ನನಗೂ ಐಪಿಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇತ್ತು; ರಚಿತಾ ರಾಮ್

‘ಕೊವಿಡ್​ ಸಾಂಕ್ರಾಮಿಕದ ವೇಳೆ ಪೊಲೀಸರ ಕಾರ್ಯಕ್ಕೆ ನಾನು ಮೆಚ್ಚುಗೆ ಸೂಚಿಸುತ್ತೇನೆ. ನಾನು ಐಪಿಎಸ್​ ಮಾಡಬೇಕು ಎಂಬ ಕನಸನ್ನು ಹೊಂದಿದ್ದೆ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

ಅವರ ನಟನೆಯ ‘ಲವ್​ ಯೂ ರಚ್ಚು’ ಸಿನಿಮಾ ಡಿಸೆಂಬರ್​ 31ರಂದು ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆ ಪ್ರಚಾರಕ್ಕಾಗಿ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ್ ಅವರು ರಚಿತಾಗೆ ಸನ್ಮಾನ ಮಾಡಿದ್ದಾರೆ. ಆ ಬಳಿಕ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ರಚಿತಾ ರಾಮ್, ‘ಕೊವಿಡ್​ ಸಾಂಕ್ರಾಮಿಕದ ವೇಳೆ ಪೊಲೀಸರ ಕಾರ್ಯಕ್ಕೆ ನಾನು ಮೆಚ್ಚುಗೆ ಸೂಚಿಸುತ್ತೇನೆ. ನಾನು ಐಪಿಎಸ್​ ಮಾಡಬೇಕು ಎಂಬ ಕನಸನ್ನು ಹೊಂದಿದ್ದೆ’ ಎಂದು ಹೇಳಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪೊಲೀಸರು ಮುಗಿಬಿದ್ದಿದ್ದಾರೆ.

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಶೂಟಿಂಗ್​ ವೇಳೆ ಹೈ ವೋಲ್ಟೇಜ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಸಿನಿಮಾ ಟ್ರೇಲರ್​ ಮೂಲಕ ಸದ್ದು ಮಾಡುತ್ತಿದೆ.

Spread the love

Leave a Reply

Your email address will not be published. Required fields are marked *