ಡಿಕೆ ಶಿವಕುಮಾರ್ ಮುಂದಿನ ಕಾಂಗ್ರೆಸ್ ಸಿಎಂ : ‘ಬಂಡೆ’ ಪರ ನಲಪಾಡ್ ಬ್ಯಾಟಿಂಗ್!

ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಫೈಟ್ ಶುರುವಾಗಿದೆ. ಮುಂದಿನ ಕಾಂಗ್ರೆಸ್ ಸಿಎಂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ‘ಬಂಡೆ’ ಪರ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ನಲಪಾಡ್ ಬ್ಯಾಟಿಂಗ್ ಮಾಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಿದರೆ ನೀವೆಲ್ಲಾ ಓಟ್ ಹಾಕಿ ಗೆಲ್ಲಿಸಿದರೆ ಮುಂದಿನ ಕಾಂಗ್ರೆಸ್ ಸಿಎಂ ಡಿಕೆ ಶಿವಕುಮಾರ್ ಆಗುತ್ತಾರೆ ಎಂದು ಉಡುಪಿಯಲ್ಲಿ   ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿಕೆ ಕೊಟ್ಟಿದ್ದಾರೆ.

ಇಷ್ಟು ದಿನ ಸಿದ್ದರಾಮಯ್ಯ ಮುಂದಿನ ಕಾಂಗ್ರೆಸ್ ಸಿಎಂ ಎನ್ನಲಾಗುತ್ತಿತ್ತ. ಸದ್ಯ ಆ ಹೆಸರು ಡಿಕೆ ಶಿವಕುಮಾರ್ ಗೆ ಬದಲಾಗಿದೆ. ಮಂಗಳವಾರ ಮೀನುಗಾರ ಮಹಿಳೆಯರ ಜೊತೆ ನಲಪಾಡ್ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಮುಂದಿನ ಎರಡು ವರ್ಷದದಲ್ಲಿ ವಿಧಾನಸಭೆ ಚುನಾವಣೆ ಬರುತ್ತದೆ. ನೀವೆಲ್ಲರೂ ಓಟ್ ಹಾಕಿ ಗೆಲ್ಲಿಸಿದರೆ ಕಾಂಗ್ರೆಸ್ ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಹೇಳಿದ್ದಾರೆ.

ಈಗಾಗಲೇ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಆಗ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ರೇಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೆಸರು ಪದೇ ಪದೇ ಕೇಳಿ ಬರುತ್ತಿದ್ದು ಎರಡು ಬಣಗಳ ನಡುವೆ ಭಾರೀ ಫೈಟ್ ನಡೆಯುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights