FACT CHECK | ಟ್ರಂಪ್‌ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಎಂದು ಇಟಾಲಿಯನ್ ಪತ್ರಕರ್ತನ ಫೋಟೊ ಹಂಚಿಕೆ

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್ ಅವರ ಮೇಲೆ ಗುಂಡು ಹಾರಿಸಿದ ಶೂಟರ್ ಮಾರ್ಕ್ ವೈಲೆಟ್ಸ್ ಎಂಬ “ಆಂಟಿಫಾ ಸದಸ್ಯ” ಎಂದು ಗುರುತಿಸಲಾಗಿದೆ ಎಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯು ಶೂಟರ್ ಎಂದು ಹೇಳಲಾದ ವ್ಯಕ್ತಿಯ ಛಾಯಾಚಿತ್ರವನ್ನು ಒಳಗೊಂಡಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಟ್ರಂಪ್ ಅವರ ಕಿವಿಗೆ ಗಾಯವಾಗಿದೆ. ಅದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಯತ್ನ ನಡೆಸಿದ್ದಾರೆ ಎನ್ನಲಾದ ಮಾರ್ಕ್ ವೈಲೆಟ್ಸ್ ಎನ್ನುವವರ ಚಿತ್ರ ಹರಿದಾಡುತ್ತಿದೆ. ‘ಅವರು ಕೊಲೆಗೂ ಮುಂಚೆ ಯೂ ಟ್ಯೂಬ್‌ನಲ್ಲಿ ವಿಡಿಯೊ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ, ಟ್ರಂಪ್‌ಗೆ ಗುಂಡು ಹಾರಿಸಿದ ನಂತರ ವೈಲೆಟ್ಸ್ ಅನ್ನು ಹತ್ಯೆ ಮಾಡಲಾಗಿದೆ’ ಎಂದು ಕೆಲವರು ಉಲ್ಲೇಖಿಸುತ್ತಿದ್ದಾರೆ. ಕೆಲವು ಮಾಧ್ಯಮಗಳೂ ವೈಲೆಟ್ಸ್ ಚಿತ್ರ ಬಳಸಿ ಈ ಸುದ್ದಿ ವರದಿ ಮಾಡಿವೆ.

ವೈರಲ್ ಪೋಸ್ಟ್ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಅಂತಹ ಹೆಚ್ಚಿನ ಪೋಸ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ಪೋಸ್ಟ್ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಅಂತಹ ಹೆಚ್ಚಿನ ಪೋಸ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

 

 

 

 

 

 

 

 

 

 

 

 

 

 

 

 

 

 

 

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಮಾಹಿತಿ ಸುಳ್ಳಾಗಿದ್ದು, ವೈರಲ್ ಫೋಟೋದಲ್ಲಿರುವ ವ್ಯಕ್ತಿ ಇಟಲಿಯ ಪತ್ರಕರ್ತ ಮಾರ್ಕೊ ವಿಯೋಲಿ ಅವರದ್ದು. ಯುಎಸ್ ಸೀಕ್ರೆಟ್ ಸರ್ವಿಸ್ ಏಜೆಂಟರಿಂದ ಹತ್ಯೆಗೀಡಾದ ಶೂಟರ್ ಅನ್ನು ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್‌ನ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ (20) ಎಂದು ಯುನೈಟೆಡ್ ಸ್ಟೇಟ್ಸ್ ಫೆಡರಲ್ ಬುರುಯಾ ಆಫ್ ಇನ್ವೆಸ್ಟಿಗೇಷನ್ ಗುರುತಿಸಿದೆ.

ವಿಡಿಯೋದ ಅಡಿಯಲ್ಲಿ ಕಾಮೆಂಟ್‌ಗಳನ್ನು ಪರಿಶೀಲಿಸುವಾಗ, ಪತ್ರಕರ್ತ ಮಾರ್ಕೊ ವಿಯೋಲಿ ಅವರ ಹೆಸರನ್ನು ನಾವು ಕಂಡುಕೊಂಡಿದ್ದೇವೆ. ನಾವು ವಿಯೋಲಿಯ ಅವರ ಇನ್ಸ್ಟಾಗ್ರಾಮ್  ಖಾತೆಯನ್ನು ಹುಡುಕುವ ಮೂಲಕ ಅವರ ಹೆಚ್ಚಿನ ಛಾಯಾಚಿತ್ರಗಳು ಮತ್ತು ಅವರ ಇತರ ಕೆಲಸಗಳನ್ನು ಕಂಡುಕೊಂಡಿದ್ದೇವೆ.

ಮೃತ ಶೂಟರ್ ಅನ್ನು ಪೆನ್ಸಿಲ್ವೇನಿಯಾ ನಿವಾಸಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ (20) ಎಂದು ಗುರುತಿಸಲಾಗಿದೆ.

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ ಮತ್ತು ಅವರ ಹೆಸರನ್ನು ಬಳಸಿ ಹುಡುಕಾಟ ನಡೆಸಿದಾಗ, ಅವರು ಇಟಲಿಯ ಫುಟ್‌ಬಾಲ್ ವೀಕ್ಷಕ ವಿವರಣೆಗಾರ, ಪತ್ರಕರ್ತ ಮಾರ್ಕೊ ವಿಯೋಲಿ ಎನ್ನುವುದು ತಿಳಿದುಬಂತು. ಟ್ರಂಪ್ ಹತ್ಯಾ ಯತ್ನಕ್ಕೂ ವಿಯೋಲಿಗೂ ಸಂಬಂಧ ಇಲ್ಲ. ಈ ಬಗ್ಗೆ ವಿಯೋಲಿ ತನ್ನನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ತನ್ನನ್ನು ದ್ವೇಷಿಸುವವರ ಒಂದು ಗುಂಪು ಸುಳ್ಳು ಸುದ್ದಿ ಹಬ್ಬಲು ಕಾರಣವಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ನಡೆಸುತ್ತೇನೆ ಎಂದು ಪ್ರಕಟಿಸಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಶೂಟರ್ ಕುರಿತು :

ಟ್ರಂಪ್ ರ್ಯಾಲಿಯಲ್ಲಿ ಗುಂಡು ಹಾರಿಸಿದ ನಂತರ ಯುಎಸ್ ಸೀಕ್ರೆಟ್ ಸರ್ವಿಸ್‌ನ ಕೌಂಟರ್ ಸ್ನೈಪರ್‌ಗಳು ಶೂಟರ್ ಅನ್ನು ಗುಂಡಿಕ್ಕಿ ಕೊಂದರು ಮತ್ತು ಟ್ರಂಪ್ ಸೇರಿದಂತೆ ಇತರರನ್ನು ಗಾಯಗೊಳಿಸಿದರು ಎಂದು ಆರಂಭಿಕ ವರದಿಗಳು ಸೂಚಿಸಿವೆ.

ಮೃತ ಶೂಟರ್ ಅನ್ನು ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್ ನಿವಾಸಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ. ಸಿಎನ್ಎನ್ ವರದಿಗಳ ಪ್ರಕಾರ, ಕ್ರೂಕ್ಸ್ ನೋಂದಾಯಿತ ರಿಪಬ್ಲಿಕನ್ ಆಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು AFBI ಇನ್ನೂ ಕಂಡುಹಿಡಿಯಬೇಕಾಗಿದೆ.

ಈ ಘಟನೆಯ ನಂತರ, ಹಲವಾರು ಇಂಟರ್ನೆಟ್ ಟ್ರೋಲ್‌ಗಳು ಮೃತ ಶೂಟರ್ ಅನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳಲು ಇತರರ ಪೋಟೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಸಿಬಿಎಸ್‌ ನ್ಯೂಸ್‌ ವರದಿಯನ್ನು ನೀವು ನೋಡಬಹುದು. ಈ ವೀಡಿಯೋದಲ್ಲಿ ಈ ಪ್ರಕರಣದ ಎಲ್ಲಾ ವಿವರಗಳನ್ನು ನೋಡಬಹುದು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights