ಚೀನಾದ ಶ್ರೀಮಂತ, ಅಲಿಬಾಬಾ ಸಂಸ್ಥೆಯ ಸಂಸ್ಥಾಪಕ ಜಾಕ್‌ ಮಾ ನಾಪತ್ತೆ!

ಚೀನಾದ ಮೂರನೇ ಅತಿದೊಡ್ಡ ಶ್ರೀಮಂತ, ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಉದ್ಯಮಿ ಜಾಕ್​ ಮಾ ಎಲ್ಲಿದ್ದಾರೆ ಎಂಬ ಸುಳಿವಿಲ್ಲ. ಹೀಗಾಗಿ ಅವರು ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ.

ಚೀನಾ ಸರ್ಕಾರ ಹಾಗೂ ಜಾಕ್​ ಮಾ ನಡುವೆ ಉಂಟಾಗಿದ್ದ ಸಂಘರ್ಷದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕುತೂಹಲ ಕೆರಳಿಸಿದ್ದು, ಜಗತ್ತಿನ ಗಮನ ಸೆಳೆಯುತ್ತಿದೆ.

ಅವರದೇ ಸಂಸ್ಥೆಯೊಂದರಿಂದ ಆಯೋಜಿತ ಟಿವಿ ರಿಯಾಲಿಟಿ ಶೋನಲ್ಲಿ ಗಣ್ಯ ತೀರ್ಪುಗಾರರಾಗಿ ಜಾಕ್​ ಮಾ ಭಾಗವಹಿಸಬೇಕಿತ್ತು. ಇದೀಗ ಹಾಗೆ ಕಾಣಿಸಿಕೊಳ್ಳುವುದರಿಂದ ಜಾಕ್​ ಹಿಂದೆ ಸರಿದಿದ್ದು, ಆ ಕಾರ್ಯಕ್ರಮ ಕೂಡ ಮುಂದೂಡಲಾಗಿದೆ.

ಜಾಕ್​ ಮಾ ಚೀನಾ ಸರ್ಕಾರ ನಿರ್ಧಾರಗಳನ್ನು ಹಾಗೂ ಅಲ್ಲಿನ ಬ್ಯಾಂಕ್​ಗಳ ಹಿನ್ನಡೆಯನ್ನು ಟೀಕಿಸಿ ಬಹಿರಂಗವಾಗಿ ಮಾತನಾಡಿದ್ದರಿಂದ ಉಂಟಾದ ಸಂಘರ್ಷವೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಬಳಿಕ ಅಲ್ಲಿನ ಸರ್ಕಾರ ಜಾಕ್​ ಮಾಗೆ ಸಂಬಂಧಿತ ಆಯಂಡ್ ಫೈನಾನ್ಷಿಯಲ್​ನ ಐಪಿಒ ರದ್ದು ಮಾಡಿಸಿತ್ತು.

ಅಲ್ಲದೆ ಅಲಿಬಾಬಾ ಇ-ಕಾಮರ್ಸ್ ವಹಿವಾಟಿನ ಮೇಲೆ ವಿಶ್ವಾಸದ್ರೋಹದ ಆರೋಪ ಹೊರಿಸಿ ತನಿಖೆ ನಡೆಸಿತ್ತು. ಪರಿಣಾಮ ಅಲಿಬಾಬಾ ಷೇರು ಹಾಗೂ ಜಾಕ್​ ಮಾ ವೈಯಕ್ತಿಕ ಶ್ರೀಮಂತಿಕೆ ಕೂಡ ಕುಸಿದಿತ್ತು. ಈ ನಡುವೆ ಜಾಕ್​ ಮಾ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದಿರುವುದು ಹಲವು ಊಹಾಪೋಹ ಹಾಗೂ ಕುತೂಹಲಗಳಿಗೆ ಕಾರಣವಾಗಿದೆ.


ಇದನ್ನೂ ಓದಿ: ಪಾಕಿಸ್ಥಾನದಲ್ಲಿ ದೇವಾಲಯ ದ್ವಂಸ ಪ್ರಕರಣ; 08 ಪೊಲೀಸರ ಅಮಾನತು; 100 ಜನರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights