ಇದು ಅಯೋಧ್ಯೆಯಲ್ಲಿ ರಸ್ತೆ ಅಗಲೀಕರಣದ ವೇಳೆ ಸಿಕ್ಕ 5,000 ವರ್ಷಗಳ ಹಳೆಯ ದೇವಾಲಯವಂತೆ..

ಉತ್ತರ ಪ್ರದೇಶದ ಪವಿತ್ರ ಪಟ್ಟಣವಾದ ಅಯೋಧ್ಯೆಯಲ್ಲಿ ರಸ್ತೆ ಅಗಲಗೊಳಿಸುವ ವೇಳೆ 5,000 ವರ್ಷಗಳಷ್ಟು ಹಳೆಯದಾದ ದೇವಾಲಯ ಸಿಕ್ಕಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ಹಳೆಯ ಕಟ್ಟಡಗಳ ಮಧ್ಯೆ ಇರುವ ದೇವಾಲಯದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹೌದು… ವೈರಲ್ ಹೇಳಿಕೆ ಮತ್ತು ಫೋಸ್ಟರ್ ನ್ನು ಸಾಕಷ್ಟು ಜನ ನೆಟ್ಟಿಗರು ಹಂಚಿಕೊಂಡಿದ್ದಾರೆ. ಹೀಗೆ ವಿಚಾದ ಸೃಷ್ಟಿಸುವಂತಹ ಹೇಳಿಕೆ ಇಲ್ಲಿದೆ.

ಆದರೆ ವೈರಲ್ ಫೋಟೋದಲ್ಲಿರುವ ದೇವಾಲಯ ಯುಪಿ ಯ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆಯಡಿ ಪುನಃಸ್ಥಾಪಿಸಲಾಗುತ್ತಿರುವ ಚಂದ್ರಗುಪ್ತ ಮಹಾದೇವ್ ದೇವಾಲಯವಾಗಿದೆ.

ಈ ವರ್ಷದ ಜೂನ್‌ನಿಂದ ಇದೇ ರೀತಿಯ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಫೋಟೋದ ಬಗ್ಗೆ ಮಾಹಿತಿ ಹುಡುಕಿದಾಗ ನಾನಾ ಸುದ್ದಿ ವರದಿಗಳಲ್ಲಿ ಅದೇ ಫೋಟೋವನ್ನು ಕಂಡುಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8, 2019 ರಂದು ಈ ಯೋಜನೆಗೆ ಅಡಿಪಾಯ ಹಾಕಿದ್ದರು. ಪೂರ್ಣಗೊಂಡ ನಂತರ ಇದು ಪ್ರಾಚೀನ ಪವಿತ್ರ ನಗರವಾದ ವಾರಣಾಸಿಯ ನೋಟವನ್ನು ಬದಲಾಯಿಸುವ ಮತ್ತು ಕಾಶಿ ವಿಶ್ವನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮತ್ತು ಸುಂದರಗೊಳಿಸುವ ನಿರೀಕ್ಷೆಯಿಂದ ಪುನಃಸ್ಥಾಪಿಸಲಾಗುತ್ತಿದೆ. ಕೆಲವು ನ್ಯೂಸ್ ಚಾನಲ್ ಗಳಲ್ಲಿಯೂ ಈ ಬಗ್ಗೆ ವರದಿ ಪ್ರಸಾರವಾಗಿದೆ.

ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್‌ನ ಸಿಇಒ ಸುನಿಲ್ ವರ್ಮಾ ವೈರಲ್ ಚಿತ್ರದಲ್ಲಿ ಕಂಡುಬರುವ ದೇವಾಲಯ ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆಯ ಭಾಗವಾಗಿರುವ ಚಂದ್ರಗುಪ್ತ ಮಹಾದೇವ್ ದೇವಾಲಯ ಎಂದು ದೃಢಪಡಿಸಿದ್ದಾರೆ.

“ಈ ಚಿತ್ರ ವಾರಣಾಸಿಯಿಂದ ಬಂದಿದೆ ಮತ್ತು ಅಯೋಧ್ಯೆಯಿಂದಲ್ಲ. ಇದು ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯಿರುವ ಚಂದ್ರಗುಪ್ತ ಮಹಾದೇವ್ ದೇವಸ್ಥಾನ. ಕಾರಿಡಾರ್ ಯೋಜನೆಯ ಭಾಗವಾಗಿ ಪುನಃಸ್ಥಾಪಿಸಲಾಗುತ್ತಿರುವ ದೇವಾಲಯಗಳಲ್ಲಿ ಚಂದ್ರಗುಪ್ತ ಮಹಾದೇವ್ ದೇವಾಲಯವೂ ಒಂದು. ಈ ದೇವಾಲಯ 300 ವರ್ಷಗಳಿಗಿಂತ ಹಳೆಯದಲ್ಲ “ಎಂದು ವರ್ಮಾ ಹೇಳಿದ್ದಾರೆ.

ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆಗಾಗಿ ಸ್ವಚ್ಚಗೊಳಿಸುವ ಕಾರ್ಯದ ವೇಳೆ ಹಲವಾರು ಪ್ರಾಚೀನ ದೇವಾಲಯಗಳು 2019 ರ ಡಿಸೆಂಬರ್ 23 ರಂದು ಬೆಳಕಿಗೆ ಬಂದಿವೆ. ಅಂತಹ ದೇವಾಲಯಗಳ ಪೈಕಿ ಚಂದ್ರಗುಪ್ತ ಮಹಾದೇವ್ ದೇವಾಲಯ 30 ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಯೋಜನೆಯಡಿಯಲ್ಲಿ ಹಿಂದಿನ ವೈಭವದಂತೆ ಮರುಸ್ಥಾಪಿಸಲಾಗುತ್ತಿದೆ.

ಆದ್ದರಿಂದ ವೈರಲ್ ಫೋಟೋ ವಾರಣಾಸಿಯಲ್ಲಿರುವ ದೇವಾಲಯದದ್ದಾಗಿದೆ ಎಂಬುದು ಸ್ಪಷ್ಟವಾಗಿದೆ. ಅಯೋಧ್ಯೆಯಲ್ಲಿ ರಸ್ತೆ ಅಗಲಗೊಳಿಸುವ ಸಮಯದಲ್ಲಿ ಇದನ್ನು ಕಂಡುಹಿಡಿಯಲಾಗಿದೆ ಎಂಬ ಹೇಳಿಕೆ ತಪ್ಪಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights