ಗೋದಿ ಮೀಡಿಯಾ ಮೇಲೆ ನಂಬಿಕೆ ಇಲ್ಲ; ತಮ್ಮದೇ ಹೊಸ ಸುದ್ದಿಪತ್ರ ಆರಂಭಿಸಿದ ರೈತರು!

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ನ. 26ರಿಂ ಪ್ರತಿಭಟನೆ ನಡೆಸುತ್ತಿರುವ ರೈತರು ಮಾಧ್ಯಮಗಳ ವಿರುದ್ದ ಆಕ್ರೋಶಗೊಂಡಿದ್ದಾರೆ. ಮುಖ್ಯವಾಹಿನಿಯ ಮಾಧ್ಯಮಗಳ ಮೇಲೆ ತಮಗೆ ಭರವಸೆ, ನಂಬಿಕೆ ಇಲ್ಲಾ ಎಂದು ಹೇಳಿರುವ ರೈತರು, ತಮ್ಮದೇ ಸುದ್ದಿಪತ್ರವನ್ನು ಪ್ರಕಟಿಸಲು ಆರಂಭಿಸಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ರೈತರ ಈ ಸುದ್ದಿಪತ್ರಕ್ಕೆ ಟ್ರಾಲಿ ಟೈಮ್ಸ್‌ ಎಂದು ಹಸರಿಡಲಾಗಿದ್ದು, ಹಿಂದಿ ಭಾಷೆಯಲ್ಲಿ ಒಂದು ಪುಟ ಒಳಗೊಂಡಂತೆ ನಾಲ್ಕು ಪುಟಗಳ ವಾರದ ಸುದ್ದಿಪತ್ರವನ್ನು ಚಿತ್ರಕತೆಗಾರ ಸರ್ಮೀತ್‌ ಮಾವಿ ಮತ್ತು ಸಾಕ್ಷ್ಯಾಚಿತ್ರ ಛಾಯಾಗ್ರಾಹಕ ಗುರ್ದೀಪ್‌ ಸಿಂಗ್‌ ಧಲಿವಾಲಿ ಶುಕ್ರವಾರ ಪ್ರಾರಂಭಿಸಿದ್ದಾರೆ.

ಸುದ್ದಿಪತ್ರವು ಸುದ್ದಿ ವರದಿಗಳು, ಅಭಿಪ್ರಾಯ, ವ್ಯಂಗ್ಯಚಿತ್ರಗಳು ಮತ್ತು ಹೋರಾಟದ ಕವಿತೆಗಳನ್ನು ಹೊಂದಿದೆ.

ಗೋದಿ ಮಾಧ್ಯಮಗಳೇ ನಮ್ಮ ಹೋರಾಟದ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ರೈತರು, ತಮ್ಮದೇ ಸುದ್ದಿಪತ್ರವನ್ನು ಹೊರತಂದಿದ್ದಾರೆ.

ಸುದ್ದಿಪತ್ರದ ಸುಮಾರು 2,000 ಪ್ರತಿಗಳನ್ನು ಮೊದಲ ದಿನ ಮುದ್ರಿಸಲಾಗಿದೆ.

ಪ್ರತಿಭಟನಾ ನಿರತ ರೈತರಿಗೆ “ವೇದಿಕೆಯಿಂದ ಸಂದೇಶ, ಸರ್ಕಾರದೊಂದಿಗೆ ನಡೆಯುವ ಮಾತುಕತೆಗಳ ಮಾಹಿತಿ ಸೇರಿದಂತ ಪ್ರಮುಖ ವಿಷಯಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶವನ್ನು ಟ್ರಾಲಿ ಟೈಮ್ಸ್ ಹೊಂದಿದೆ ಎಂದು ಮಾವಿ  ತಿಳಿಸಿದ್ದಾರೆ.

“ಹೋರಾಟ ಆರಂಭವಾದ ಮೊದಲ ದಿನದಿಂದಲೂ ನಾನು ಇಲ್ಲಿದ್ದೇನೆ. ಟಿಕ್ರಿ ಮತ್ತು ಸಿಂಗು ಗಡಿಗಳಲ್ಲಿನ ಹೋರಾಟಗಳು ಹಲವಾರು ಕಿಲೋಮೀಟರ್‌ಗಳಲ್ಲಿ ಹರಡಿರುವುದನ್ನು ಗಮನಿಸಿದ್ದೇನೆ. ಪ್ರತಿಯೊಬ್ಬರಿಗೂ ವೇದಿಕೆಯಲ್ಲಿ ಮಾತನಾಡುವುದು ಕೆಲವೊಮ್ಮೆ ಅರ್ಥವಾಗುವುದಿಲ್ಲ. ಅವರು ಏನನ್ನು ಹೇಳಿದರು ಎಂದು ರೈತರು ಪರಸ್ಪರ ಕೇಳುತ್ತಾರೆ. ಅವರಿಗೆ ಮಾಹಿತಿ ನೀಡುವುದಕ್ಕಾಗಿ ಸುದ್ದಿಪತ್ರ ಉಪಯೋಗವಾಗಲಿದೆ” ಎಂದು ಅವರು ವಿವರಿಸಿದ್ದಾರೆ.

ಪ್ರತಿಭಟನಾಕಾರರು, ಯೂನಿಯನ್ ಮುಖಂಡರು ಮತ್ತು ಕೃಷಿ ಕಾನೂನು ತಜ್ಞರು ಸುದ್ದಿಪತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ.

“ಈ ಬಗ್ಗೆ ನಾವು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂದೇಶವನ್ನು ಹಾಕಿದ್ದೇವು. ಮೊದಲಿಗೆ ನಾವು ನಾಲ್ಕು ಪುಟಗಳನ್ನು ಭರ್ತಿ ಮಾಡುವ ಬಗ್ಗೆ ಚಿಂತೆ ಮಾಡುತ್ತಿದ್ದೆವು. ಆದರೆ ನೂರಾರು ಇಮೇಲ್‌ಗಳು ಬಂದಿವೆ. ನನ್ನಲ್ಲಿ ಕನಿಷ್ಠ 300 ಇಮೇಲ್‌ಗಳಿವೆ, ಅನೇಕ ಮೇಲ್‌ಗಳನ್ನು ನನಗೆ ಇನ್ನೂ ಓದಲು ಸಾಧ್ಯವಾಗಲಿಲ್ಲ” ಎಂದು ಧಲಿವಾಲ್ ತಿಳಿಸಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಮುಗಿಯದ ಬಿಕ್ಕಟ್ಟು; NSUI ರಾಷ್ಟ್ರೀಯ ಉಸ್ತುವಾರಿ ರುಚಿಗುಪ್ತ ರಾಜಿನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಗೋದಿ ಮೀಡಿಯಾ ಮೇಲೆ ನಂಬಿಕೆ ಇಲ್ಲ; ತಮ್ಮದೇ ಹೊಸ ಸುದ್ದಿಪತ್ರ ಆರಂಭಿಸಿದ ರೈತರು!

  • December 20, 2020 at 1:35 am
    Permalink

    I am a farmer. Know the real ground facts and problems of former. Joining this to support not only Indian farmers.

    Reply

Leave a Reply

Your email address will not be published.

Verified by MonsterInsights