ದೇಶಾದ್ಯಂತ 24,010 ಹೊಸ ಕೊರೊನಾ ಕೇಸ್ : 355 ಸೋಂಕಿತರು ಬಲಿ..!

ದಿನಕಳೆದಂತೆ ಕೊರೊನಾ ಲಸಿಕೆ ಯಾವಾಗ ಲಭ್ಯವಾಗಲಿದೆ ಎನ್ನುವ ಚಿಂತೆ ಕಾಡತೊಡಗಿದೆ. ಮತ್ತೊಂದೆಡೆ 2021ಕ್ಕೆ ಕೊರೊನಾ ಹೊಸ ಅಲೆ ಸೃಷ್ಟಿಸಲಿದೆ ಎನ್ನುವ ಮಾತು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇದರ ಮಧ್ಯೆ ಕಳೆದ 24 ಗಂಟೆಗಳಲ್ಲಿ 24,010 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 99.5 ಲಕ್ಷ ದಾಟಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 99,56,558 ಕ್ಕೆ ತಲುಪಿದೆ. 99.5 ಲಕ್ಷ ಪ್ರಕರಣಗಳಲ್ಲಿ 3,22,366 ಸಕ್ರಿಯ ಕೋವಿಡ್ -19 ಪ್ರಕರಣಗಳು ಇದ್ದರೆ, 94,89,740 ಪ್ರಕರಣಗಳು ಈವರೆಗೆ ಕಾಯಿಲೆಯಿಂದ ಚೇತರಿಸಿಕೊಂಡಿದ್ದು, 24 ಗಂಟೆಗಳಲ್ಲಿ ಇನ್ನೂ 33,291 ಜನ ಬಿಡುಗಡೆಯಾಗಿದ್ದಾರೆ.

ಹೊಸ ಕೋವಿಡ್ -19 ಪ್ರಕರಣಗಳ ಹೊರತಾಗಿ, ಭಾರತ 355 ಸಾವುಗಳನ್ನು ದಾಖಲಿಸಿದ್ದು, ಈವರಗೆ ಕೊರೋನವೈರಸ್ ಸಾವಿನ ಸಂಖ್ಯೆ 1,44,451 ಕ್ಕೆ ತಲುಪಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights