ಪುಣೆ ಕ್ರೀಡಾಂಗಣಕ್ಕೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಹೆಸರು!

ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಆವರಣದಲ್ಲಿರುವ ಕ್ರೀಡಾಂಗಣಕ್ಕೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಹೆಸರಿಡಲಾಗಿದೆ.

ಪುಣೆ ಕಂಟೋನ್ಮೆಂಟ್‌ನಲ್ಲಿರುವ ಈ ಕ್ರೀಡಾಂಗಣವನ್ನು ‘ನೀರಜ್ ಚೋಪ್ರಾ ಆರ್ಮಿ ಸ್ಪೋರ್ಟ್ಸ್ ಸ್ಟೇಡಿಯಂ’ ಎಂದು ಹೆಸರಿಸಲಾಗಿದೆ.

ಇಂದು ಕ್ರೀಡಾಂಗಣದ ಅಧಿಕೃತ ನಾಮಕರಣ ಸಮಾರಂಭ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ನಡೆಸಲಿದ್ದಾರೆ. ಈ ವೇಳೆ ಸಿಂಗ್ ಅವರ ಜೊತೆ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರ್ವಾನೆ ಮತ್ತು ಲೆಫ್ಟಿನೆಂಟ್ ಗವರ್ನರ್ ಜೆಎಸ್ ನೈನ್ ಇರಲಿದ್ದಾರೆ.

ಅವರ ಭೇಟಿಯಲ್ಲಿ, ಸಿಂಗ್ ಇತರ ಹದಿನಾರು ಒಲಿಂಪಿಯನ್‌ಗಳಿಗೆ ಹಲವು ರೀತಿಯ ಅನುಕೂಲ ಮಾಡಿಕೊಡುತ್ತಾರೆ ಮತ್ತು ಕ್ರೀಡಾಂಗಣದ ನಾಮಕರಣ ಸಮಾರಂಭವನ್ನು ನಡೆಸಲಿದ್ದಾರೆ. ಉದಯೋನ್ಮುಖ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ನೀರಜ್ ಅವರು ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರನ್ನು ಭಾರತ ಸರ್ಕಾರ, ಕ್ರೀಡಾ ಸಚಿವಾಲಯ, ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಭಾರತೀಯ ಸೇನೆಯಿಂದ ಗೌರವಿಸಲಾಗಿದೆ.

ಇದನ್ನೂ ಓದಿ: ICC T-20 ವೇಳಾಪಟ್ಟಿ ಪ್ರಕಟ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮೊದಲ ಹಣಾಹಣಿ!

Spread the love

Leave a Reply

Your email address will not be published. Required fields are marked *