ಕ್ಯಾಬಿನೆಟ್‌ ವಿಸ್ತರಣೆಗೂ ಮುನ್ನವೇ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ರಾಜೀನಾಮೆ!

ಇಂದು (ಬುಧವಾರ) ಸಂಜೆ ಕೇಂದ್ರ ಕ್ಯಾಬಿನೆಟ್‌ ವಿಸ್ತರಣೆಯಾಗುತ್ತದೆ ಎಂದು ಹೇಳಲಾಗಿದೆ. ಇದಕ್ಕೂ ಮುಂಚಿತವಾಗಿ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಹುದ್ದೆಯಲ್ಲಿದ್ದ ಗಂಗ್ವಾರ್ ಅವರು ಇಂದು ಬೆಳಗ್ಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

“ನಾನು ರಾಜೀನಾಮೆ ನೀಡಿದ್ದೇನೆ” ಎಂದು ಸ್ವತಃ ಸಂತೋಷ್‌ ಗಂಗ್ವಾರ್‌ ಅವರೇ ದೃಢಪಡಿಸಿದ್ದಾರೆ. ಅದರೆ, ಸಂಜೆ ವಿಸ್ತರಣೆಯಾಗಲಿರುವ ಕ್ಯಾಬಿನೆಟ್‌ನಲ್ಲಿ ಅವರ ಪಾತ್ರ ಏನು ಎಂದು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2019 ರ ಮೇನಲ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ರಚನೆಯಾದ ಸಂಪುಟದಲ್ಲಿ ಸಂತೋಷ್‌ ಗಂಗ್ವಾರ್‌ ಸಚಿವರಾಗಿದ್ದರು. ಇದೀಗ ಮೊದಲ ಬಾರಿಗೆ ಸಂಪುಟ ಪುನರ್ರಚನೆಯಾಗುತ್ತಿದ್ದು, ಸಂತೋಷ್‌ ರಾಜೀನಾಮೆ ನೀಡಿದ್ದಾರೆ.

ಸದ್ಯ ಸಂಜೆ ವಿಸ್ತರಣೆಯಾಗುವ ಕ್ಯಾಬಿನೆಟ್‌ನಲ್ಲಿ ಮಧ್ಯಪ್ರದೇಶದ ಜ್ಯೋತಿರಾಧಿತ್ಯಾ ಸಿಂಧಿಯಾ ಸೇರಿದಂತೆ ಕೆಲವು ಯುವಮುಖಗಳು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೊರೊನಾ: 25.50 ಕೋಟಿ ಉದ್ಯೋಗ ನಷ್ಟ; ಬಡತನಕ್ಕೆ ತುತ್ತಾಗಿದ್ದು 12.40 ಕೋಟಿ ಜನರು: ವಿಶ್ವಸಂಸ್ಥೆ ವರದಿ

Spread the love

Leave a Reply

Your email address will not be published. Required fields are marked *