ಕನ್ನಡದ ಬಕೆಟ್ ಮಾಧ್ಯಮಗಳು: ಹೋರಾಟ ನಿರತ ರೈತರ ಸಾವು ಇವರಿಗೆ ಸುದ್ದಿಯೇ ಅಲ್ಲ!

ಮೋದಿ ಸರ್ಕಾರದ ಹೊಸ ಕೃಷಿ ನೀತಿಗಳ ವಿರುದ್ದ ಸಾವಿರಾರು ರೈತರು ಕಳೆದ 22 ದಿನಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 24 ಪ್ರತಿಭಟನಾ ನಿರತ ರೈತರು ಸಾವನ್ನಪ್ಪಿದ್ದಾರೆ. ಅಲ್ಲದೆ, ರೈತರ ಪ್ರತಿಭಟನೆಯನ್ನು ಬೆಂಬಲಿಸಿ, ಸಿಖ್‌ ಧರ್ಮಗುರು ಒಬ್ಬರು ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇಶದ ರೈತರು ಮತ್ತು ಸರ್ಕಾರದ ನಡುವೆ ಭಾರೀ ತಿಕ್ಕಾಟ ನಡೆಯುತ್ತಿದೆ. ರೈತರ ಹೋರಾಟದ ಇಡೀ ದೇಶದ ಗಮನ ಸೆಳೆದಿದೆ. ಆದರೆ, ಸದಾ ಪ್ರಧಾನಿ ಮೋದಿಯ ಭಜನೆ ಮಾಡುತ್ತಿರುವ, ಮೋದಿ ಭಜನಾ ಮಂಡಳಿ ಎಂದು ಜಾಲತಾಣಿಗರಿಂದ ಟೀಕೆಗೆ ಒಳಗಾಗುತ್ತಿರುವ ಬಹುತೇಕ ಕನ್ನಡದ ಮಾಧ್ಯಮಗಳಿಗೆ ರೈತರ ಪ್ರತಿಭಟನೆ ಮತ್ತು ಸಾವುಗಳು ಒಂದು ಸುದ್ದಿಯೂ ಆಗಿಲ್ಲ.

ಬಿಗ್‌ ಬ್ರೇಕಿಂಗ್ ನ್ಯೂಸ್‌, ನಮ್ಮಲ್ಲೇ ಮೊದಲು, ಶಾಕಿಂಗ್‌ ನ್ಯೂಸ್‌ ಎಂದೆಲ್ಲಾ ಬೋಂಗು ಬಿಡುವ ಕನ್ನಡದ ಮಾಧ್ಯಮಗಳಿಗೆ ರೈತರ ಹೋರಾಟ ಬ್ರೇಕಿಂಗ್‌ ಆಗಲೀ, ಅವರ ಸಾವು ಶಾಕಿಂಗ್‌ ಅಗಲೀ ಆಗಿಲ್ಲ.

ನಿನ್ನೆ ರಾತ್ರಿ ಸಿಖ್‌ ಧರ್ಮಗುರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅತ್ಮಹತ್ಯೆ ಮಾಡಿಕೊಂಡಲು, ಇಂದು ಮುಂಜಾನೆ ರೈತ ಪ್ರತಿಭಟನಕಾರರೊಬ್ಬರು, ಕೊರೆಯುವ ಚಳಿಯನ್ನು ಎದುರಿಸಲಾಗದೇ ಸಾವನ್ನಪ್ಪಿದ್ದಾರೆ. ರೈತರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ, ಕನ್ನಡ ಮಾಧ್ಯಮಗಳಿಗೆ ಅವರ ಸಾವು ಒಂದು ಸುದ್ದಿ ಎಂದೂ ಕೂಡ ಅನ್ನಿಸಿಲ್ಲ. ರೈತರ ಸಾವಿನ ಸಾವುಗಳ ಸುದ್ದಿಗಳನ್ನೇ ನಿರ್ಲಕ್ಷಿಸಿ, ಮೋದಿ, ಚೀನಾ, ಸೈನ್ಯ ಎಂದು ಭಜನೆ ಮಾಡುವುದಲ್ಲಿ ನಿರತವಾಗಿವೆ.

ದೆಹಲಿಯ ತೀವ್ರ ಚಳಿಯ ನಡುವೆಯೂ ರೈತರು ತಮ್ಮ ಜೀವದ ಹಂಗು ತೊರೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೋದಿ ಸರ್ಕಾರದ ಕೃಷಿ ನೀತಿಗಳನ್ನು ಒಪ್ಪಿಕೊಂಡು, ಕಾರ್ಪೊರೇಟ್‌ ಕುಣಿಗೆ ಕೊರಳು ಕೊಟ್ಟು ಸಾಯುವುದಕ್ಕಿಂತ, ಹೋರಾಡುತ್ತೇವೆ, ಪ್ರತಿಭಟನೆಯಲ್ಲೇ ನಮ್ಮ ಜೀವ ಹೋದರೂ ಪರವಾಗಿಲ್ಲ. ಆದರೆ, ರೈತ ವಿರೋಧಿ ಕೃಷಿ ನೀತಿಗಳನ್ನು ಮಾತ್ರ ಒಪ್ಪುವುದಿಲ್ಲ ಎಂದು ಹಠ ಬಿಡದೆ, ಛಲದಿಂದ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಪ್ರತಿಭಟನೆ ಸಂವಿಧಾನಿಕ ಹಕ್ಕು, ರೈತರು ಶಾಂತಿಯಿಂದ ಪ್ರತಿಭಟನೆ ಮುಂದುವರೆಸಬಹುದು ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ.

ಆದರೆ, ಬಿಜೆಪಿಗೆ ಬಕೆಟ್‌ ಹಿಡಿಯುವ ಕನ್ನಡದ ಮಾಧ್ಯಮಗಳು, ರೈತ ಹೋರಾಟಗಾರರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ಪ್ರತ್ಯೇಕವಾದಿಗಳು ಎಂದು ಬಿಂಬಿಸಿ, ಪ್ರತಿಭಟನೆಯ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಢಿಸುವಲ್ಲಿ ಉತ್ಸುಕವಾಗಿವೆಯೇ ಹೊರತು. ರೈತರ ಪ್ರತಿಭಟನೆಯ ಬಗ್ಗೆ ನೈಜತೆಯನ್ನು ಪ್ರಸಾರ ಮಾಡಲು ಹಿಂದೆ ಸರಿದಿವೆ.

ಇದನ್ನೂ ಓದಿ: ಪ್ರತಿಭಟನೆ ಸಂವಿಧಾನಿಕ ಹಕ್ಕು; ರೈತರ ಹೋರಾಟ ಮುಂದುವರೆಯಲಿ: ಸುಪ್ರೀಂ ಕೋರ್ಟ್‌

ರೈತ ಪ್ರತಿಭಟನೆಯ ಬಗ್ಗೆ ಒಂದೂ ಪಾಸಿಟಿವ್‌ ಸ್ಟೋರಿ ಮಾಡದೇ ಇರುವ ಕನ್ನಡದ ನ್ಯೂಸ್‌ ಚಾನೆಲ್‌ಗಳಲ್ಲಿ ಒಂದಾದ ಸುವರ್ಣ ನ್ಯೂಸ್‌, ಮೊನ್ನೆ ಒಂದು ಸ್ಟೋರಿ ಮಾಡಿತ್ತು. ಮೋದಿ ಸರ್ಕಾರದ ನೀತಿಗಳು ಅಂಬಾನಿ-ಅದಾನಿಗಳ ಪರವಾಗಿವೆ. ಹಾಗಾಗಿ ಅಂಬಾನಿ-ಅದಾನಿಗೆ ಸೇರಿದ ಕಂಪನಿಗಳ ಉತ್ಪನ್ನಗಳನ್ನು ಬಳದಿರಲು ಬಾಯ್ಕಾಟ್‌ ಅಂಬಾನಿ-ಅದಾನಿ ಆಂದೋಲನಕ್ಕೆ ಕಡೆಕೊಟ್ಟಿದ್ದರು. ಇದಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತಿವಾಗಿತ್ತು. ಈ ಬಗ್ಗೆ ಒಂದೂ ಸ್ಟೋರಿ ಮಾಡಿಲ್ಲದ ಸುವರ್ಣ ಟಿವಿ, ಮೂರು ದಿನಗಳ ಹಿಂದೆ, “ರೈತ ಹೋರಾಟಕ್ಕೂ, ಜಿಯೋ ವಿರುದ್ಧದ ಹೋರಾಟಕ್ಕೂ ಏನು ಸಂಬಂಧ” ಎಂದು ಜಿಯೋ, ಅಂಬಾನಿ, ಅದಾನಿಗಳನ್ನು ಸಮರ್ಥಿಸಿಕೊಂಡು ಸ್ಟೋರಿ ಮಾಡಿತ್ತು.

ಸುವರ್ಣ ನ್ಯೂಸ್‌ನ ಅಜಿತ್‌ ಹನುಮಕ್ಕನವರ್‌ “ನಮ್ಮ ಮಕ್ಕಳು ಇಂದು ಆನ್‌ಲೈನ್‌ ಕ್ಲಾಸ್‌ನಲ್ಲಿ ಕೂರುತ್ತಿರುವುದೇ ಅಂಬಾನಿಯ ದಯೆ ಇಂದ, ಅಂಬಾನಿಯೇ ದಯಾಳು” ಎಂದು ಬೋಂಗು ಬಿಟ್ಟಿದ್ದರು.

ಈ ರೀತಿಯಲ್ಲಿ, ಕಾರ್ಪೊರೇಟ್‌ಗಳನ್ನೂ, ಮೋದಿ ಸರ್ಕಾರವನ್ನೂ ಸದಾಕಾಲ ಸಮರ್ಥಿಸಿಕೊಳ್ಳುತ್ತಿರುವ ಕನ್ನಡದ ಮಾಧ್ಯಮಗಳು, ರೈತರ ಹೋರಾಟವನ್ನೂ, ಅವರ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬದಲಾಗಿ ರೈತ ಹೋರಾಟದ ವಿರುದ್ದ ಸುದ್ದಿ ಮಾಡುವುದರಲ್ಲಿ ಬಿಸಿಯಾಗಿವೆ.

ಇಂದು ಎನ್‌ಡಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ‘ರೈತರ ಸಾವಿನ ಬಗೆಗಿನ ಸುದ್ದಿಗಳನ್ನು ನೋಡಿದ, ಕನ್ನಡದ ವೀಕ್ಷಕ ಅಭಿನಂದನ್‌ ಎಂಬುವವರು, “ರೈತ ಹೋರಾಟದ ಬಗ್ಗೆ, ರೈತರ ಸಾವುಗಳ ಬಗ್ಗೆ ಕನ್ನಡದ ನ್ಯೂಸ್‌ ಚಾನೆಲ್‌ಗಳಲ್ಲಿ ಸುದ್ದಿಯೇ ಬರುತ್ತಿಲ್ಲವಲ್ಲ ಏಕೆ. ರೈತ ಹೋರಾಟದ ಬಗ್ಗೆ ನಮ್ಮ ಹಳ್ಳಿಗಳಲ್ಲಿ ಮಾಹಿತಿ ಸಿಗುತ್ತಿಲ್ಲ. ಕನ್ನಡದ ಮಾಧ್ಯಮಗಳು ರೈತರನ್ನು ಈ ಮಟ್ಟಕ್ಕೆ ನಿರ್ಲಕ್ಷಿಸುತ್ತಿವೆಯೇ. ಇದು ಎಂಥಹ ದುರಂತ ಸಂಗತಿ. ಕನ್ನಡ ಮಾಧ್ಯಮಗಳು ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದೇಕೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬಾಯ್ಕಾಟ್ ಅಂಬಾನಿ-ಅದಾನಿ; ಕಾರ್ಪೊರೇಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವುದೇಕೆ ಸುವರ್ಣ ನ್ಯೂಸ್‌?


ಇದನ್ನೂ ಓದಿ: ರೋಗಗ್ರಸ್ಥವಾಗುತ್ತಿರುವ ಮಾಧ್ಯಮಗಳು; ಅವುಗಳನ್ನು ನಾವು ನಂಬಬಹುದೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights