ನಟ ಸೋನು ಸೂದ್‌ಗಾಗಿ ದೇವಾಲಯ ನಿರ್ಮಿಸಿದ ತೆಲಂಗಾಣ ಜನ!

ಕೊರೊನಾ ಸಂಕಷ್ಟದ ಕಾಲದಲ್ಲಿ ಹಲವಾರು ಜನರಿಗೆ, ಕಾರ್ಮಿಕರಿಗೆ ನಟ ಸೋನು ಸೂದ್ ನೆರವು ನೀಡಿದ್ದರು. ಅವರ ಮಾನವೀಯ ಕಾರ್ಯಗಳಿಗಳಿಂದ ಬದುಕು ಉಳಿಸಿಕೊಂಡ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ದುಬ್ಬಾ ತಾಂಡಾ ಗ್ರಾಮದ ಜನರು ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ.

ಕೊರೊನಾ ಹರಡುತ್ತಿದ್ದ ಕಾಲದಲ್ಲಿ ಸೋನು ಸೂದ್‌ ಅವರು ಸಾರ್ವಜನಿಕರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಒಳ್ಳೆಯ ಕೆಲಸಗಳಿಂದ ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ನಾವು ಅವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ. ಅವರು ನಮ್ಮ ಪಾಲಿನ ದೇವರು ಎಂದು ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಾಲ್ ರೆಡ್ಡಿ ಹೇಳಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಸೂದ್ ದೇಶದ 28 ರಾಜ್ಯಗಳ ಜನರಿಗೆ ಸಹಾಯ ಮಾಡಿದ್ದಾರೆ. ಅವರು ಜನರಿಗೆ ಸಹಾಯ ಮಾಡುತ್ತಿರುವ ವಿಧಾನವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ. ಅವರ ಮಾನವೀಯ ಕಾರ್ಯಗಳಿಗಾಗಿ ವಿಶ್ವಸಂಸ್ಥೆಯಿಂದ ಪ್ರಶಸ್ತಿಯನ್ನು ಪಡೆದರು. ಆದ್ದರಿಂದ, ನಮ್ಮ ಹಳ್ಳಿಯ ಪರವಾಗಿ, ನಾವು ಅವರಿಗೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ” ಎಂದು ದೇವಾಲಯ ನಿರ್ಮಾಣದ ಭಾಗವಾಗಿರುವ ರಮೇಶ್ ಕುಮಾರ್ ಹೇಳಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದ್ದ ವಲಸಿಗರು ತಮ್ಮ ತವರು ರಾಜ್ಯಗಳಿಗೆ ತಲುಪಲು ಸುರಕ್ಷಿತ ರಸ್ತೆ ಪ್ರಯಾಣದ ವ್ಯವಸ್ಥೆಯನ್ನು ಸೋನುಸೂದ್‌ ಮಾಡಿದ್ದರು. ಅವರು ಹಿಂದುಳಿತ, ಬಡ, ದೀನದಲಿತ ವರ್ಗಗಳ ಹಲವಾರು ದೇಶವಾಸಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ವಿಶ್ವದ 50 ಟಾಪ್ ಏಷ್ಯನ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸೋನು ಸೂದ್ಗೆ ಅಗ್ರಸ್ಥಾನ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights