ಸಮೃದ್ಧ, ಸಮಾನತೆಯ ಭಾರತ ನಿರ್ಮಾಣಕ್ಕಾಗಿ ದೇಶಪ್ರೇಮಿ ಯುವಾಂದೋಲನಕ್ಕೆ KVS‌ ಕರೆ!

ಯುವ ಹೋರಾಟಗಾರ್ತಿ ಮಲಾಲ ಯೂಸುಫ್‍ಝಾಯಿ ಅವರ “ನಾನು ನನ್ನ ದನಿಯೆತ್ತುವುದು ಕೂಗಾಡುವುದಕ್ಕಲ್ಲ; ಬದಲಿಗೆ ಯಾರ ದನಿಗಳು ಆಲಿಸಲ್ಪಡುವುದಿಲ್ಲವೋ ಅವುಗಳನ್ನು ಕೇಳಿಸುವಂತೆ ಮಾಡುವುದಕ್ಕಾಗಿ!”  ಎಂಬ ಘೋಷಣೆಯ ಸ್ಪೂರ್ತಿಯೊಂದಿಗೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS‌) ಯು ಸಮೃದ್ಧ, ಸಮಾನತೆಯ ಭಾರತ ನಿರ್ಮಾಣಕ್ಕಾಗಿ ಯುವಾಂದೋಲನ ಕಟ್ಟಲು ದೇಶಪ್ರೇಮಿ ಯುವಜನರಿಗೆ ಕರೆ ಕೊಟ್ಟಿದೆ.

ಈ ಶತಮಾನ ಯುವಜನರ ಕ್ರಿಯಾಶೀಲತೆ, ಸಾಮಾಜಿಕ ಪ್ರಜ್ಞೆ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಸಲ್ಲುವ ಶತಮಾನವಾಗಿದೆ. ವಿಶೇಷವಾಗಿ ವಿಶ್ವದ ಯುವಜನರ ಸಂಖ್ಯೆಯಲ್ಲಿ ಶೇ.5ರಷ್ಟನ್ನು ಹೊಂದಿರುವ ಭಾರತ ದೇಶ ಸದ್ಯದಲ್ಲೇ ಪ್ರಪಂಚದ ಯುವ  ದೇಶಗಳಲ್ಲಿ ಒಂದೆನಿಸಿಕೊಳ್ಳಲಿದೆ. ಹೀಗಿರುವ ದೇಶದಲ್ಲಿ ಯುವಜನರ ಶಕ್ತಿ-ಸಾಮಥ್ಯಗಳನ್ನು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ, ಹಳ್ಳಿಗಳನ್ನು ಸ್ವಯಂಪೂರ್ಣಗೊಳಿಸುವುದಕ್ಕೆ, ಜಾತಿ-ಅಸ್ಪøಶ್ಯತೆ, ಮೌಢ್ಯಾಚರಣೆಗಳೆ ಮುಂತಾದವುಗಳ ನಿವಾರಣೆಗೆ, ಪರಿಸರ ಸಂರಕ್ಷಣೆಗೆ, ಭಾರತದ ವೈವಿಧ್ಯಮಯ ವಿಶೇಷ ಜನಪದ ಸಂಸ್ಕøತಿಯ ಕಲಿಕೆ-ಮುಂದುವರಿಕೆಗೆ, ವಿನಾಶದತ್ತ ಸಾಗಿರುವ ಕೃಷಿಕರ ಪರಿಸ್ಥಿತಿಯ ಪುನಶ್ಚೇತನಕ್ಕೆ- ಒಟ್ಟಿನಲ್ಲಿ ದೇಶಕಟ್ಟುವ ರಚನಾತ್ಮಕ ಕೆಲಸಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಿದೆ. ಯುವಜನರ ಅಪೂರ್ವ ಸೃಜನಶೀಲ ಸಾಧ್ಯತೆಗಳನ್ನು ದೇಶದಲ್ಲಿ ಹೊಸಬಗೆಯ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಪೋಷಿಸಬಹುದು. ಅದಕ್ಕಾಗಿ ಬೇಕಿರುವುದು ಪೂರಕವಾದ ನೀತಿಗಳು ಮತ್ತು ಯೋಜನೆಗಳು. ವಿಶೇಷವಾಗಿ, ಭಾರತ ಈಗ ರೂಪಿಸುವ ಎಲ್ಲ ಅಭಿವೃದ್ಧಿ ಯೋಜನೆಗಳು ಮತ್ತು ನೀತಿಗಳೂ ಯುವಜನರ ಸಾಮಥ್ರ್ಯವನ್ನು ಗರಿಷ್ಟ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತಹವಾಗಿರಬೇಕು. ವರ್ಗ-ಜಾತಿ-ಲಿಂಗ-ಧರ್ಮದ ಆಧಾರದಲ್ಲಿ ವಿಭಜನೆಗೊಂಡಿರುವ ಭಾರತದ ಸಮಾಜದಲ್ಲಿ ಕೇವಲ ಘೋಷಿತ ಕಾರ್ಯಸೂಚಿ ಮಾತ್ರ ಇದ್ದರೆ ಸಾಲದು. ಆ ಕಾರ್ಯಸೂಚಿಯು ಎಲ್ಲ ಸ್ತರಗಳ ಜನಸಮುದಾಯಗಳನ್ನೂ ತಲುಪುವ ಉದ್ದೇಶ ಹೊಂದಿರಬೇಕು ಮತ್ತು ಎಲ್ಲ ಯುವಜನರನ್ನೂ ಒಳಗೊಳ್ಳುವಂಥದ್ದಾಗಿರಬೇಕು. ಯುವಜನರ ಶಕ್ತಿ-ಸಾಧ್ಯತೆಗಳ ಅರಳುವಿಕೆಗೆ ಪೂರ್ಣ ಅವಕಾಶ ದೊರೆತರಷ್ಟೇ ಭಾರತದ ನಿಜವಾದ ಅಭಿವೃದ್ಧಿ ಸಾಧಿತವಾಗಲಿದೆ. ಆಗಷ್ಟೇ ಈ ಮಾನವ ಸಂಪನ್ಮೂಲಕ್ಕೊಂದು ಅರ್ಥ ಬರುತ್ತದೆ. ಆದರೆ, ಈಗಿರುವ ವಾಸ್ತವ ಈ ಆಶಯಕ್ಕಿಂತ ಬಹಳ ದೂರದಲ್ಲಿದೆ.

ಪೋಷಕರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಅನ್ನುವುದರ ಮೇಲೆ ಮಕ್ಕಳ ಶಿಕ್ಷಣದ ಗುಣಮಟ್ಟ ನಿರ್ಧಾರವಾಗುತ್ತಿದೆ! ಸಾಲದಕ್ಕೆ ಶಿಕ್ಷಣವನ್ನು ವ್ಯಾಪಾರ ಮಾಡುವ ಬಗೆಬಗೆಯ ಮೋಸದ ಉಪಾಯಗಳನ್ನು ಸರ್ಕಾರವೇ ಮುಂದೆ ನಿಂತು ನೀತಿಗಳನ್ನು ರೂಪಿಸುತ್ತಿದೆ. ವ್ಯಾಪಾರದ ಚಕ್ರವ್ಯೂಹಗಳನ್ನು ಭೇದಿಸಿ ಶಿಕ್ಷಣ ಪಡೆದು ಪದವೀಧರರಾಗುವ ಯುವಜನರಿಗೆ ಘನತೆಯಿಂದ ಜೀವಿಸುವ ಉದ್ಯೋಗ ಸಿಗುವ ಬಗ್ಗೆ ಯಾರಿಗೂ ನಂಬಿಕೆ ಇಲ್ಲ. ಕಳೆದ 46 ವರ್ಷಗಳಲ್ಲೇ ನಿರುದ್ಯೋಗವು ಇಂದು ಐತಿಹಾಸಿಕವಾಗಿ ಏರಿಕೆಯಾಗಿದೆ. ಜಾತಿ ಧರ್ಮದ ಕಾರಣಕ್ಕೆ ದೌರ್ಜನ್ಯ, ಕೊಲೆ, ಅತ್ಯಾಚಾರಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಇನ್ನು ಇಂತಹ ಹತ್ತಾರು ಗಂಭೀರವಾದ ಸಮಸ್ಯೆಗಳ ನೇರ ಬಲಿಪಶುಗಳಾಗುತ್ತಿರುವುದು  ಯುವಜನರೇ ಆಗಿದ್ದಾರೆ. ಅದರಲ್ಲೂ ಅವಕಾಶಗಳಿಂದ ದೂರ ಉಳಿಸಲ್ಪಟ್ಟಿರುವ ತಳ ಸಮುದಾಯದ ಯುವಜನರೇ ಆಗಿದ್ದಾರೆ.

ವಿಶ್ವ ಆರ್ಥಿಕ ಸಂಸ್ಥೆ ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಷನ್ ಸಂಸ್ಥೆಗಳು ಜೊತೆಗೂಡಿ ಸುಮಾರು 5000 ಮಂದಿ ಆಯ್ದ ವಿವಿಧ ಹಿನ್ನೆಗಳಿಂದ ಬಂದಿರುವ ಯುವಜನರನ್ನು  ಅಧ್ಯಯನ ಮಾಡಿದವು. ಅದರ ಮುಖ್ಯಾಂಶಗಳು ಅನೇಕ ವಿಶೇಷವಾದ ಒಳನೋಟಗಳನ್ನು ನೀಡುತ್ತಿದೆ.

ಇದನ್ನೂ ಓದಿ: ಕೃಷಿ ನೀತಿಗಳ ಪ್ರಚಾರಕ್ಕೆ ರೈತನ ಫೋಟೋ ಬಳಿಸಿದ ಸರ್ಕಾರ; BJPಗೆ ಲೀಗಲ್‌ ನೋಟಿಸ್‌ ನೀಡಿದ ರೈತ!

ಮೊದಲನೇಯದಾಗಿ, ಅಧ್ಯಯನವು ತೋರಿಸುತ್ತಿರುವಂತೆ, ಭಾರತದ ಯುವಜನರು ಸಾಮರ್ಥ್ಯವುಳ್ಳವರು ಮತ್ತು ಮಹತ್ವಾಕಾಂಕ್ಷಿಗಳಾಗಿದ್ದಾರೆ. ಅವರು ಸಂದರ್ಭಕ್ಕೆ ತಕ್ಕಂತಹ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ, ಅಧ್ಯಯನವು ಸಂದರ್ಶಿಸಿದ ಯುವಜನರಲ್ಲಿ ಶೇ.51 ಮಂದಿ, ಯುವಜನರಿಗೆ ಸರಿಯಾದ ಮಾರ್ಗದರ್ಶನ ಲಭ್ಯವಿಲ್ಲ ಎಂದು ಅಭಿಪ್ರಾಯಪಟ್ಟರೆ, ಶೇ.30ರಷ್ಟು ಮಂದಿ ಮಾರ್ಗದರ್ಶನದ ಜೊತೆಗೆ ಸೂಕ್ತ ಅವಕಾಶಗಳೂ ಕೂಡಾ ಲಭ್ಯವಿಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಂದರೆ, ದೇಶದ  ಯುವಜನರ ಸಾಮಥ್ರ್ಯದ ಸಂಪೂರ್ಣ ಸದುಪಯೋಗಕ್ಕೆ ಬೇಕಿರುವ ಅಡಿಪಾಯವೇ ನಮ್ಮಲ್ಲಿಲ್ಲ ಎಂದಾಯಿತು.

ಹಾಸ್ಟೆಲ್ ಸಮಸ್ಯೆ ಪರಿಹರಿಸಲು ಒತ್ತಾಯ | Udayavani – ಉದಯವಾಣಿ

ಅಧ್ಯಯನವು ಹೊರತಂದಿರುವ ಎರಡನೇ ಮುಖ್ಯವಾದ ಸಂಗತಿಯೆಂದರೆ, ಸಂದರ್ಶನ ನೀಡಿದವರಲ್ಲಿ ಶೇ.83 ಯುವಜನರ ಪ್ರಕಾರ,  ಬಹುಪಾಲು ಭಾರತೀಯ ಯುವಜನರು ಉನ್ನತ ಶಿಕ್ಷಣ ಪಡೆಯುವುದನ್ನು ಬಯಸುತ್ತಾರೆ. ಸಂದರ್ಶಿಸಲಾದ ಶೇ.97ರಷ್ಟು ಯುವಜನರು ಶಿಫಾರಸ್ಸು ಮಾಡುವುದೆಂದರೆ, ಉತ್ತಮ ಗುಣಮಟ್ಟದ ದುಬಾರಿಯಲ್ಲದ ಸುಲಭವಾಗಿ ಎಲ್ಲರ ಕೈಗೆಟಕುವ ಉನ್ನತ ಶಿಕ್ಷಣವನ್ನು ಒದಗಿಸುವಂತಹ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು ಎಂದು. ಈ ವಿಷಯದಲ್ಲೂ ಬಹಳ ಆಶಾದಾಯಕವಾದ ಚಿತ್ರಣವೇನೂ ನಮ್ಮ ಕಣ್ಣಮುಂದಿಲ್ಲ. ‘ವಿಶ್ವವಿದ್ಯಾಲಯ ಧನಸಹಾಯ ಆಯೋಗ’ವನ್ನೇ ಕೇವಲ ಕಾಗದದ ಹುಲಿಯನ್ನಾಗಿಸಿ, ಇಷ್ಟು ದಿನಗಳ ಕಾಲ ಅತ್ಯಂತ ಸಾಮಾನ್ಯ ದರ್ಜೆಯಲ್ಲಿರುವ ಕಾಲೇಜುಗಳಿಗೂ ಏನೋ ಒಂದಷ್ಟಾದರೂ ದಕ್ಕುತ್ತಿದ್ದ ಹಣಸಹಾಯವನ್ನು ಈಗಿನ ಕೇಂದ್ರ ಸರ್ಕಾರ ಇಲ್ಲವಾಗಿಸುತ್ತಿರುವ ಹೊತ್ತಿನಲ್ಲಿ ಭಾರೀ ದುಬಾರಿ ಖಾಸಗಿ ಶಿಕ್ಷಣವನ್ನು ಪಡೆದುಕೊಳ್ಳಲಾಗದ ಯುವಜನರಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗುತ್ತಿದೆ.

ಇದನ್ನೂ ಓದಿ: ಗೋದಿ ಮೀಡಿಯಾ ಮೇಲೆ ನಂಬಿಕೆ ಇಲ್ಲ; ತಮ್ಮದೇ ಹೊಸ ಸುದ್ದಿಪತ್ರ ಆರಂಭಿಸಿದ ರೈತರು!

ಮೂರನೇಯದಾಗಿ, ಸಮಾಜದಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳೂ ಕೂಡಾ ಯುವಜನರ ಭವ್ಯ ಭವಿತವ್ಯಕ್ಕೆ ಅಡ್ಡಿಯಾಗಿವೆಯೆಂದು ಶೇ.58 ರಷ್ಟು ಯುವಜನರು ಸಂದರ್ಶನದಲ್ಲಿ ಹೇಳಿದ್ದಾರೆ. ತಮ್ಮ ಕೌಟುಂಬಿಕ ಹಿನ್ನೆಲೆ, ಜಾತಿ, ಲಿಂಗ ಮತ್ತು ಇತರ ಅಂಶಗಳು ವೃತ್ತಿಪರ ಬದುಕಿಗೆ ಅಡಚಣೆಯಾಗಿವೆಯೆಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ಪೂರ್ತಿ ದಿನದ ಕೆಲಸಕ್ಕೆ (ಫುಲ್ ಟೈಂ) ಅಥವಾ ವಿವಿಧ ಪಾಳಿಗಳ ಕೆಲಸಕ್ಕೆ ಸೂಕ್ತರಲ್ಲವೆಂಬ ಭಾವನೆ ಅನೇಕ ಪ್ರತಿಭಾವಂತ ಹೆಣ್ಣುಮಕ್ಕಳ ಅವಕಾಶಗಳನ್ನು ಕಸಿದುಕೊಂಡಿದೆಯೆಂದು ಸಂದರ್ಶನದಲ್ಲಿ ಪಾಲ್ಗೊಂಡ ಯುವತಿಯರಲ್ಲಿ ಶೇ.38ರಷ್ಟು ಜನರು ಹೇಳಿದ್ದಾರೆ.

ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಯುವಜನರ ಮೇಲೆ ನಮ್ಮ ಹೂಡಿಕೆ ಎಷ್ಟಿದೆ ಇಂದು? ಕಳೆದ 5 ವರ್ಷಗಳ ಅಂಕಿ ಅಂಶಗಳು ತೋರಿಸುವಂತೆ ಪ್ರತಿಯೊಬ್ಬ ಯುವಕ ಅಥವಾ ಯುವತಿಯ ಮೇಲೆ, ಅವರ ಶಿಕ್ಷಣ, ಆಹಾರ, ಆರೋಗ್ಯ, ಕೌಶಲ್ಯ ತರಬೇತಿಗಳು ಎಲ್ಲವನ್ನೂ ಸೇರಿದಂತೆ ಸರಾಸರಿ 2710 ರೂಗಳನ್ನು ಕೇಂದ್ರ ಸರ್ಕಾರದ ವತಿಯಿಂದ ಖರ್ಚು ಮಾಡಲಾಗುತ್ತಿತ್ತು. ಒಟ್ಟಾರೆಯಾಗಿ ಇದಕ್ಕೆ ಕೇಂದ್ರ ಖರ್ಚು ಮಾಡಿದ್ದ ಮೊತ್ತ 90,000 ಕೋಟಿ. ಇಷ್ಟೇ ಮೊತ್ತವನ್ನು ರಾಜ್ಯ ಸರ್ಕಾರಗಳೂ ಖರ್ಚು ಮಾಡುತ್ತವೆಂದು ಭಾವಿಸುವುದಾದರೂ ಆ ಎಲ್ಲ ಮೊತ್ತ ಸೇರಿ ದೇಶದ ಜಿಡಿಪಿಯ ಶೇ.1ರಷ್ಟೂ ಆಗುವುದಿಲ್ಲ. 2018ರ ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಯಾವುದೇ ಬೆಳವಣಿಗೆ ಹೊಂದುತ್ತಿರುವ ದೇಶದ ಯುವ ಶಕ್ತಿಯ ಸಾಧಾರಣ ಬೆಳವಣಿಗೆಗೆ ಜಿಡಿಪಿಯ ಶೇ.4ರಷ್ಟನ್ನು ಮೀಸಲಿಡಲೇಬೇಕೆಂದು ಹೇಳುತ್ತದೆ.

ಸಹಿ ಸಂಗ್ರಹ ಅಭಿಯಾನ | Prajavani

ನಮ್ಮ ದೇಶದಲ್ಲಿ ಸರಾಸರಿ ನಿರುದ್ಯೋಗದ ಪ್ರಮಾಣ ಹಲವು ಮುಂದುವರೆದ ದೇಶಗಳಷ್ಟಿಲ್ಲವಾದರೂ, ಕೇವಲ ಉದ್ಯೋಗಾರ್ಹ ಯುವಜನರ ಅಂಕಿ ಸಂಖ್ಯೆಗಳನ್ನು ನೋಡಿದಾಗ, ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಶೇ.18.7ರಷ್ಟಿದೆ. ಭಾರತದ ಯುವಶಕ್ತಿಯ ಶೇ.37ರಷ್ಟು ಮಂದಿ ಅರೆ ಉದ್ಯೋಗಗಳಲ್ಲಿ ಸಿಲುಕಿಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅದರಲ್ಲೂ ಕೋವಿಡ್ ಪರಿಸ್ಥಿತಿಯ ನಂತರ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಸ್ವತಂತ್ರ ಅಧ್ಯಯನಗಳು ಹೇಳುವಂತೆ ಭಾರತದ ಉದ್ಯೋಗ ನಷ್ಟ ಈ ಅವಧಿಯಲ್ಲಿ ಸುಮಾರು 14 ಕೋಟಿ. ಅದರಲ್ಲಿ ಯುವಜನರು ಕಳೆದಕೊಂಡ ಉದ್ಯೋಗಗಳ ಸಂಖ್ಯೆಯೇ ಸುಮಾರು 2.9 ಕೋಟಿ. ಇದು ಇನ್ನಷ್ಟು ಹಿಗ್ಗುವ ನಿರೀಕ್ಷೆಯಿದೆ. ಅಂದರೆ ಯುವಜನರ ನಡುವಿನ ನಿರುದ್ಯೋಗದ ಪ್ರಮಾಣ ಹೆಚ್ಚಲಿದೆ.

ಇದನ್ನೂ ಓದಿ: ‘ರೈತರನ್ನು ದಾರಿ ತಪ್ಪಿಸಬೇಡಿ’ – ವಿರೋಧ ಪಕ್ಷಗಳಿಗೆ ಕೈಜೋಡಿಸಿ ಕೇಳಿಕೊಂಡ ಮೋದಿ..!

