ಭಾರತಕ್ಕೆ ನುಸುಳಿರುವ ಚೀನಾ; ಅರುಣಾಚಲದಲ್ಲಿ ಹೊಸ ಹಳ್ಳಿಯನ್ನೇ ನಿರ್ಮಿಸಿದೆ ಚೀನಾ ಪಡೆ!

ಭಾರತದ ಭೂಪ್ರದೇಶದವನ್ನು ಚೀನಾ ಆಕ್ರಮಿಸಿಕೊಂಡಿದ್ದು, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದೆ. ಚೀನಾ ನಿರ್ಮಿಸಿರುವ ಮನೆಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ದೊರಕಿವೆ. ಆದರೆ ಈ ಕೆಲಸವನ್ನು ಚೀನಾ ಹಲವು ವರ್ಷಗಳಿಂದ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.

“ತ್ಸಾರ್ ಚು ನದಿ ದಂಡೆ ಪ್ರದೇಶದಲ್ಲಿರುವ ಈ ಗ್ರಾಮ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿದ್ದು. ಇದು ಭಾರತ-ಚೀನಾ ನಡುವಿನ ವಿವಾದಿತ ಪ್ರದೇಶಗಳಲ್ಲೊಂದಾಗಿದೆ. ಆಗಸ್ಟ್ 26, 2019 ರ ಉಪಗ್ರಹ ಚಿತ್ರದಲ್ಲಿ ಅಲ್ಲಿ ಯಾವುದೇ ಗ್ರಾಮದ ಕುರುಹು ಇರಲಿಲ್ಲ. ಹಾಗಾಗಿ ಈ ಗ್ರಾಮ ಕಳೆದ ವರ್ಷ ನಿರ್ಮಾಣವಾಗಿದೆ” ಎಂದು ಅಂದಾಜಿಸಲಾಗಿದೆ.

“ನವೆಂಬರ್ 1, 2020 ದಿನಾಂಕ ನಮೂದಿಸಲ್ಪಟ್ಟಿರುವ ಈ ಉಪಗ್ರಹ ಚಿತ್ರಗಳನ್ನು ಹಲವಾರು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತೀಯ ಭೂಭಾಗದಲ್ಲಿ ನಿರ್ಮಾಣಗೊಂಡಿರುವ ಈ ಗ್ರಾಮವು ವಾಸ್ತವಿಕ ಗಡಿ ರೇಖೆಯಿಂದ ಅಂದಾಜು 4.5 ಕಿಮೀ ಒಳಗಿದೆ” ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಚೀನಾ ಆಕ್ರಮಿಸಿಕೊಂಡಿರುವ ಲಡಾಖ್‌ ಭೂಮಿಯನ್ನು ಯಾವಾಗ ವಶಕ್ಕೆ ಪಡೆಯುತ್ತೀರಿ: ಮೋದಿಗೆ ರಾಹುಲ್‌ ಪ್ರಶ್ನೆ

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, “ಗಡಿ ಪ್ರದೇಶಗಳಲ್ಲಿ ಚೀನಾ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕುರಿತಂತೆ ಇತ್ತೀಚಿಗಿನ ವರದಿಗಳನ್ನು ನೋಡಿದ್ದೇವೆ. ಹಿಂದೆ ಕೂಡ ಚೀನಾ ಇಂತಹ ನಿರ್ಮಾಣ ಕೆಲಸ ನಡೆಸಿದೆ” ಎಂದು ಹೇಳಿದೆ.

“ಗಡಿ ಪ್ರದೇಶದಲ್ಲಿನ ಮೂಲಭೂತ ಸೌಲಭ್ಯ ಉತ್ತಮ ಪಡಿಸಲು ಸರ್ಕಾರ ಬದ್ಧವಾಗಿದೆ. ಗಡಿ ಪ್ರದೇಶದ ಜನರಿಗೆ ಅನುಕೂಲವಾಗಲು ಅಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ” ಎಂದು ಸರ್ಕಾರ ಹೇಳಿದೆ.

ಈ ಉಪಗ್ರಹ ಚಿತ್ರಗಳನ್ನು ಪ್ಲಾನೆಟ್ ಲ್ಯಾಬ್ಸ್ ಇಂಕ್ ಮೂಲಕ ಪಡೆದಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ. ಭಾರತ ಸರ್ಕಾರ ತನ್ನ ಅಧಿಕೃತ ನಕ್ಷೆ ಎಂದು ಬಳಸುವ ಸರ್ವೇಯರ್ ಜನರಲ್ ಆಫ್ ಇಂಡಿಯಾದ ಆನ್ಲೈನ್ ನಕ್ಷೆಯಲ್ಲೂ ಚೀನಾದ ಈ ಗ್ರಾಮ ಭಾರತದ ಭೂಭಾಗದಲ್ಲಿರುವುದು ಕಾಣಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಚೀನಾದ ಶ್ರೀಮಂತ, ಅಲಿಬಾಬಾ ಸಂಸ್ಥೆಯ ಸಂಸ್ಥಾಪಕ ಜಾಕ್‌ ಮಾ ನಾಪತ್ತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights