂಗಲದಲ್ಲಿ ಬಂಧಿಸಲಾಗಿದೆ. ಹಿರಿಯ ಮಹಿಳೆಯೊಬ್ಬರು ಆನೆದಾಳಿಯಲ್ಲಿ ಮೃತಪಟ್ಟ ಬಗ್ಗೆ ನಡೆಸಿದ ಪ್ರತಿಭಟನೆ ಸಲುವಾಗಿ ಈ ಬಂಧನ ನಡೆದಿದೆ ಎಂದು ತಿಳಿದು ಬಂದಿದೆ.” ಎಂದಿದೆ.

Fact Check: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?
ಆನ್‌ ಮನೋರಮಾ ವರದಿ

ಇದೇ ರೀತಿಯ ವರದಿಗಳನ್ನು ಇಲ್ಲಿಇಲ್ಲಿ ನೋಡಬಹುದು.

ಈ ವರದಿಗಳ ಪ್ರಕಾರ ನಾವು ಇನ್ನಷ್ಟು ಶೋಧ ನಡೆಸಿದ್ದು, ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನು ಪೊಲೀಸರು ಬಂಧಿಸುವ ವಿಡಿಯೋ ಲಭ್ಯವಾಗಿದೆ. 5 ಮಾರ್ಚ್  2024 ರಂದು ಮನೋರಮಾ ನ್ಯೂಸ್‌ ಟಿವಿ ಫೇಸ್‌ಬುಕ್‌ ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ಎರ್ನಾಕುಲಂ ಡಿಸಿಸಿ ಅಧ್ಯಕ್ಷ ಮುಹಮ್ಮದ್ ಶಿಯಾಸ್ ಅವರನ್ನು ಕೋತಮಂಗಲಂನ ಟೀ ಅಂಗಡಿಯಿಂದ ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ” ಎಂದಿದೆ.  ಈ ವಿಡಿಯೋ ಕೂಡ ವೈರಲ್‌ ವಿಡಿಯೋದ ಎರಡನೇ ಭಾಗಕ್ಕೆ ಸಾಮ್ಯತೆಯನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಪ್ರಕರಣ, ಕೊತ್ತಮಂಗಲದಲ್ಲಿ ಆನೆದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ಮೃತದೇಹವನ್ನು ಅಲ್ಲಿಂದ ಸಾಗಿಸಲು ಯತ್ನಿಸಿದ್ದಾರೆ ಈ ವೇಳೆ ಮಾತಿನ ಚಕಮಕಿ, ಘರ್ಷಣೆ ನಡೆದಿದ್ದು, ಎರ್ನಾಕುಳಂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಶಿಯಾಸ್ ಅವರು ಪೊಲೀಸರನ್ನು ಬೈಯ್ದಿದ್ದಾರೆ. ಆ ಬಳಿಕ ಘಟನೆಗೆ ಸಂಬಂಧಿಸಿದಂತೆ ಶಿಯಾಸ್‌ ಅವರೂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಹಾತ್ಮ ಗಾಂಧಿ ಬಗ್ಗೆ ಮಹಾನ್ ಸುಳ್ಳು ಹೇಳಿದ ಪ್ರಧಾನಿ ಮೋದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights