ನಾಪತ್ತೆಯಾಗಿದ್ದ ವಿಮಾನ ಪತ್ತೆ; ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವು!

ನಾಪತ್ತೆಯಾಗಿದ್ದ ರಷ್ಯಾದ Antonov An-26 ವಿಮಾನವು ಬುಧವಾರ ಸಂಜೆ ಪತ್ತೆಯಾಗಿದೆ. ವಿಮಾನವು ಲ್ಯಾಂಡಿಂಗ್ ವೇಳೆಯಲ್ಲಿ ಅಪಘಾತಕ್ಕೆ ಈಡಾಗಿದೆ. ಹೀಗಾಗಿ ವಿಮಾನದಲ್ಲಿದ್ದ ಎಲ್ಲಾ 28 ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ತುರ್ತುಸೇವೆಗಳ ಇಲಾಖೆ ತಿಳಿಸಿದೆ.

ರಷ್ಯಾದ ಪೆಟ್ರೋಪಾವ್ಲೋಸ್ಕ್‌ ಕಮ್ಚಾಸ್ಕಿ ವಿಮಾನ ನಿಲ್ಧಾಣದಿಂದ ಪಲಾನಾ ನಿಲ್ಧಾಣಕ್ಕೆ ಹೊರಟಿದ್ದ Antonov An-26 ವಿಮಾನ ನಿಲ್ಧಾಣದಿಂದ ಸಂಪರ್ಕವನ್ನು ಕಳೆದುಕೊಂಡು ಕಣ್ಮರೆಯಾಗಿತ್ತು. ಇದು ಮಂದ ಬೆಳಕಿನ ಕಾರಣದಿಂದ ಲ್ಯಾಂಡಿಂಗ್ ವೇಳೆ ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಬೆಟ್ಟವೊಂದಕ್ಕೆ ಡಿಕ್ಕಿಹೊಡೆದು ಪತನಗೊಂಡಿದೆ ಎಂದು ಇಲಾಖೆ ತಿಳಿಸಿದೆ.

ಕಳೆದ ಹೋದ ವಿಮಾನವನ್ನು ಹುಡುಕಲು ರಷ್ಯಾದ ನಾಗರಿಕ ವಿಮಾನಯಾಯನ ಇಲಾಕೆಯು ಹೆಲಿಕ್ಯಾಪಟ್ಟರ್‌ಗಳನ್ನು ಕಳುಹಿಸಿ ಕೊಟ್ಟಿತ್ತು. ವಿಮಾನದಲ್ಲಿ 6 ಜನ ಸಿಬ್ಬಂದಿಗಳು ಮತ್ತು 22 ಇತರ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. 1982 ರಿಂದ ವಿಮಾನವು ಸೇವೆಯಲ್ಲಿ ಇದೆ ಎಂದು ರಷ್ಯಾದ ವಿಮಾನಯಾನ ಇಲಾಖೆ ಹೇಳಿದೆ.

ಇತ್ತೀಚೆಗೆ ರಷ್ಯಾದಲ್ಲಿ ವಿಮಾನದ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಸಹ ಕಳೆದ ಕೆಲ ವರ್ಷಗಳಲ್ಲಿ ವಿಮಾನ ದುರಂತಗಳು ನಡೆದಿವೆ. ಸೋವಿಯತ್ ಕಾಲದ ಹಳೆಯ ವಿಮಾನಗಳನ್ನು ನಾಗರಿಕ ಮತ್ತು ಮಿಲಿಟರಿ ಸೇವೆಗೆ ಬಳಸಿಕೊಳ್ಳುತ್ತಿರುವುದು ಹೆಚ್ಚಿನ ದುರಂತಗಳಿಗೆ ಕಾರಣ ಎನ್ನಲಾಗುತ್ತಿದೆ.

ರಷ್ಯಾ ಮೂಲದ ಸೋವಿಯತ್ ಕಾಲದ 12 ವಿಮಾನಗಳು ಇದುವರೆ ಅಪಘಾತಕ್ಕೆ ಈಡಾಗಿವೆ. Antonov An-26 ಮಾದರಿಯ ಮತ್ತೊಂದು ವಿಮಾನ ರಷ್ಯಾದ ಕಮಚಾತ್ಕ ಅರಣ್ಯ ಪ್ರದೇಶದಲ್ಲಿ 2012 ರಲ್ಲಿ ಅಪಘಾತಕ್ಕೆ ಈಡಾಗಿತ್ತು. 10 ಜನ ಪ್ರಯಾಣಿಕರು ಈ ಅಪಘಾತದಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ: ರಾಫೇಲ್‌ ಯುದ್ದ ವಿಮಾನ ಭ್ರಷ್ಟಾಚಾರ; ಸ್ವಾಮಿನಿಷ್ಠೆ ಪ್ರದರ್ಶಿಸಿದ ಪತ್ರಿಕೆಗಳು!

Spread the love

Leave a Reply

Your email address will not be published. Required fields are marked *