ಗ್ರಾಮ ಪಂ. ಚುನಾವಣೆ; ಪತ್ನಿಗೆ ಪತಿಯೇ ಎದುರಾಳಿ ಅಭ್ಯರ್ಥಿ!

ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಳ್ಳಿಗರು, ವಿವಿಧ ಹಳ್ಳಿಗಳ ಗ್ರಾಮ ಪಂ. ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಚ್ಚರಿಯ ರೀತಿಯಲ್ಲಿ ಪತ್ನಿಯ ವಿರುದ್ಧ ಪತಿಯೇ ಅಭ್ಯರ್ಥಿ ಸ್ಪರ್ಧಿಸಿರುವ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತ್‌  ಸಾಕ್ಷಿಯಾಗಿದೆ.

ಸೋಮವಾರಪೇಟೆ ತಾಲೂಕಿನ ಕಂಬಿಬಾಣೆ ಗ್ರಾಮದ ನಿವಾಸಿ ಶ್ರೀಜಾ ಅವರು ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತಿ ಕಿಶೋರ್ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪತ್ನಿ ಮತ್ತು ಪತಿ ಇಬ್ಬರು ಪರಸ್ಪರ ಎದುರಾಳಿಗಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಮನೆಯಲ್ಲಿ ಅಷ್ಟೇ ನಾವು ಪತಿ-ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಬೇಕಾಗಿದೆಯೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎಂದು ಆ ಇಬ್ಬರೂ ಅಭ್ಯರ್ಥಿಗಳು ಹೇಳಿದ್ದಾರೆ.

ಇವರಿಬ್ಬರಲ್ಲದೇ, ಇನ್ನೂ 09 ಜನರು ಚುನಾವಣಾ ಅಭ್ಯರ್ಥಿಗಳಾಗಿ ಕಣಕ್ಕಳಿದಿದ್ದು, ಅಲ್ಲಿಯ ಗ್ರಾಮಸ್ಥರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಹುಟ್ಟಿದೆ. ಈ ಗ್ರಾಮ ಪಂಚಾಯತಿಗೆ ಡಿಸೆಂಬರ್ 22 ರಂದು ಚುನಾವಣೆ ನಡೆಯಲಿದೆ.


ಇದನ್ನೂ ಓದಿ: ಪ್ರತ್ಯೇಕ ಗ್ರಾಮ ಪಂ.ಗೆ ಒತ್ತಾಯ; 07 ಸ್ಥಾನಗಳಿಗೆ ನಾಮಪತ್ರವನ್ನೇ ಸಲ್ಲಿಸದ ಗ್ರಾಮಸ್ಥರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights