‘ರೈತರನ್ನು ದಾರಿ ತಪ್ಪಿಸಬೇಡಿ’ – ವಿರೋಧ ಪಕ್ಷಗಳಿಗೆ ಕೈಜೋಡಿಸಿ ಕೇಳಿಕೊಂಡ ಮೋದಿ..!
ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸುವಂತೆ ಪಿಎಂ ಮೋದಿ ಇಂದು ವಿರೋಧ ಪಕ್ಷಗಳಿಗೆ ಕೈಮುಗಿದು ಕೇಳಿಕೊಂಡಿದ್ದಾರೆ. ತಮ್ಮ “ಹಳೆಯ ಚುನಾವಣಾ ಪ್ರಣಾಳಿಕೆ” ಗಳ ಎಲ್ಲಾ ಮನ್ನಣೆಯನ್ನು ಉಳಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಜಕೀಯ ಪಕ್ಷಗಳನ್ನು ಕೈಮುಗಿದು ವಿನಂತಿಸಿದ್ದಾರೆ.
ರೈಸನ್‌ನಲ್ಲಿ ನಡೆದ ‘ಕಿಸಾನ್ ಕಲ್ಯಾಣ್’ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿ ಪಿಎಂ ಮೋದಿ, “ನಾನು ಎಲ್ಲಾ ರಾಜಕೀಯ ಪಕ್ಷಗಳನ್ನು ಕೈಮುಗಿದು ವಿನಂತಿಸುತ್ತೇನೆ, ದಯವಿಟ್ಟು ಎಲ್ಲಾ ಕ್ರೆಡಿಟ್ ಅನ್ನು ಇಟ್ಟುಕೊಳ್ಳಿ. ನಿಮ್ಮ ಹಳೆಯ ಚುನಾವಣಾ ಪ್ರಣಾಳಿಕೆಗಳಿಗೆ ನಾನು ಮನ್ನಣೆ ನೀಡುತ್ತಿದ್ದೇನೆ. ರೈತರಿಗೆ ಒಳ್ಳೆದಾಗಲು ನಾನು ಬಯಸುತ್ತೇನೆ. ಅವರ ಪ್ರಗತಿಯನ್ನು ನಾನು ಬಯಸುತ್ತೇನೆ ಮತ್ತು ಕೃಷಿಯಲ್ಲಿ ಆಧುನಿಕತೆಯನ್ನು ಬಯಸುತ್ತೇನೆ” ಎಂದು ಹೇಳಿದ್ದಾರೆ.
“ರಾಜಕೀಯ ಪಕ್ಷಗಳು ರೈತರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ಕೃಷಿ ಕಾನೂನುಗಳು ಜಾರಿಗೆ ಬಂದು ಆರರಿಂದ ಏಳು ತಿಂಗಳಾಗಿದೆ. ಆದರೆ ಈಗ ಇದ್ದಕ್ಕಿದ್ದಂತೆ ಒಬ್ಬರ ಸ್ವಂತ ರಾಜಕೀಯ ಭೂಮಿಯನ್ನು ಸುಳ್ಳಿನ ಜಾಲದ ಮೂಲಕ ಉಳುಮೆ ಮಾಡಲು ಆಟಗಳನ್ನು ಆಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ರೈತರ ಹೆಸರಿನಲ್ಲಿ ಈ ಆಂದೋಲನವನ್ನು ಪ್ರಾರಂಭಿಸಿದವರು, ಸರ್ಕಾರವನ್ನು ನಡೆಸಲು ಅಥವಾ ಸರ್ಕಾರದ ಭಾಗವಾಗಲು ಅವಕಾಶ ಸಿಕ್ಕಾಗ, ಆಗ ಅವರು ಏನು ಮಾಡಿದರು, ದೇಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನಿ ಹೇಳಿದ್ದಾರೆ.
“ಸ್ವಾಮಿನಾಥನ್ ಆಯೋಗದ ವರದಿಯು ಈ ಜನರು ಎಷ್ಟು ನಿರ್ದಯರಾಗಿರಬಹುದು ಎಂಬುದಕ್ಕೆ ದೊಡ್ಡ ಪುರಾವೆಯಾಗಿದೆ. ಈ ಜನರು 8 ವರ್ಷಗಳ ಕಾಲ ಸ್ವಾಮಿನಾಥನ್ ಆಯೋಗದ ವರದಿ ಶಿಫಾರಸುಗಳ ಮೇಲೆ ಕುಳಿತುಕೊಂಡರು. ತಮ್ಮ ಸರ್ಕಾರ ರೈತರಿಗಾಗಿ ಹೆಚ್ಚು ಖರ್ಚು ಮಾಡಬೇಕಾಗಿಲ್ಲ ಎಂದವರು ಅವರು. ದೇಶದ ಪ್ರತಿಯೊಬ್ಬ ರೈತನಿಗೂ ಎಂಎಸ್‌ಪಿ ಮೊದಲಿನಂತೆ ನೀಡಲಾಗುತ್ತಿತ್ತು, ಅದನ್ನು ನೀಡಲಾಗುವುದು, ಎಂಎಸ್‌ಪಿ ಕೊನೆಗೊಳ್ಳುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ರೈತರಿಗೆ ಎಂಎಸ್‌ಪಿ ನೀಡಲು ಸಾಧ್ಯವಾಗದವರು ಎಂಎಸ್‌ಪಿ ಬಗ್ಗೆ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಹೊಸ ಕೃಷಿ ಕಾನೂನುಗಳಲ್ಲಿ, ರೈತನು ತನ್ನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಅಥವಾ ಹೊರಗೆ ಮಾರಾಟ ಮಾಡುತ್ತಾನೋ ಅದು ಅವನ ಇಚ್ಚೆಯೆಂದು ಕೇಂದ್ರವು ಹೇಳಿದೆ.ಹಿಂದಿನ ಸರ್ಕಾರವು ತನ್ನ ದು ವರ್ಷಗಳಲ್ಲಿ ಸುಮಾರು 1700 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ರೈತರಿಂದ ಖರೀದಿಸಿತ್ತು. ನಮ್ಮ ಸರ್ಕಾರ ತನ್ನ ಐದು ವರ್ಷಗಳಲ್ಲಿ 3000 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ರೈತರಿಂದ ಎಂಎಸ್ಪಿಯಲ್ಲಿ ಖರೀದಿಸಿದೆ. ಕೃಷಿ ಸುಧಾರಣೆಗೆ ಸಂಬಂಧಿಸಿದ ಮತ್ತೊಂದು ಸುಳ್ಳನ್ನು ಎಪಿಎಂಸಿ ಅಂದರೆ ನಮ್ಮ ಮಂಡಿಗಳ ಬಗ್ಗೆ ಹರಡಲಾಗುತ್ತಿದೆ. ನಾವು ಕಾನೂನಿನಲ್ಲಿ ಏನು ಮಾಡಿದ್ದೇವೆ? ನಾವು ರೈತರಿಗೆ ಕಾನೂನಿನಲ್ಲಿ ಸ್ವಾತಂತ್ರ್ಯವನ್ನು ನೀಡಿದ್ದೇವೆ, ಅವರಿಗೆ ಹೊಸ ಆಯ್ಕೆಯನ್ನು ನೀಡಿದ್ದೇವೆ” ಎಂದು ಪಿಎಂ ಮೋದಿ ಹೇಳಿದರು.
“ಹೊಸ ಕಾನೂನುಗಳ ನಂತರ ಒಂದೇ ಒಂದು ಮಾರುಕಟ್ಟೆಯನ್ನು ಮುಚ್ಚಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದರು. ಹಾಗಾದರೆ ಈ ಸುಳ್ಳು ಏಕೆ ಹರಡುತ್ತಿದೆ? ಸತ್ಯವೆಂದರೆ ಎಪಿಎಂಸಿಯನ್ನು ಆಧುನೀಕರಿಸಲು, ಅವುಗಳನ್ನು ಗಣಕೀಕರಣಗೊಳಿಸಲು ನಮ್ಮ ಸರ್ಕಾರ 500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ. ಎಪಿಎಂಸಿ ಮುಚ್ಚುವ ಬಗ್ಗೆ ಈ ವಿಷಯ ಎಲ್ಲಿಂದ ಬಂತು?” ಎಂದು ಪಿಎಂ ಮೋದಿ ಕೇಳಿದರು.
“ಹೊಸ ಕೃಷಿ ಸುಧಾರಣೆಗಳ ಬಗ್ಗೆ ಮತ್ತೊಂದು ದೊಡ್ಡ ಸುಳ್ಳು ಕೃಷಿ ಒಪ್ಪಂದದ ಬಗ್ಗೆ. ದೇಶದಲ್ಲಿ ಕೃಷಿ ಒಪ್ಪಂದದಲ್ಲಿ ಹೊಸದೇನಾದರೂ ಇದೆಯೇ? ಇಲ್ಲ. ಕೃಷಿ ಒಪ್ಪಂದವು ನಮ್ಮ ದೇಶದಲ್ಲಿ ವರ್ಷಗಳಿಂದ ಜಾರಿಯಲ್ಲಿದೆ. ನಾವು ಇತ್ತೀಚೆಗೆ ಮಾಡಿದ ಕೃಷಿ ಸುಧಾರಣೆಗಳಲ್ಲಿ ಅಪನಂಬಿಕೆಗೆ ಯಾವುದೇ ಕಾರಣವಿಲ್ಲ, ಸುಳ್ಳಿಗೆ ಅವಕಾಶವಿಲ್ಲ” ಎಂದು ಪ್ರಧಾನಿ ಭರವಸೆ ನೀಡಿದರು.