ಬೆಳ್ಳಂಬೆಳಗ್ಗೆ ಅಪಘಾತ: ಮಲಗಿದ್ದವರ ಮೇಲೆ ಹರಿದ ಟ್ರಕ್; 15 ಕಾರ್ಮಿಕರು ಸಾವು!
ಫುಟ್ಪಾತ್ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ನಿಯಂತ್ರಣ ತಪ್ಪಿದ ಟ್ರಕ್ವೊಂದು ಹರಿದು 15 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ.
ಮಂಗಳವಾರ ಬೆಳ್ಳಂಬೆಳಗ್ಗೆ ಟ್ರಕ್ ಮತ್ತು ಕಬ್ಬು ತುಂಬಿದ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡ ಟ್ರಕ್ ಡ್ರೈವರ್, ಫುಟ್ಪಾತ್ ಕಡೆ ವಾಹನವನ್ನು ನುಗ್ಗಿಸಿದ್ದಾನೆ. ಈ ವೇಳೆ ನಿದ್ದೆಯಲ್ಲಿದ್ದ 15 ವಲಸೆ ಕಾರ್ಮಿಕರ ಮೇಲೆ ಟ್ರಕ್ ಹರಿದು ಮೃತಪಟ್ಟಿದ್ದಾರೆ. ಮತ್ತು ಕೆಲವರ ಸ್ಥಿತಿ ಗಂಭೀರವಾಗಿದೆ.
ಕಾರ್ಮಿಕರು ಮಾಂಡವಿ ಹೆದ್ದಾರಿಯ ಫುಟ್ಪಾತ್ ಮೇಲೆ ಮಲಗಿದ್ದಾಗ ದುರ್ಘಟನೆ ಸಂಭವಿಸಿದೆ. ಸಾವನ್ನಪ್ಪಿದವರು ರಾಜಸ್ಥಾನದ ಬನ್ಸ್ವಾರ ಮೂಲದವರೆಂದು ತಿಳಿದುಬಂದಿದೆ. ಮೃತರ ಸಾವಿಗೆ ಬಿಜೆಪಿ ಮುಖಂಡ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಸಾವಿನ ದುಃಖ ತಡೆದುಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪಾರ್ಥಿಸಿಕೊಳ್ಳುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ.
Read Also: ಕೂಲ್ ಕ್ಯಾಪ್ಟನ್ ಧೋನಿಯನ್ನೂ ಕಾಡುತ್ತಿದೆ ಹಕ್ಕಿಜ್ವರ; ಧೋನಿಯ ಕನಸು ಭಂಗ!