ದುರಂತವೆಂದರೆ ಇಂತಹ ಕರಾಳ ಸಂದರ್ಭವು ನಮ್ಮ ಒಳಿತಿಗಾಗಿಯೇ ಆಗಿದೆ ಎಂದು ಯುವಜನರು ನಂಬಿದ್ದಾರೆ-ನಂಬಿಸಲಾಗಿದೆ. ಅಮೂಲ್ಯವಾದ ಯುವಜನರನ್ನೊಳಗೊಂಡ ಮಾನವ ಸಂಪನ್ಮೂಲದ ಸಮರ್ಪಕ ತೊಡಗಿಸಿಕೊಳ್ಳುವಿಕೆಯ ದೂರದರ್ಶಿತ್ವವೇ ಇಲ್ಲದ ಆರ್ಥಿಕ ನೀತಿಗಳು, ಖಾಸಗೀಕರಣ ಮತ್ತು ಅಸಮಾನತೆಯಿಂದ ತುಂಬಿ ತುಳುಕುತ್ತಿರುವ ಶಿಕ್ಷಣ ವ್ಯವಸ್ಥೆ ಹಾಗೂ ಅವುಗಳಿಂದ ಉಂಟಾಗಿರುವ ನಿರಂತರವಾಗಿ ನಡೆಯಬೇಕಾದ ಸುಸ್ಥಿರವಾದ ಉದ್ಯೋಗ ಸೃಷ್ಟಿಯು ಇಲ್ಲವಾಗಿರುವ ಪರಿಸ್ಥಿತಿಯು ಯುವಜನರ ಬದುಕನ್ನು ನರಕಸಮಾನವಾಗಿಸುತ್ತಿದೆ.

ಘನತೆಯ ಬದುಕು ಕಟ್ಟಿಕೊಳ್ಳುವ ಅವಕಾಶಗಳ ಕೊರತೆ ಮಾತ್ರವಲ್ಲ, ನಮ್ಮ ದೇಶದ ಯುವಜನರನ್ನು ಸರಿಯಾದ ತತ್ವಾದರ್ಶಗಳ ಕೊರತೆಯೂ ಕಾಡುತ್ತಿದೆ. ಆಧುನಿಕ ಶಿಕ್ಷಣ ಮತ್ತು ಮಾಧ್ಯಮದ ಪ್ರಭಾವದಿಂದ ಮುಕ್ತವಾದ ವೈಜ್ಞಾನಿಕವಾದ ಚಿಂತನೆಯ ಕಡೆಗೆ ಹೋಗಬೇಕಿದ್ದ ನಮ್ಮ ದೇಶದ ಯುವಜನರು, ಅದರ ಬದಲಿಗೆ ಜಾತೀವಾದ, ಧರ್ಮಾಧಾರಿತ ತಾರತಮ್ಯ ಮತ್ತು ಮೌಢ್ಯತೆಯನ್ನು ಪ್ರತಿಪಾದಿಸುವ ನಾಯಕರನ್ನು ತಮ್ಮ ಮಾದರಿಯನ್ನಾಗಿ ಭಾವಿಸುತ್ತಿರುವುದು ದೇಶದ ಭವಿಷ್ಯದ ಬಗ್ಗೆ ಚಿಂತೆ ಹುಟ್ಟಿಸಿದೆ. ಇದೆಲ್ಲದರೆ ಮಧ್ಯೆ ಜಾಗತಿಕ ಹಸಿವು, ಪ್ರಜಾಪ್ರಭುತ್ವ, ಮಹಿಳಾ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಜಾತಿ ದೌರ್ಜನ್ಯ, ಸಂತೋಷಭರಿತ ಜೀವನ ಸೂಚ್ಯಾಂಕಗಳಲ್ಲಿ ಭಾರತವು ಇತರೆ ಬಡ ದೇಶಗಳಿಗಿಂತ ಕಳಪೆ ಸಾಧನೆಯನ್ನು ಮಾಡಿರುವುದು ನಮಗೆಲ್ಲಾ ಗೊತ್ತೇಯಿದೆ.

ನಿರುದ್ಯೋಗ ಭಾರತ ಬಿಟ್ಟು ತೊಲಗು” ಅಭಿಯಾನಕ್ಕೆ ಕಲಬುರಗಿಯಲ್ಲಿ ಚಾಲನೆ - ಇ ಮೀಡಿಯಾ ಲೈನ್

ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ಯುವಜನರು ಹಾಗೂ ಭಾರತದ ವಿವೇಕಯುತ ನಾಗರೀಕರು ಸೇರಿ  ಮಾಡಬೇಕಿರುವುದೇನು? ಭವ್ಯ ಭಾರತ ಕಟ್ಟುವುದರಲ್ಲಿ ತೊಡಗಬೇಕಾದ ನಮ್ಮಂತಹ ಯುವಜನರ ಇಂದಿನ ಸ್ಥಿತಿಯನ್ನು ಕಂಡು ಮರುಕಪಡುತ್ತಾ ಕುಳಿತುಕೊಳ್ಳುವುದೇ? ಯುವಜನರನ್ನು ತಪ್ಪು ದಾರಿಗೆಳೆಯುತ್ತಿರುವ ಮತಾಂಧ ಶಕ್ತಿಗಳ ಮುಷ್ಟಿಗೆ ಅಸಹಾಯಕರಾಗಿ ಸಿಲುಕಿಕೊಳ್ಳುವುದೇ? ಇಚ್ಛಾಶಕ್ತಿ ಮತ್ತು ದೂರದರ್ಶಿತ್ವಗಳ್ಯಾವುದೂ ಇಲ್ಲದ ರಾಜಕೀಯ ನಾಯಕರನ್ನು ಟೀಕಿಸುತ್ತಾ ಕಾಲಕಳೆಯುವುದೇ? ಅಥವಾ ಇದ್ಯಾವುದೂ ನಮಗೆ ಕಾಣುತ್ತಲೇ ಇಲ್ಲವೆಂಬಂತಹ ಜಾಣಕುರುಡನ್ನು ನಟಿಸುತ್ತಾ ಸುಮ್ಮನಿರುವುದೇ?

ಇದನ್ನೂ ಓದಿ: ಕನ್ನಡದ ಬಕೆಟ್ ಮಾಧ್ಯಮಗಳು: ಹೋರಾಟ ನಿರತ ರೈತರ ಸಾವು ಇವರಿಗೆ ಸುದ್ದಿಯೇ ಅಲ್ಲ!

ಇಂತಹ ಪರಿಸ್ಥಿತಿಯಲ್ಲಿ ಬೆಳ್ಳಿರೇಖೆಗಳಂತೆ ಯುವಜನರ ಕ್ರಿಯಾಶೀಲತೆಯೂ ಕಂಡುಬರುತ್ತಿದೆ. ಭಾರತದ ಪ್ರಜೆಗಳ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಇಡಿಯ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಜವಾದ ದೇಶಪ್ರೇಮದ ಮಾರ್ಗದ ಬದಲು, ಯುವಜನರನ್ನು ಜಾತಿ-ಧರ್ಮಗಳಲ್ಲಿ ಒಡೆದು ವಿಷ ತುಂಬುವ ಕೆಲಸ ಧರ್ಮಾಂಧ ಶಕ್ತಿಗಳಿಂದ ಸತತವಾಗಿ ನಡೆಯುತ್ತಿರುವಾಗಲೂ, ಅಲ್ಲಲ್ಲಿ ಆಶಾವಾದದ ಬುಗ್ಗೆಗಳಂತೆ ವಿವೇಚನೆಯುಳ್ಳ ಯುವಜನರು ಕೆಡವುವ ಬದಲು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆಳುವವರ ಕಣ್ಕಟ್ಟನ್ನು ಬಯಲುಮಾಡುವ, ಪ್ರಶ್ನಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿ ದೌರ್ಜನ್ಯಗಳ ವಿರುದ್ಧ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳ ವಿರುದ್ಧ, ತಮ್ಮ ಶೈಕ್ಷಣಿಕ ಮತ್ತು ಉದ್ಯೋಗದ ಹಕ್ಕುಗಳಿಗಾಗಿ, ಪರಿಸರವನ್ನು ಕಾಪಾಡುವುದಕ್ಕಾಗಿ-ಇಂತಹ ಇನ್ನೂ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಂಘಟಿತರಾಗುತ್ತಿದ್ದಾರೆ.

ಹೀಗೆ, ಇಂದು ನಾವು  ಮಾಡಬೇಕಾದ ಕೆಲಸಗಳು ಹಲವಿವೆ.

  • ತಮ್ಮ ಮತ್ತು ಜನಸಾಮಾನ್ಯರ ಹಕ್ಕುಗಳ ಮೇಲೆ ದಾಳಿಗಳಾಗಾದ ದನಿಯಿಲ್ಲದವರ ಪರವಾಗಿ ದನಿಯೆತ್ತುವುದು ಯುವಸಮುದಾಯದ ಕರ್ತವ್ಯವಾಗಿದೆ.
  • ಬಹುಸಂಸ್ಕøತಿಯ ತವರೂರಾದ ಭಾರತದ ಕೂಡಿಬಾಳುವ ಪರಂಪರೆಯನ್ನು, ಜಾಗತಿಕ ಆದರ್ಶಗಳಾದ ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವಗಳನ್ನು, ಅದ್ಭುತವಾದ ನಮ್ಮ ಸಂವಿಧಾನದ ಆಶಯವಾದ ಸಮಾನಾವಕಾಶಗಳು ಮತ್ತು ಸಾಮಾಜಿಕ ನ್ಯಾಯವನ್ನು ತ್ರಿಪಡಿಸಲು ಯುವಜನರು ಕಾರ್ಯಪ್ರವೃತ್ತರಾಗಬೇಕಿದೆ.
  • ಸಮಾಜದ ಸುಧಾರಣೆಗೆ ಬೇಕಿರುವ ರಚನಾತ್ಮಕ ಕೆಲಸಗಳನ್ನು ನಿರ್ವಹಿಸಲು ಯುವಜನರ ತಂಡಗಳು ಕೆಲಸ ಮಾಡಬೇಕು.
  • ಶಿಕ್ಷಣ, ಆರೋಗ್ಯ ಮತ್ತು ಪರಿಸರದಂತಹ ಇಡೀ ಜನಸಮೂಹಕ್ಕೆ ಸಂಬಂಧಪಟ್ಟ ವಿಷಯಗಳನ್ನು ಉತ್ತಮಪಡಿಸಲು ಯುವಜನರ ಕೊಡುಗೆ ಅಗತ್ಯವಿದೆ. ವಿಜ್ಞಾನ ತಂತ್ರಜ್ಞಾನದ ಮೂಲಕ, ಹೊಸ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು.     ರೈತರು, ಕಾರ್ಮಿಕರು ಮೊದಲಾದ ವಿವಿಧ ಜನಸಮುದಾಯಗಳ ಅಗತ್ಯಗಳನ್ನು ಪೂರೈಸಲು ಯುವಜನರು ನೆರವಾಗಬಲ್ಲರು.
  • ಎಲ್ಲಕ್ಕಿಂತ ಮುಖ್ಯವಾಗಿ ಉದ್ಯೋಗಾವಕಾಶಗಳ ಕೊರತೆಯ ಕಾರಣಕ್ಕಾಗಿ ಅತಂತ್ರ ಸ್ಥಿತಿಯಲ್ಲಿ ತೊಳಲಾಡುತ್ತಿರುವ ಅಸಂಖ್ಯಾತ ಯುವಜನರಿಗೆ ನೆರವಾಗಬಲ್ಲ ಪರ್ಯಾಯ ಉದ್ಯೋಗ ಮಾದರಿಗಳ ಸೃಷ್ಟಿಗಾಗಿ ಶ್ರಮಿಸಬೇಕು.

ಅಂತಹ ಕಾರ್ಯಕ್ಕೆ ಸನ್ನದ್ಧರಾಗಿ ಪ್ರಯತ್ನಶೀಲರಾಗಬಲ್ಲ ದೇಶಪ್ರೇಮಿ ಯುವಜನರಿಗಾಗಿ ಈ ಕರೆ. Oppose the Oppression, Serve the Society, Youth for Unity ಎಂಬ ಘೋಷವಾಕ್ಯಗಳ ಅಡಿಯಲ್ಲಿ ಒಗ್ಗೂಡಿ ಕೆಲಸ ಮಾಡಲು ‘ದೇಶಪ್ರೇಮಿ ಯುವಾಂದೋಲನ’ ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತಿದೆ ಎಂದು ಕೆವಿಎಸ್‌ ಹೇಳಿದೆ.

ಈ ದೇಶವನ್ನು ನಿಜವಾಗಿಯೂ ಸಮಗ್ರವಾದ ಅಭಿವೃದ್ಧಿಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಶಕ್ತಿ ಇರುವುದು ಭಾರತದ ಯುವಸಮುದಾಯಕ್ಕೆ. ಹಾಗಾಗಿ ಯುವಜನರೆಲ್ಲರೂ ಸೇರಿ ಸಮೃದ್ಧ, ಸಮಾನತೆಯ ಭಾರತವನ್ನು ಕಟ್ಟಲು ಜೊತೆಗೂಡಬೇಕು. ಆಂದೋಲನದ ಜೊತೆಗೂಡುವವರು 9686842196 ಸಂಪರ್ಕಿಸಲು ಕೆವಿಎಸ್‌ ಕೋರಿದೆ.


ಇದನ್ನೂ ಓದಿ: ರೈತ ಹೋರಾಟದಲ್ಲಿ ದಲಿತ-ಭೂರಹಿತ ಕಾರ್ಮಿಕರು ಭಾಗಿಯಾಗಿದ್ದಾರೆ? ಅವರಿಗೂ ಹೋರಾಟಕ್ಕೂ ಏನು ಸಂಬಂಧ? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights