ಪ್ಯಾರಾಲಿಂಪಿಕ್ಸ್: ಚಿನ್ನ ಗೆದ್ದು ವಿಶ್ವ ದಾಖಲೆ ಬರೆದ ಸುಮಿತ್ ಆಂಟಿಲ್!
ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ (ಎಫ್ 64) ನಲ್ಲಿ ಭಾರತದ ಸುಮಿತ್ ಆಂಟಿಲ್ ಚಿನ್ನ ಗೆಲ್ಲುವುದರೊಂದಿಗೆ ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಸುಮಿತ್ ಆಂಟಿಲ್ ಒಂದಲ್ಲ, ಎರಡಲ್ಲ ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದಿದ್ದಾರೆ!.
ಸುಮಿತ್ ಆಂಟಿಲ್ ಮೊದಲ ಪ್ರಯತ್ನದಲ್ಲಿ ಈಟಿಯನ್ನು 66.95 ಮೀ. ದೂರ ಎಸೆದು ವಿಶ್ವ ದಾಖಲೆ ಸೃಷ್ಟಿಸಿದರು. ನಂತರ ತನ್ನ ಎರಡನೆ ಎಸೆತದಲ್ಲಿ ಅದನ್ನು ಮುರಿದು ಮತ್ತೊಂದು ದಾಖಲೆ ಸೃಷ್ಟಿಸಿದರು. ನಂತರ ತನ್ನ ಐದನೇ ಪ್ರಯತ್ನದಲ್ಲಿ, ಮತ್ತೊಮ್ಮೆ 68.55 ಮೀಟರ್ ಎಸೆತದೊಂದಿಗೆ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಪುಣೆ ಕ್ರೀಡಾಂಗಣಕ್ಕೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಹೆಸರು!
ಸುಮಿತ್ ಜೊತೆಗೆ ಸ್ಪರ್ಧಿಸಿದ್ದ ಭಾರತದ ಆಟಗಾರ ಸಂದೀಪ್ ಚೌಧರಿ 62.20 ಮೀ ಎಸೆತದೊಂದಿಗೆ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದ್ದಾರೆ.
ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ಒಂದೇ ದಿನದಲ್ಲಿ ಎರಡನೇ ಚಿನ್ನದ ಪಡೆದು ಸಂಭ್ರಮಿಸಿದೆ. ಇದಕ್ಕೂ ಮೊದಲು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಶೂಟರ್ ಅವನಿ ಲೇಖರಾ ಪಾತ್ರರಾದರು.
https://twitter.com/ParalympicIndia/status/1432307007386570761?s=20
ಜಾವೆಲಿನ್ ಥ್ರೋನ ಇತರ ವಿಭಾಗದಲ್ಲಿ ಭಾರತ ಇಂದು ಉತ್ತಮವಾಗಿ ಆಡಿದೆ. ಪುರುಷರ ಜಾವೆಲಿನ್ (ಎಫ್ 46) ಫೈನಲ್‌ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಮತ್ತು ಸುಂದರ್ ಸಿಂಗ್ ಗುರ್ಜಾರ್ ಕಂಚು ಗೆದ್ದಿದ್ದಾರೆ. ಈಗಾಗಲೇ ಏಳು ಪದಕಗಳನ್ನು ಪಡೆದಿರುವ ಭಾರತವು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ತನ್ನ ಅತ್ಯುತ್ತಮ ದಾಖಲೆಯನ್ನು ನಿರ್ಮಿಸಿದೆ.
ಇದನ್ನೂ ಓದಿ: ಟೊಕಿಯೊ ಪ್ಯಾರಾಲಿಂಪಿಕ್ಸ್: ಟೇಬಲ್ ಟೆನ್ನಿಸ್ ನಲ್ಲಿ ಚಿನ್ನ ಗೆದ್ದ ಭಾವಿನಾ ಪಟೇಲ್!