ಪಾಕಿಸ್ಥಾನದಲ್ಲಿ ದೇವಾಲಯ ದ್ವಂಸ ಪ್ರಕರಣ; 08 ಪೊಲೀಸರ ಅಮಾನತು; 100 ಜನರ ಬಂಧನ!

ಪಾಕಿಸ್ತಾನದ ಖೈಬರ್‌ ಪ್ರಾಂತ್ಯದ ತೆರಿ ಎಂಬ ಗ್ರಾಮದಲ್ಲಿದ್ದ ಹಿಂದೂ ಸಮುದಾಯದ ದೇವಾಲಯವನ್ನು ದ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 08 ಪೊಲೀಸರನ್ನು ಅಮಾನತು ಮಾಡಲಾಗಿದ್ದು, 100 ಜನರನ್ನು ಬಂಧಿಸಲಾಗಿದೆ ಎಂದು IndianExpress ವರದಿ ಮಾಡಿದೆ.

ಹಿಂದೂ ಸಮುದಾಯದ ಪ್ರಮುಖ ಗುರುವೋಬ್ಬರ ಸಮಾಧಿ ಸ್ಥಳವನ್ನು ಸಂಘಟನೆಯೊಂದರ ಕಾರ್ಯಕರ್ತರು ಧ್ವಂಸಗೈದಿದ್ದರು. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಲ್ಲಿನ ರಾಜ್ಯ ಸರ್ಕಾರ, ಹಿಂದೂ ಸಮುದಾಯದವರ ನೇತೃತ್ವದಲ್ಲೇ ದೇವಾಯಲಯವನ್ನು ಮರಳಿ ನಿರ್ಮಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ 45 ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಬಂಧಿತರಿಗೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ ಜಮೀಯತ್‌ ಉಲಮಾ ಇ ಇಸ್ಲಾಂ ಸಂಘಟನೆಯ ಪ್ರಮುಖ ಮುಖಂಡರನ್ನೂ ಬಂಧಿಸಲಾಗಿದೆ. 350ಕ್ಕೂ ಹೆಚ್ಚು ಆರೋಪಿಗಳ ಹೆಸರು ಎಫ್‌ಐಆರ್‌ ನಲ್ಲಿ ದಾಖಲಾಗಿದೆ ಎಂದು ವರದಿ ತಿಳಿಸಿದೆ.


ಇದನ್ನೂ ಓದಿ: ಹೆಣ್ಣುಮಕ್ಕಳ ವಿದ್ಯಾಭ್ಯಾಸ: ವಿದ್ಯಾರ್ಥಿನಿಯರಿಗೆ ಪ್ರತಿದಿನ 100 ರೂ. ಪ್ರೋತ್ಸಾಹಧನ ನೀಡುವುದಾಗಿ ಅಸ್ಸಾಂ ಸರ್ಕಾರ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights