FACT CHECK | 2025ರ ಮಹಾಕುಂಭ ಮೇಳ ನೋಡಲು ಉತ್ತರ ಪ್ರದೇಶಕ್ಕೆ ಬಂದ್ರಾ ಬಿಲ್‌ಗೇಟ್ಸ್‌?

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ ಆರಂಭವಾಗಿರುವ ಮಹಾಕುಂಭ ಮೇಳೆ ಅದ್ಧೂರಿಯಾಗಿ ಸಾಗುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾಕುಂಭದಲ್ಲಿ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಬರುತ್ತಿದ್ದಾರೆ. ಇದರಲ್ಲಿ ವಿದೇಶಿಯರೂ ಸೇರಿದ್ದಾರೆ. ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರ ವೈರಲ್ ಆಗುತ್ತಿದೆ. ಅದನ್ನು ಹಂಚಿಕೊಳ್ಳುವಾಗ, ಬಿಲ್ ಗೇಟ್ಸ್ ಕೂಡ ಮಹಾ ಕುಂಭಮೇಳಕ್ಕೆ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ.

2025ರ ಮಹಾಕುಂಭಮೇಳ ನಡೆಯುವ ಈ ಸಂದರ್ಭದಲ್ಲಿ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಭೇಟಿ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನೋಡಬಹುದು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಸಾಫ್ಟ್‌ವೇರ್‌ನ ದಿಗ್ಗಜ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿರುವುದು ನಿಜವೇ ಎಂದು ಪರಿಶೀಲಿಸಲು, ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಬಿಲ್ ಗೇಟ್ಸ್‌ ಭೇಟಿಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ. ಬಿಲ್ ಗೇಟ್ಸ್ ಅವರ ಸಾಮಾಜಿಕ ಮಾಧ್ಯಮಗಳ ಖಾತೆಗಳು ಸಹ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಬಗ್ಗೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ.  ಫೆಬ್ರವರಿ 2024 ರಲ್ಲಿ ಬಿಲ್ ಗೇಟ್ಸ್‌ ಭಾರತಕ್ಕೆ ನೀಡಿದ್ದಾರೆ. ಅದರ ನಂತರ ಅವರು ಭಾರತಕ್ಕೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ವೈರಲ್ ಫೋಟೋವನ್ನು ಗೂಗಲ್‌ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 24, 2024 ರಂದು ‘ಗುಲ್ಲಕ್‘ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ವಿಡಿಯೋದ ವಿವರಣೆಯ ಪ್ರಕಾರ ವಾರಣಾಸಿಯಲ್ಲಿ ಬಿಲ್ ಗೇಟ್ಸ್‌ರನ್ನು ಹೋಲುವ ವ್ಯಕ್ತಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.ಇದೇ ಚಾನೆಲ್‌ನಲ್ಲಿ ಅದೇ ವ್ಯಕ್ತಿಯ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅವರನ್ನು ವಾರಣಾಸಿಯ ಮಣಿಕರ್ಣಿಕಾ ಘಾಟ್‌ಗೆ ಭೇಟಿ ನೀಡಿದ “ನಕಲಿ ಬಿಲ್ ಗೇಟ್ಸ್” ಎಂದು ವಿಡಂಬನಾತ್ಮಕವಾಗಿ ಉಲ್ಲೇಖಿಸಿದೆ.

ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ದೋರದಿಂದ ನೋಡಿದಾಗ ಬಿಲ್‌ಗೇಟ್ಸ್‌ ಹೋಲಿಕೆಯನ್ನು ಹೊಂದಿರುವಂತೆ ಕಾಣುತ್ತಾರೆ. ಆದರೆ ಹತ್ತಿರಕ್ಕ ಹೋಗಿ ನೋಡಿದರೆ ಆತನ ಮುಖ ಚಹರೆ ಸ್ಪಷ್ಟವಾಗಿ ಆತ ಬಿಲ್ ಗೇಟ್ಸ್‌ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆಜ್ ತಕ್‌ನ ವರದಿಗಾರ ದೀಪಂಕರ್ ಯಾದವ್ ಅವರೊಂದಿಗೆ ಫ್ಯಾಕ್ಟ್‌ಲೀ ತಂಡ ಮಾತನಾಡಿದಾಗ, ಅವರು ನವೆಂಬರ್ 2024ರಲ್ಲಿ ವಾರಣಾಸಿಗೆ ಭೇಟಿ ನೀಡಿದಾಗ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ತಿಳಿಸಿದ್ದಾರೆ. ಅವರು ಮಣಿಕರ್ಣಿಕಾ ಘಾಟ್‌ನಲ್ಲಿದ್ದಾಗ, ಘಾಟ್ ಬಳಿಯ ಬಾಲ್ಕನಿಯಲ್ಲಿ ನಿಂತಿದ್ದ ವಿದೇಶಿಯರ ಗುಂಪನ್ನು ನೋಡಿದರು. ಅವರಲ್ಲಿ ಒಬ್ಬರು ಬಿಲ್ ಗೇಟ್ಸ್ ಅವರನ್ನು ಹೋಲುತ್ತಿದ್ದಾರೆ ಎಂದು ಅವರು ಭಾವಿಸಿ. ಮನರಂಜನೆಗಾಗಿ ವಿಡಿಯೋವನ್ನು ರೆಕಾರ್ಡ್‌ ಮಾಡಿ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಂಬಂಧವಿಲ್ಲದ ವಿದೇಶಿ ಪ್ರವಾಸಿಯ ಹಳೆಯ ವಿಡಿಯೋವನ್ನು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

(This story was originally published by FACTLY, and republished by Ensuddi.com as part of the Shakti Collective)

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights